Advertisement

ನವತರುಣ ಮಿತ್ರ ಮಂಡಳ&ಭ್ರಾಮರಿ ಫ್ರೆಂಡ್ಸ್‌:ವಾರ್ಷಿಕೋತ್ಸವಕ್ಕೆ ಚಾಲನೆ

01:06 PM Aug 01, 2018 | Team Udayavani |

ಮುಂಬಯಿ: ಪ್ರಫುಲ್ಲ  ಚಿಂತನೆಗಳ, ಶುದ್ಧ ಮನಸ್ಸಿನ, ಧನಾತ್ಮಕ ಯೋಜನೆಗಳ ಸಂಸ್ಕೃತಿಯನ್ನು ತುಳುವರು ಮೈಗೂಡಿಸಿಕೊಂಡಿದ್ದಾರೆ. ಹಬ್ಬದಿಂದ ಹಬ್ಬಕ್ಕೆ ಬದಲಾಗುವ ಕರಾವಳಿ ಜನತೆಯ ತಿಂಡಿಗಳು, ಆಚರಣೆ, ಆರಾಧನೆಯ ಹೆಸರಿನಲ್ಲಿ ಸೇವಿಸುವ ಔಷಧಯುಕ್ತ ಪದಾರ್ಥಗಳನ್ನು  ತುಳುವರಲ್ಲಿ ಮಾತ್ರ ಕಾಣಲು ಸಾಧ್ಯ. ಪವಿತ್ರ ಸ್ಥಳಗಳನ್ನು ಹೊಂದಿರುವ ತುಳುನಾಡು ಧರ್ಮ ರಕ್ಷಣೆಯ ತಾಣವಾಗಿದೆ ಎಂದು ಪತ್ತನಾಜೆ ತುಳು ಚಲನಚಿತ್ರದ ನಿರ್ದೇಶಕ ಕಲಾಜಗತ್ತಿನ ಡಾ| ವಿಜಯ ಕುಮಾರ್‌ ಶೆಟ್ಟಿ  ತೋನ್ಸೆ ಅವರು ನುಡಿದರು.

Advertisement

ಮೀರಾರೋಡ್‌ ಪೂರ್ವದ ಪೂನಂ ಸಾಗರ್‌ ಸಮೀಪದ ಮೀರಾಲಾನ್‌ ಸಭಾಗೃಹದಲ್ಲಿ ನಡೆದ ನವ ತರುಣ ಮಿತ್ರ ಮಂಡಳ ಹಾಗೂ ಭಾÅಮರಿ ಫ್ರೆಂಡ್ಸ್‌ ಇದರ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ಮತ್ತು ಧಾರ್ಮಿಕತೆಯ ಮಾಧ್ಯಮವಾಗಿರುವ ಯಕ್ಷಗಾನ ಸನ್ನಡತೆಯ ವೇದಿಕೆಯಾಗಿದೆ. ಯುವ ಶಕ್ತಿಯ ಸರಿಯಾದ ಸದ್ಬಳಕೆ ತರುಣ ಮಿತ್ರ ಮಂಡಳಿ ಮಾಡುತ್ತಿರುವುದು ಸ್ತುತ್ಯರ್ಹ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಸ್ವಾಗತಿಸಿ ಅತಿಥಿ-ಗಣ್ಯರನ್ನು ಗೌರವಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ರಾಜೇಶ್‌ ಶೆಟ್ಟಿ ತೆಳ್ಳಾರ್‌, ಕಲಾಪೋಷಕರುಗಳಾದ ಐಕಳ ಆನಂದ ಶೆಟ್ಟಿ, ವಿಶ್ವನಾಥ ಎಂ. ಸಾಲ್ಯಾನ್‌, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಸಿದ್ಧಕಟ್ಟೆ ರಮೇಶ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಯೋಗೀಶ್‌ ಗಾಣಿಗ, ಮಲ್ಲಿಕಾ ಯಶವಂತ ಶೆಟ್ಟಿ, ಅಮಿತಾ ಕಿಶೋರ್‌ ಶೆಟ್ಟಿ, ಯಕ್ಷಗಾನ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ, ಲೀಲಾ ಡಿ. ಪೂಜಾರಿ, ದಿನೇಶ್‌ ಶೆಟ್ಟಿ ಕೊಡವೂರು ಹಾಗೂ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಲೇಖಕ ಅರುಣ್‌ ಕುಮಾರ್‌ ಶೆಟ್ಟಿ ಎರ್ಮಾಳ್‌ ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾರಂಭದಲ್ಲಿ ಬಂಟ್ಸ್‌ ಸಂಘ ಮುಂಬಯಿ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ, ಬಂಟ್ಸ್‌ ಫೋರಂ ಮೀರಾ-ಭಾಯಂದರ್‌, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ ಸದಸ್ಯ ಬಾಂಧವರಿಂದ ಭಜನ ಕಾರ್ಯಕ್ರಮ ನಡೆಯಿತು.

Advertisement

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಸಂಯೋಜನೆಯಲ್ಲಿ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಬಳಗ ಸುರತ್ಕಲ್‌ ಇದರ ಕಲಾವಿದರುಗಳಿಂದ ಪೂರ್ಣಿಮಾ ಯತೀಶ್‌ ರೈ ಇವರ ನಿರ್ದೇಶನದಲ್ಲಿ ಸುದರ್ಶನ ವಿಜಯ-ಭಾರ್ಗವ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. 

ಸಮಾಜಮುಖೀ ಚಿಂತನೆ 
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ ಅವರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 13 ವರ್ಷಗಳ ಹಿಂದೆ ಸ್ಥಾಪನೆಗೊಂಡ ನಮ್ಮಿà ಸಂಸ್ಥೆ ಸಮಾಜಮುಖೀ ಚಿಂತನೆಗಳತ್ತ ಗಮನಹರಿಸಿದೆ. ಅನಾಥಾಶ್ರಮ, ವೃದ್ಧಾಶ್ರಮ, ದುಬಾರಿ ಚಿಕಿತ್ಸೆಗಳಿಗೆ ನೆರವು ನೀಡಿ ಸಹಕರಿಸಿದ್ದೇವೆ. ರಕ್ತದಾನದ ಮೂಲಕ ಸುಮಾರು 650 ಯುನಿಟ್‌ ರಕ್ತವನ್ನು ಆಸ್ಪತ್ರೆಗೆ ನೀಡಿದ್ದೇವೆ. ಉಳ್ಳವರಿಂದ ಪಡೆದು ಅರ್ಹ ವ್ಯಕ್ತಿಗಳಿಗೆ ಸಹಕರಿಸುವುದು ನಮ್ಮ ಧ್ಯೇಯವಾಗಿದೆ ಎಂದರು.

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next