ಶರನ್ನವರಾತ್ರಿಯ ಎರಡನೇ ದಿನ ಪೂಜಿಸ್ಪಡುವ ದೇವಿ ಬ್ರಹ್ಮಚಾರಿಣಿ. ಬ್ರಹ್ಮಚಾರಿಣಿಗೆ ವಿವಾಹವಾಗದ ಕಾರಣ ದೀರ್ಘಕಾಲ ತಪಸ್ಸು ಮಾಡಿ ಆ ಪರಮೇಶ್ವರನನ್ನು ಪತಿಯಾಗಿ ಪಡೆಯುತ್ತಾಳೆ. ಪರಶಿವನ ಎರಡನೇ ಪತ್ನಿ ಬ್ರಹ್ಮಚಾರಿಣಿ ಎಂದು ಹೇಳಲಾಗುತ್ತದೆ.
ಊಟವನ್ನು ತ್ಯಜಿಸಿ ತಪಸ್ಸಿನಲ್ಲಿ ಮಗ್ನಳಾಗಿದ್ದ ಬ್ರಹ್ಮಚಾರಿಣಿ, ಸಿಕ್ಕ ಬಿಳಿ ಹೂ, ಹಸಿರು ಎಲೆಗಳನ್ನೇ ತಿಂದು ತಪಸ್ಸು ಮಾಡಿದ್ದರಿಂದ ಆಕೆಯನ್ನು “ಅಪರ್ಣ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಬ್ರಹ್ಮಚಾರಿಣಿ ಕಮಂಡಲ, ಜಪ ಮಾಲೆ, ಗುಲಾಬಿ ಹೂವನ್ನು ತನ್ನ ಕೈಗಳಲ್ಲಿ ಇಟ್ಟಿಕೊಂಡಿರುತ್ತಾಳೆ. ಬ್ರಹ್ಮಚಾರಿಣಿ ಕುಜ ಗ್ರಹದ ಅಧಿಪತಿಯೂ ಹೌದು.
ಕಂಕಣ ಬಲ ನೀಡುವ ದೇವತೆ ಇವಳು ಎಂಬ ಪ್ರತೀತಿ ಇದೆ. ಮದುವೆಯಾಗದ ಮಂದಿ ಈಕೆಯ ಆರಾಧನೆ ಮಾಡಿದರೆ ಕಂಕಣ ಭಾಗ್ಯ ಕೂಡಿಬರಲಿದೆ ಎಂಬ ನಂಬಿಕೆ ಇದೆ. ಮನಸ್ಸು ಚಂಚಲ ಇರುವವರು, ಕುಜ ದೋಷ, ಹೊಟ್ಟೆ ನೋವು ಇತರಹದ ತೊಂದರೆಗಳಿರುವವರು ಬ್ರಹ್ಮಚಾರಿಣಿಯನ್ನು ಆರಾಧನೆ ಮಾಡಿದರೆ ಪರಿಹಾರ ಸಿಗುತ್ತದೆ.
ಹಸಿದವರಿಗೆ, ಬಡವರಿಗೆ, ನಿರ್ಗತಿಕರಿಗೆ ಇವಳ ಹೆಸರಲ್ಲಿ ದಾನ ಧರ್ಮಮಾಡಿದರೆ ಅವಳು ಒಲಿಯುತ್ತಾಳೆ ಎಂದೂ ಹೇಳಲಾಗುತ್ತದೆ. ಬ್ರಹ್ಮಚಾರಣಿಗೆ ಷೋಡಶೀ ಪೂಜೆ ಶ್ರೇಷ್ಠವಾದದ್ದು. ಅಂದರೆ 16 ರೀತಿಯ ಪೂಜೆ, 16 ರೀತಿಯ ಆರತಿಗಳನ್ನು ಆಕೆಗೆ ಮಾಡಲಾಗುತ್ತದೆ. ದೋಸೆಯಿಂದ ತಯಾರಿಸಿದ ಪಾಯಸ ಬ್ರಹ್ಮಚಾರಿಣಿಗೆ ಇಷ್ಟವಾದ ನೈವೇದ್ಯ.
ದಿನಾಂಕ: 27.09.2022 ಮಂಗಳವಾರ
ಶರದೃತು ಅಶ್ವಯುಜ ಶುದ್ಧ ಬಿದಿಗೆ
ದೇವತೆ: ಬ್ರಹ್ಮಚಾರಿಣಿ
ಬಣ್ಣ: ಬಿಳಿ
-ಕೆ.ಓ.ನರೇಂದ್ರಕುಮಾರ್, ಮುಖ್ಯಸ್ಥರು, ಶ್ರೀದುರ್ಗಾ ಶಕ್ತಿ ಸಪ್ತಶತಿ ಋಷಿಪ್ರಜ್ಞಾ ಆಂದೋಲನ