Advertisement

ನವರಾತ್ರಿ ಉತ್ಸವ: ಸತ್ಯಸಾಯಿ ಗ್ರಾಮಕ್ಕೆ ಕೇಂದ್ರ ಸಚಿವ ಸದಾನಂದಗೌಡ ಬೇಟಿ

09:56 PM Oct 01, 2019 | mahesh |

ಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪ ಇರುವ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೂರನೇ ದಿನವಾದ ಮಂಗಳವಾರ ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಸತ್ಯಸಾಯಿ ಗ್ರಾಮಕ್ಕೆ ಆಗಮಿಸಿದ್ದರು.

Advertisement

ಶ್ರೀ ಸತ್ಯಸಾಯಿ ಗ್ರಾಮದ ಪ್ರೇಮಾಮೃತ ಸಭಾಂಗಣದಲ್ಲಿ ಸಂಜೆ ಆಯೋಜನೆಗೊಂಡಿದ್ದ ನವರಾತ್ರಿ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದರು, ಈ ವೇಳೆ ಮಾತನಾಡಿದ ಸದಾನಂದಗೌಡ, ಪ್ರೀತಿ ಹಾಗೂ ಸೇವೆ ದೇಶದ ಭವ್ಯ ಪರಂಪರೆಯನ್ನು ಮುನ್ನಡೆಸುವ ಗಾಲಿಗಳಾಗಿವೆ. ಸಂಸ್ಕೃತಿ ಹಾಗೂ ಸಂಸ್ಕಾರ ಸಮಾಜದ ಆಧಾರ ಸ್ತಂಭಗಳು ಎಂದರು.

ಈ ವೇಳೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್‌ಟ್ ವತಿಯಿಂದ ಸದ್ಗುರು ಶ್ರೀ ಮಧುಸೂಧನ್ ಸಾಯಿ ರವರಿಂದ ಸದಾನಂದಗೌಡರಿಗ ನೆನೆಪಿನ ಕಾಣಿಕೆ ನೀಡಿ ಸ್ಕರಿಸಲಾಯಿತು. ವೇದಿಕೆಯಲ್ಲಿ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಶ್ರೀ ಭಗವಾನ್ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನವರಾತ್ರಿ ಸಾಂಸ್ಕೃತಿಕ ಉತ್ಸವದ ಪ್ರಯುಕ್ತ ಖ್ಯಾತ ಮ್ಯಾಂಡೋಲಿನ್ ವಾದಕ ರಾಜೇಶ್ ಹಾಗೂ ಬಳಗದಿಂದ ಗಾಯನ ಕಚೇರಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next