Advertisement

ನವರತ್ನ ಖಚಿತ ಸ್ವರ್ಣಮುಖ ಅಲಂಕಾರ

11:58 PM Feb 21, 2020 | Lakshmi GovindaRaj |

ಹೊಸಪೇಟೆ: ಮಹಾಶಿವರಾತ್ರಿ ಅಂಗವಾಗಿ ದಕ್ಷಿಣ ಕಾಶಿ ಖ್ಯಾತಿಯ ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವರಾತ್ರಿ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ಸ್ವಾಮಿಗೆ ನವರತ್ನ ಖಚಿತ ಸ್ವರ್ಣಮುಖ ತೊಡಿಸಿ, ವಿದ್ಯಾರಣ್ಯ ಭಾರತಿ ಸ್ವಾಮೀಜಿಗಳು ವಿಶೇಷ ಪೂಜೆ ಸಲ್ಲಿಸಿದರು.

Advertisement

ಮಧ್ಯಾಹ್ನ 1.30ಕ್ಕೆ ಮೊಸರನ್ನ, ರಾತ್ರಿ 9 ಗಂಟೆಗೆ ಅನ್ನ-ಪಾಯಸ, ರಾತ್ರಿ 12 ಗಂಟೆಗೆ ಚಿತ್ರಾನ್ನ ನೈವೇದ್ಯ ಸಮರ್ಪಿಸಲಾಯಿತು. ಶಿವರಾತ್ರಿ ನಿಮಿತ್ತ ಸಾವಿರಾರು ಭಕ್ತರು ವಿರೂಪಾಕ್ಷೇಶ್ವರನ ದರ್ಶನ ಪಡೆದರು. ಗುರುವಾರವೇ ಹಂಪಿಗೆ ಆಗಮಿಸಿದ್ದ ಕೆಲ ಭಕ್ತರು ಶುಕ್ರವಾರ ನಸುಕಿನಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ-ಸಂಧ್ಯಾವಂದನೆ ಮುಗಿಸಿ, ಸರದಿ ಸಾಲಿನಲ್ಲಿ ನಿಂತು ವಿರೂಪಾಕ್ಷನ ದರ್ಶನ ಪಡೆದರು.

ಇದಲ್ಲದೆ ತುಂಗಭದ್ರಾ ನದಿ ತಟದಲ್ಲಿರುವ ಕೋಟಿಲಿಂಗಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಉದ್ದಾನ ವೀರಭದ್ರೇಶ್ವರ ಸ್ವಾಮಿ, ಉಗ್ರನರಸಿಂಹ, ಬಡವಿಲಿಂಗ, ಪುಷ್ಕರಣಿ, ರಾಣಿ ಸ್ನಾನ ಗೃಹ, ಹಜಾರ ರಾಮ ದೇವಸ್ಥಾನ ಕಮಲ ಮಹಲ್‌, ಗಜಶಾಲೆ, ವಿಜಯವಿಠ್ಠಲ ದೇವಸ್ಥಾನ ಹಾಗೂ ಪುರಂದರ ಮಂಟಪ ಪ್ರದೇಶದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next