Advertisement

ನವರಾತ್ರಿ: ನವದುರ್ಗೆಯರ ಮಹತ್ವ ಮತ್ತು ವಿಶೇಷತೆ ಏನು..?

01:39 PM Sep 25, 2022 | ದಿನೇಶ ಎಂ |

ನವರಾತ್ರಿ, ಇದು ದುಷ್ಟ ಸಂಹಾರ ಮಾಡಿ ಧರ್ಮಾಚರಣೆಯನ್ನು ಪುನರ್‌ ಜಾಗೃತಿಗೊಳಿಸಿದ ಮತ್ತು ಜಾಗೃತಿಗೊಳಿಸುವ ಶುಭಕಾಲ. ಇದರಲ್ಲಿ ಬರೋ ʼನವʼ ಅಂದರೆ 9 ಎಂದೂ ಮತ್ತು ಹೊಸತು ಎಂದು ಅರ್ಥ ಬರುವುದು ಸಹಜ. ಈ 9 ಸಂಖ್ಯೆಗೆ ದೈವೀಕ ಆಚರಣೆಗಳಲ್ಲಿ ಮತ್ತು ಜೀವನದಲ್ಲಿ ಬಹಳ ನಿಕಟ ನಂಟಿದೆ.

Advertisement

ದೇವಿಯ ಅವತಾರದಲ್ಲಿ ನವದುರ್ಗೆಯರು, ಮನುಷ್ಯ ದೇಹದಲ್ಲಿ ನವ ರಂಧ್ರಗಳು, ಗ್ರಹಗಳಲ್ಲಿ ಪುರಾಣ ಉಲ್ಲೇಖಿತ ನವಗ್ರಹಗಳು ಹೀಗೆ ಹತ್ತಾರು ಬಗೆಯಲ್ಲಿ 9 ಸಂಖ್ಯೆಯು ಅನುಷ್ಥಾನ – ಆಚರಣೆಗಳಗೆ ಶುಭವೆನ್ನುವುದು ಹಿರಿಯರ ಮಾತು. ಹಾಗೆಯೇ ಈ ನವರಾತ್ರಿಯಲ್ಲಿ ನಾವು ಕಲಿಯುವುದು, ರೂಢಿಸಿಕೊಳ್ಳಬಹುದಾದದ್ದು ಏನು ಎನ್ನುವುದನ್ನು ಆತ್ಮಾವಲೋಕನ ಮಾಡುವ ಅವಶ್ಯಕತೆಯಿದೆ.

ಅಂದು ದುಷ್ಟ ಸಂಹಾರಕ್ಕಾಗಿ ಆದಿಶಕ್ತಿಯು ನವರೂಪಗಳನ್ನು ತಾಳಿ ಕೊನೆಗೆ ಆ ರೂಪಗಳನ್ನು ಏಕರೂಪಕ್ಕೆ ತಂದು ಚಾಮುಂಡೇಶ್ವರಿಯ ರೂಪದಲ್ಲಿ ಮಹಿಶಾಸುರನನ್ನು ಸಂಹರಿಸಿದಳು ಎಂಬುತು ಪ್ರತೀತಿ. ಆದರೆ, ಆ ತಾಯಿ ತಾಳಿದ ಒಂದೊಂದು ರೂಪವು ನಮ್ಮ ಜೀವನದಲ್ಲಿ ಉನ್ನತವಾದದ್ದನು ಸಾಧಿಸಲು ನಾವು ಅನುಸರಿಸಬಹುದಾದ ಒಂಬತ್ತು ಹಂತಗಳಾಗಿ ಏಕೆ ಕಾಣಬಾರದೂ ?

ಇಷ್ಟೆಲ್ಲಾ ಅಂದಾಕ್ಷಣ ಅದು ಆಧ್ಯಾತ್ಮದ ಮಾರ್ಗ ನಮಗೇಕೆ ಎನ್ನುವವರು ಹಲವರು. ಆದರೆ, ಆಧ್ಯಾತ್ಮಕ್ಕೆ ಜಾತಿ- ಮತಗಳಿಲ್ಲ, ಬೈರಾಗಿ – ವೈರಾಗಿಗಳೆಂಬ ಕಟ್ಟುಪಾಡುಗಳು ಅವಶ್ಯಕವೇನಲ್ಲ. ಒಬ್ಬಳು ನಿಷ್ಟಾವಂತ ಪತಿವೃತೆ ಧರ್ಮಿಷ್ಟಳಾಗಿದ್ದರೆ ಆಕೆಯು ಒಬ್ಬ ಋಷಿ ತಪಸ್ಸಿನಿಂದ ಪಡೆಯಬಹುದಾದ ಶಕ್ತಿಯನ್ನು ಆಕೆಯೂ ಹೊಂದಬಲ್ಲಳೂ ಎನ್ನುತ್ತಾರೆ ಹಿರಿಯರು. ಹಾಗಾಗಿ ದೃಢವಾದ ದೈವೀಕ ಜೀವನ ಕ್ರಮವೂ ಒಂದು ತಪಸ್ಸೇ ಆಗಿದೆ.

ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಈ ನವರೂಪಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

Advertisement

ಮೂರು ದಿನಗಳನ್ನು ಶಕ್ತಿರೂಪಿಣಿ ದುರ್ಗಾದೇವಿಗೆ, ಮುಂದಿನ ಮೂರು ದಿನಗಳನ್ನು ಅಷ್ಟ ಐಶ್ವರ್ಯ ದಾತೆ ಲಕ್ಷ್ಮಿದೇವಿಗೆ ಮತ್ತು ಕೊನೆಯ ಮೂರು ದಿನಗಳನ್ನು ಜ್ಞಾನರೂಪಿಣಿ ಸರಸ್ವತಿಗೆ ಅರ್ಪಿಸಲಾಗಿದೆ. ಹತ್ತನೇ ದಿನ, ವಿಜಯದಶಮಿ, ಜೀವನದ ಈ ಮೂರು ಅಂಶಗಳ ಮೇಲಿನ ವಿಜಯವನ್ನು ಅದು ಸಂಕೇತಿಸುತ್ತದೆ. ಇದು ಕೇವಲ ಸಾಂಕೇತಿಕವಲ್ಲ, ಆದರೆ ಶಕ್ತಿಯ ಮಟ್ಟದಲ್ಲಿಯೂ ನಿಜವಾದ ಸಂಗತಿ. ಮನುಷ್ಯರಾಗಿ ನಾವು ಈ ಭೂಮಿಯ ಮೇಲೆ ಹುಟ್ಟುತ್ತೀವಿ ಮತ್ತು ಕ್ರಿಯಾಶೀಲರಾಗಿರುತ್ತೀವಿ. ಸ್ವಲ್ಪ ಸಮಯದ ನಂತರ, ಜಡತ್ವಕ್ಕೆ ಜಾರುತ್ತೀವಿ.

ಇದು ನಮ್ಮೊಬ್ಬರಿಗೆ ಮಾತ್ರವಲ್ಲ, ಇಡೀ ನಕ್ಷತ್ರಪುಂಜಕ್ಕೂ ಮತ್ತು ಇಡೀ ಬ್ರಹ್ಮಾಂಡದ ಪ್ರಕ್ರಿಯೆಯು ಹೀಗೆಯೇ ಸಂಭವಿಸುತ್ತದೆ. ಬ್ರಹ್ಮಾಂಡವು ಜಡತ್ವದ ಸ್ಥಿತಿಯಿಂದ ಹೊರಹೊಮ್ಮುತ್ತದೆ, ಕ್ರಿಯಾತ್ಮಕವಾಗುತ್ತದೆ ಮತ್ತು ಮತ್ತೊಮ್ಮೆ ಜಡತ್ವಕ್ಕೆ ಇಳಿಯುತ್ತದೆ. ಆದಾಗ್ಯೂ, ಈ ಪುನರಾವೃತ್ತಿಯನ್ನು ಮುರಿಯುವಂತಹ ಸಾಮರ್ಥ್ಯ ನಮ್ಮಲ್ಲಿದೆ. ದೇವಿಯ ಮೊದಲ ಎರಡು ಆಯಾಮಗಳು ಮಾನವ ಉಳಿವು ಮತ್ತು ಯೋಗಕ್ಷೇಮಕ್ಕೆ ಅಗತ್ಯವಾಗಿವೆ. ಮೂರನೆಯದು ಎಲ್ಲವನ್ನೂ ಮೀರಿ ಹೋಗಬೇಕೆಂಬ ಆಕಾಂಕ್ಷೆಯನ್ನು ಮುಕ್ತಿಯ ಪ್ರೇರಣಿಯನ್ನೂ ನೀಡುತ್ತದೆ. ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು – ಗುರುವೇ ದೇವರು.

– ಬರಹ: ದಿನೇಶ ಎಂ. ಹಳೆನೇರೆಂಕಿ

Advertisement

Udayavani is now on Telegram. Click here to join our channel and stay updated with the latest news.

Next