Advertisement

Navaratri: ಅ.3ರಿಂದ ಕೊಟ್ಟಿಗೆಹಾರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಆರಂಭ

09:16 PM Oct 01, 2024 | Team Udayavani |

ಕೊಟ್ಟಿಗೆಹಾರ: ಇಲ್ಲಿನ ಸೀತಾರಾಮ ದೇವಸ್ಥಾನದಲ್ಲಿ ಅ.3ರಿಂದ 12 ರವರೆಗೆ 62ನೇ ಶರನ್ನವರಾತ್ರಿ ಉತ್ಸವ ಆರಂಭವಾಗಲಿದೆ. ಅದಕ್ಕೆ ಸಿದ್ದತೆಯೂ ನಡೆಯುತ್ತಿದೆ.

Advertisement

ದೇವಸ್ಥಾನ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪಟ್ಟಣವೂ ವಿದ್ಯುತ್ ಅಲಂಕಾರದಿಂದ ಶೋಭಿಸುತ್ತಿದೆ. ಅ.3 ರ ಗುರುವಾರ ಸಂಜೆ 6 ರಿಂದ 9 ಗಂಟೆವರೆಗೆ ಸಮಿತಿಯವರಿಂದ ಭಜನಾ ಕಾರ್ಯಕ್ರಮ, ನಂತರ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಅ. 4ರ ಶುಕ್ರವಾರ ಸಂಜೆ ತರುವೆ ಶ್ರೀ ಶಕ್ತಿಗಣಪತಿ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ, 5 ರ ಶನಿವಾರ ರಾಮನಗರ ಶ್ರೀಮಾರುತಿ ಭಜನಾ ಮಂಡಳಿ ಭಜನಾ ಕಾರ್ಯಕ್ರಮ, 6 ರ ಭಾನುವಾರ ಸಂಜೆ ಅಜಾದ್ ನಗರ ಶಬರಿಗಿರಿ ಭಜನಾ ಮಂಡಳಿ ವತಿಯಿಂದ ಭಜನೆ, 7 ರ ಸೋಮವಾರ ಬಣಕಲ್ ಶ್ರೀ ಮಹಮ್ಮಾಯಿ ಭಜನಾ ಮಂಡಳಿ ವತಿಯಿಂದ ಭಜನೆ, 8 ರ ಮಂಗಳವಾರ ದೇವನಗೂಲು ವನದುರ್ಗ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ಕುಮಾರಿ ಆರ್ವಿ ಚೇತನ್ ಅವರಿಂದ ಭರತನಾಟ್ಯ ಕಾರ್ಯಕ್ರಮ, ನಂತರ ಧಾರ್ಮಿಕ ಕಾರ್ಯಕ್ರಮ, 9 ರ ಬುಧವಾರ ನಿಡುವಾಳೆಯ ಶ್ರೀರಾಮೇಶ್ವರ ಭಜನಾ ಮಂಡಳಿ ವತಿಯಿಂದ ಭಜನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, 10 ರ ಗುರುವಾರ ಸಮಿತಿಯವರಿಂದ ಭಜನೆ, 11 ರಂದು ಶುಕ್ರವಾರ ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ, 12 ರ ಶನಿವಾರ ಸಂಜೆ 6 ರಿಂದ 10 ಗಂಟೆವರೆಗೆ ಭಜನೆ ಪ್ರಾರಂಭವಾಗಿ ನಗರ ಭಜನೆಯೊಂದಿಗೆ ಅತ್ತಿಗೆರೆ ಗ್ರಾಮದ ಸೋಮೇಶ್ವರ ದೇವಸ್ಥಾನದ ದರ್ಶನ ಪಡೆದು ಬಳಿಕ ಕೊಟ್ಟಿಗೆಹಾರದ ರಾಜಬೀದಿಯಲ್ಲಿ ಕೆಲ್ಲೂರು ಕೊಲ್ಲಿ ಶ್ರೀ ಭಜನಾ ಮಂಡಳಿಯವರಿಂದ ಭಜನಾ ಕುಣಿತ, ನಿಸಾನಿ ಮೇಳದೊಂದಿಗೆ ಸೀತಾರಾಮ ದೇವಸ್ಥಾನಕ್ಕೆ ತೆರಳಿ ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದ ಬಳಿಕ ಲಘು ಉಪಹಾರದೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next