Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

03:37 PM Oct 17, 2021 | Team Udayavani |

ನವಿಮುಂಬಯಿ: ಕಾರಣಿಕ ಕ್ಷೇತ್ರ ಎಂದೇ ಬಿಂಬಿತಗೊಂಡಿರುವ ತುಳು-ಕನ್ನಡಿಗರ ಪ್ರತಿಷ್ಠಿತ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 49ನೇ ವಾರ್ಷಿಕ ನವರಾತ್ರಿ ಮಹೋತ್ಸವವು ಅ. 7ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಪ್ರಾರಂಭಗೊಂಡು ಅ. 16ರಂದು ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಂಪನ್ನಗೊಂಡಿತು.

Advertisement

ಅ. 15ರಂದು ಮಧ್ಯಾಹ್ನ ಮಹಾಪೂಜೆ,ಸಂಜೆ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯ ನಾರಾಯಣ ಮಹಾಪೂಜೆ, ರಾತ್ರಿ 8.30 ರಿಂದ ಮಹಾಪೂಜೆ, ಪಲ್ಲಕಿಯಲ್ಲಿ ಸಪ್ತಸತಿ ಪುಸ್ತಕದ ಮೆರವಣಿಗೆ, ಬಳಿಕ ತೀರ್ಥ ಪ್ರಸಾದ, ಅನ್ನಸಂತರ್ಪಣೆ ಜರಗಿತು. ಅ. 14ರಂದು ಬೆಳಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ದುರ್ಗಾಹೋಮ, ದೇವಿಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಅಪರಾಹ್ನ 1ರಿಂದ ಸಾರ್ವಜನಿಕ ಅನ್ನಸಂತ ರ್ಪಣೆಯನ್ನು ಆಯೋಜಿಸಲಾಗಿತ್ತು.

ಧಾರ್ಮಿಕ ಕಾರ್ಯಕ್ರಮವಾಗಿ ಅ. 7ರಿಂದ 15ರ ವರೆಗೆ ಪ್ರತೀದಿನ ಬೆಳಗ್ಗೆ 6.30ರಿಂದ ಉಷಾಕಾಲ ಪೂಜೆ, ಬೆಳಗ್ಗೆ 9ರಿಂದ ನಿತ್ಯ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ 6ರಿಂದ ವಿವಿಧ ಭಜನ ಮಂಡಳಿಯವರಿಂದ ಭಜನೆ, ರಾತ್ರಿ 8.30ರಿಂದ ಮಹಾಪೂಜೆ, ರಂಗಪೂಜೆ, ಭಕ್ತರಿಂದ ಸರ್ವ ಸೇವಾ ಪೂಜೆ, ರಾತ್ರಿ 9ರಿಂದ ಭಜನೆ, ಮಂಗಳ, ಮಂಗಳಾರತಿ ನೆರವೇರಿತು. ಅ. 9ರಂದು ಬೆಳಗ್ಗೆ ಶ್ರೀ ಮಹಾಗಣಪತಿ ದೇವರಿಗೆ ಪಂಚಾ ಮೃತ ಅಭಿಷೇಕ, ತ್ರಿನಾಳಿಕೇರ ಮಹಾ ಗಣಪತಿ ಹೋಮ, ಮಹಾಪೂಜೆ ಜರಗಿತು.

ನವರಾತ್ರಿ ಮಹೋತ್ಸವದ ಎಲ್ಲ ದೇವತಾ ವೈದಿಕ ಕಾರ್ಯಕ್ರಮಗಳು ದೇವಾಲಯದ ತಂತ್ರಿ ವಿದ್ವಾನ್‌ ರಾಮಚಂದ್ರ ಬಾಯಾರ್‌ ಮತ್ತು ಪ್ರಧಾನ ಅರ್ಚಕ ಗುರುಪ್ರಸಾದ್‌ ವಿ. ಭಟ್‌ ಪೌರೋಹಿತ್ಯದಲ್ಲಿ  ನೆರವೇರಿತು. ಸಹಅರ್ಚಕರಾದ ಬಪ್ಪನಾಡು ಸುಧೀಂದ್ರ ಭಟ್‌, ನಾಗರಾಜ್‌ ಭಟ್‌, ಅಶೋಕ್‌ ಭಟ್‌ ಮೊದಲಾದವರು ಸಹಕರಿಸಿದರು.

ಪ್ರತೀವರ್ಷ ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬಂದಿರುವ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ  ಕಳೆದೊಂದು ವರ್ಷದಿಂದ ಸರಕಾರದ ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಪ್ರಸ್ತುತ ವರ್ಷ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ  ಜರಗಿದ ಈ ಉತ್ಸವದಲ್ಲಿ ಉಪಾಧ್ಯಕ್ಷರಾದ ನಂದಿಕೂರು ಜಗದೀಶ್‌ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಕೆ. ಶೆಟ್ಟಿ, ಸಮಿತಿಯ ಸರ್ವಸದಸ್ಯರು, ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯೆಯರು ಹಾಗೂ ಯುವ ವಿಭಾಗದ ಸದಸ್ಯರು, ಭಕ್ತರು ಸಹಕರಿಸಿದರು.

ಅ. 16ರಂದು ಸಂಜೆ 5ರಿಂದ ಮಹಾರಾಷ್ಟ್ರ ಹೊಟೇಲ್‌ ಫೆಡರೇಶನ್‌ನ ಅಧ್ಯಕ್ಷ ಜಗನ್ನಾಥ್‌ ಕೆ. ಶೆಟ್ಟಿಯವರ ಸೇವಾ ರೂಪದಲ್ಲಿ  ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಇವರಿಂದ “ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸರಕಾರದ ಕೊರೊನಾ ಮಾರ್ಗಸೂಚಿಗಳನ್ನು ಅನು ಸರಿಸಿಕೊಂಡು ಭಕ್ತರು ಪಾಲ್ಗೊಂಡು ದೇವಿಯ ಅನುಗ್ರಹಕ್ಕೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next