Advertisement

TTD: ತಿರುಪತಿಯಲ್ಲಿ ಇಂದಿನಿಂದ ನವರಾತ್ರಿ ಬ್ರಹ್ಮೋತ್ಸವ

11:05 PM Oct 14, 2023 | Team Udayavani |

ಹೈದರಾಬಾದ್‌: ನವರಾತ್ರಿ ಹಬ್ಬದ ಸಂಭ್ರಮ ದೇಶಾದ್ಯಂತ ಮನೆ ಮಾಡಿರುವಂತೆಯೇ ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿಯೂ ನವರಾತ್ರಿಯ ಅದ್ದೂರಿ ಬ್ರಹ್ಮೋತ್ಸವಕ್ಕೆ ತಯಾರಿ ನಡೆದಿದೆ. ರವಿವಾರದಿಂದ ಆರಂಭಗೊಳ್ಳಲಿರುವ ಬ್ರಹ್ಮ ಮಹೋತ್ಸವ ಕಣ್ತುಂಬಿಕೊಳ್ಳಲು ದೇಶದ ಮೂಲೆ-ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

Advertisement

ಈಗಾಗಲೇ ದೇಗುಲ ಆಡಳಿತ ಮಂಡಳಿ ಎಲ್ಲ ಪಲ್ಲಕ್ಕಿಗಳನ್ನು ಪರಿಶೀಲಿಸಿದ್ದು, ಸಂಪ್ರದಾಯದಂತೆ ಅವುಗಳನ್ನು ಅಲಂಕರಿಸಲಾ ಗಿದೆ. ಚಿನ್ನದ ರಥ , ದಂಥದ ಪಲ್ಲಕ್ಕಿ, ಒಡವೆ ವಸ್ತ್ರಗಳೆಲ್ಲವನ್ನೂ ಜಾಗರೂಕವಾಗಿ ಗಮನಿಸಿ ಉತ್ಸವಕ್ಕೆ ಸಿದ್ಧಪಡಿಸಲಾಗಿದೆ. ಉದ್ಯಾನ ಇಲಾಖೆ ವತಿಯಿಂದ ದೇಗುಲದ ಒಳಾಂಗಣ ಮತ್ತು ಹೊರಾಂಗಣದ ಹೂವಿನ ಅಲಂಕಾರವನ್ನು ಮಾಡಲಾಗಿದೆ. ದೀಪ ಮತ್ತು ಹೂವಿನ ಅಲಂಕಾರ ಭಕ್ತಾದಿಗಳ ಕಣ್ಣು ಕೊರೈಸಿದೆ.

ಬ್ರಹ್ಮೋತ್ಸವ ರಥದ ಜತೆಗೆ ಸ್ಥಳೀಯ ದೇಗುಲಗಳ ಪಲ್ಲಕ್ಕಿಯೂ ಮೆರವಣಿಗೆಯಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನದಟ್ಟಣೆ ಎದುರಾಗದಂತೆ ಬದಲಿಮಾರ್ಗಗಳನ್ನು ಗುರತುಪಡಿಸಿ, ಬಾರೀ ಭದ್ರತೆಯನ್ನೂ ನಿಯೋಜಿಸಲಾಗಿದೆ.ಅ. 23ರ ವರೆಗೆ ನವರಾತ್ರಿ ಬ್ರಹ್ಮೋತ್ಸವ ನಡೆಯಲಿದೆ. ಪ್ರತಿನಿತ್ಯ ಸಂಜೆ ದೇಗುಲದಲ್ಲಿ ಗರುಡ ಸೇವೆಯೂ ನಡೆಯಲಿದೆ ಪುತೈìಸಿ ಮಾಸಾಂತ್ಯದ ಹಿನ್ನೆಲೆಯಲ್ಲಿ ಶನಿವಾರ ವಿಶೇಷ ಪೂಜೆ ನೆರವೇರಿಸಿ, ನವರಾತ್ರಿ ಉತ್ಸವಕ್ಕೆ ಸಜ್ಜುಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next