ಕಲ್ಯಾಣ್, ಅ. 31: ಓಂ ಶಕ್ತಿ ಮಹಿಳಾ ಸಂಸ್ಥೆ ವತಿಯಿಂದ ನವರಾತ್ರಿ ಆಚ ರಣೆಯ ದಶಮಾನೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಕಲ್ಯಾಣ್‌ನ ಸಿತಾರ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ನಡೆಯಿತು.
ಮಹಾಮಾರಿ ಕೊರೊನಾ ಲಾಕ್‌ಡೌನ್ ಮಾರ್ಗಸೂಚಿಗಳಿಗೆ ಅನುಗುಣ ವಾಗಿ ಸರಳ ಹಾಗೂ ಅಚ್ಚುಕಟ್ಟಾಗಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಮಹಿಳೆ ಯರಿಂದ ಭಜನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಇದೇ ಸಂದರ್ಭ ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೈವಾಹಿಕ ಜೀವನದ 50 ಸಂವತ್ಸರ ಪೂರೈಸಿದ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯೆ ಕುಮಾರಿ ವಿಟ್ಠಲ್ ಶೆಟ್ಟಿ ಮತ್ತು ವಿಟ್ಠಲ್ ಶೆಟ್ಟಿ ದಂಪತಿಯನ್ನು ಸಂಸ್ಥೆಯ ಪರವಾಗಿ ಸಮ್ಮಾನಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿ ಅವರು ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವರ್ಷಂಪ್ರತಿ ನವರಾತ್ರಿ ಸಂದರ್ಭ ವಿಶೇಷ ರೀತಿಯಲ್ಲಿ ಶ್ರೀ ದೇವಿಯ ಪೂಜೆ ಮಾತ್ರವಲ್ಲದೆ, ಎಲ್ಲ ಜಾತಿಗಳ ಸುಮಾರು 400ರಿಂದ 500 ಮಹಿಳೆ ಯರು ಹಾಗೂ ಮಕ್ಕಳು ತಮ್ಮ ಸಾಂಪ್ರದಾಯಿಕ ಉಡುಗೆ- ತೊಡುಗೆ ಯಲ್ಲಿ ಸ್ಪರ್ಧಾತ್ಮಕ ಗಾರ್ಬಾ ನೃತ್ಯದಲ್ಲಿ ಭಾಗ ವಹಿ ಸುವುದು ಮತ್ತು ಲಕ್ಕಿ ಡ್ರಾದ ಬಹುಮಾನ ವಿತರಣೆ ಆಕರ್ಷಣೆಯಾಗಿತ್ತು. ಅಂತೆಯೇ ಈ ವರ್ಷ ದಶಮಾನೋತ್ಸವ ಕಾರ್ಯ ಕ್ರಮ ವನ್ನು ಬಹಳ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಬೇಕೆಂದು ನಾವು ಯೋಜನೆ ಮಾಡಿದ್ದೇವು. ಆದರೆ ನಾವೊಂದು ಬಗೆದರೆ ದೈವವೊಂದು ಬಗೆ ಯಿತು ಎಂಬ ಉಕ್ತಿಯಂತೆ ಲೋಕಕ್ಕೆ ಬಂದಿ ರುವ ಮಹಾ ಗಂಡಾಂತರವೇ ಒಂದು ನಿದ ರ್ಶನ ಎಂದು ಹೇಳಬ ಹುದು. ಜಗ ನ್ಮಾತೆ ಲೋಕಕ್ಕೆ ಬಂದಿರುವ ಮಹಾ ಮಾರಿಯನ್ನು ದೂರೀಕರಿಸಿ ಸರ್ವ ರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಓಂ ಶಕ್ತಿ ಮಹಿಳಾ ಸಂಸ್ಥೆಯ ಸದಸ್ಯೆ ಯರಾದ ಆಶಾ ಉಮೇಶ್ ನಾಯಕ್, ಸುಚಿತಾ ಜಗನ್ನಾಥ್ ಶೆಟ್ಟಿ, ಸುರೇಖಾ ಹರೀಶ್ ಶೆಟ್ಟಿ, ಕುಶಲಾ ಗೋಪಾಲ್ ಶೆಟ್ಟಿ, ಜಯಶ್ರೀ ಕರುಣಾಕರ ಶೆಟ್ಟಿ, ಶಾಲಿನಿ ಸಂತೋಷ್ ಶೆಟ್ಟಿ, ಸುರೇಖಾ ಸುಂದರ್ ಶೆಟ್ಟಿ, ಹರಿಣಿ ಸುರೇಶ್ ಶೆಟ್ಟಿ ಮತ್ತು ಆಶಾ ವಿಜಯ್ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಮಹಿಳೆಯರು ಪರಸ್ಪರ ಕುಂಕುಮ ಹಚ್ಚಿಕೊಂಡು, ಹೂ ಮುಡಿಸಿಕೊಂಡು ಆಶೀರ್ವಾದ ಪಡೆದುಕೊಂಡರು.
ಕುಮಾರಿ ವಿಟuಲ್ ಶೆಟ್ಟಿ ದಂಪತಿ ಯನ್ನು ಶಾಲು ಹೊದೆಸಿ, ಪುಷ್ಪಗುಚ್ಚ, ಉಡುಗೊರೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕುಮಾರಿ ವಿಟ್ಠಲ್ ಶೆಟ್ಟಿ, ಈ ಸಂಸ್ಥೆಯಿಂದ ಇನ್ನಷ್ಟು ಸಮಾಜ ಮುಖೀ ಕಾರ್ಯಗಳು ನಿರಂತರವಾಗಿ ನಡೆಯಲಿ. ನಮ್ಮೆಲ್ಲರ ಆಶೀರ್ವಾದ ಹಾಗೂ ಸಹಕಾರ ಸದಾ ಈ ಸಂಸ್ಥೆಯ ಮೇಲಿರಲಿದೆ ಎಂದರು.
ಅವರ ಪುತ್ರ ಸಂತೋಷ್ ಶೆಟ್ಟಿ, ಸೊಸೆ ರೂಪಶ್ರೀ ಶೆಟ್ಟಿ ಹಾಗೂ ಮೊಮ್ಮಕ್ಕಳು, ಸಂಸ್ಥೆಯ ಸದಸ್ಯೆಯರು ಉಪಸ್ಥಿತರಿದ್ದರು.