Advertisement

Navaratri ಇಂದಿನ ಆರಾಧನೆ ಮಹಿಷನ ಸಂಹಾರ ಮಾಡಿದ ದೇವಿ

01:25 AM Oct 20, 2023 | Team Udayavani |

ಆದಿಶಕ್ತಿಯ ನವವಿಧ ರೂಪಗಳಲ್ಲಿ ಆರನೆಯ ರೂಪವನ್ನು “ಕಾತ್ಯಾಯನೀ’ ಎಂಬ ಹೆಸರಿನಿಂದ ಕರೆಯುತ್ತಾರೆ. ವರರುಚಿ ಮಹರ್ಷಿಗಳು ವಿಶ್ವಾಮಿತ್ರರ ಕಾತ್ಯ ವಂಶದಲ್ಲಿ, ಗೋತ್ರದಲ್ಲಿ ಜನಿಸಿದ್ದರಿಂದ, ಅವರನ್ನು ಕಾತ್ಯಾಯನ ಎಂದು ಕರೆಯುತ್ತಾರೆ. ಇವರು ಒಮ್ಮೆ ದೇವಿಯು ತಮ್ಮ ಮಗಳಾಗಿ ಜನಿಸಬೇಕೆಂಬ ಸಂಕಲ್ಪದಿಂದ ಘೋರ ತಪಸ್ಸನ್ನು ಕೈಗೊಂಡರು. ಪ್ರತಿಫಲವಾಗಿ ವರವನ್ನು ಪಡೆದರು. ಕಾತ್ಯಾಯನರ ಪುತ್ರಿಯಾಗಿ ಜನಿಸಿದ ದೇವಿಯು “ಕಾತ್ಯಾಯನೀ’ ಎಂದು ಪ್ರಸಿದ್ಧಳಾದಳು. ಮಹಿಷಾಸುರನ ಕಾಟವನ್ನು ತಾಳಲಾರದೆ ಋಷಿ-ಮುನಿಗಳು ದೇವಿಯನ್ನು ಸಹಾಯಕ್ಕೆಂದು ಪ್ರಾರ್ಥಿಸಿದರು. ಆ ಸಮಯದಲ್ಲಿ ಪ್ರತಿಯೊಬ್ಬ ದೇವತೆಯೂ ತನ್ನ ವಿಶೇಷ ಶಕ್ತಿ ಅಥವಾ ಆಯುಧವನ್ನು ದೇವಿಗೆ ನೀಡಿದನು. ಆಕೆಯ ವಿಶೇಷ ರೂಪವನ್ನು ಕಾತ್ಯಾಯನ ಋಷಿಯು ಮೊದಲು ಆರಾಧಿಸಿದ್ದರಿಂದ ದೇವಿಯನ್ನು “ಕಾತ್ಯಾಯನಿ’ ಎಂದು ಕರೆದರು ಎಂದು ಇನ್ನೊಂದು ವಾದ.

Advertisement

ಭಾದ್ರಪದ ಕೃಷ್ಣ ಚತುರ್ದಶಿಯಂದು ಈಕೆಯು ಅವತರಿಸಿ, ಆಶ್ವಯುಜ ಶುಕ್ಲ ಸಪ್ತಮಿ, ಅಷ್ಟಮಿ, ನವಮಿ – ಈ ಮೂರು ದಿವಸಗಳ ಕಾಲ ಕಾತ್ಯಾಯನ ಮಹರ್ಷಿಗಳ ಪೂಜೆಯನ್ನು ಸ್ವೀಕರಿಸಿ, ದಶಮಿಯಂದು ಮಹಿಷಾಸುರನನ್ನು ಸಂಹರಿಸಿದಳು ಎಂದು ನಾವು ಪುರಾಣಗಳಲ್ಲಿ ಓದುತ್ತೇವೆ. ಗೋಪಿಕೆಯರು ಭಗವಾನ್‌ ಶ್ರೀಕೃಷ್ಣನನ್ನು ತಮ್ಮ ಪತಿಯನ್ನಾಗಿ ಪಡೆಯಬೇಕೆಂಬ ಬಯಕೆಯಿಂದ ಯಮುನೆಯ ತೀರದಲ್ಲಿ ದೇವಿ ಕಾತ್ಯಾಯಿನಿ ವ್ರತವನ್ನು ಕೈಗೊಂಡಿದ್ದರು. ನವರಾತ್ರಿಯ ಆರನೇ ದಿವಸ ಷಷ್ಠಿà ತಿಥಿಯಂದು ಕಾತ್ಯಾಯನೀ ಪೂಜೆ ನಡೆಯುತ್ತದೆ. ಅದರಿಂದ ಸಾಧಕನ ಮನಸ್ಸು ಆಜ್ಞಾಚಕ್ರದಲ್ಲಿ ನೆಲೆಸಲು ಸಾಧ್ಯವಾಗುತ್ತದೆ. ಭಕ್ತನು ಚತುರ್ವಿಧ ಪುರುಷಾರ್ಥಗಳನ್ನು ಹೊಂದುತ್ತಾನೆ.
ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ ಐ
ಕಾತ್ಯಾಯನೀ ಶುಭಂ ದದ್ಯಾತ್‌ ದೇವೀ ದಾನವಘಾತನೀ ಐಐ
“”ದೇವೀ ಕಾತ್ಯಾಯನಿಯು ಮಂದಹಾಸದ ಮುಖಾರವಿಂದದಿಂದ ಕೂಡಿದ್ದು, ಶಾದೂìಲದ ಮೇಲೆ ಆಸೀನಳಾಗಿದ್ದಾಳೆ. ಹೇ ದೇವೀ, ದಾನವರನ್ನು ಸಂಹಾರ ಮಾಡಿ ರು ವವಳೇ, ಶುಭವನ್ನು ನೀಡುವ ಜಗನ್ಮಾತೆಯೇ! ನಿನಗೆ ನನ್ನ ಅನಂತಕೋಟಿ ಪ್ರಣಾಮಗಳು.”

 ಸ್ವಾಮಿ ಶಾಂತಿವ್ರತಾನಂದಜೀ
ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next