Advertisement

ಪಲಿಮಾರು ಶ್ರೀಗಳ ಚಿಂತನೆಗಳಿಗೆ ಕೈಜೋಡಿಸೋಣ: ಸಚ್ಚಿದಾನಂದ ರಾವ್‌

08:10 PM Oct 24, 2020 | Suhan S |

ಮುಂಬಯಿ, ಅ. 23: ಮೀರಾರೋಡ್‌ ಪೂರ್ವದ ಗೀತಾ ನಗರದಲ್ಲಿರುವ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಅವರಣದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ. 22ರಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ದಿನಪೂರ್ತಿ ಜರಗಿದವು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್‌ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಚಂಡಿಕಾ ಮಹಾ ಯಜ್ಞ, ಪೂರ್ಣಾಹುತಿ, ಕಲಶಾಭೀಷೇಕ ಆಲಂಕಾರ ಪೂಜೆ, ಮಹಾಪೂಜೆ, ಆರತಿ, ಮಧ್ಯಾಹ್ನ ಶ್ರೀನಿವಾಸ ದೇವರಿಗೆ ಮಹಾಪೂಜೆ ಹಾಗೂ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು. ಅಪರಾಹ್ನ ಶ್ರೀ ಬಾಲಾಜಿ ಸನ್ನಿಧಿಯ  ಭಜನ ಮಂಡಳಿಯ ಸದಸ್ಯರಿಂದ ದಾಸರ ಕೀರ್ತನೆಗಳು ನಡೆದವು.

ಟ್ರಸ್ಟಿ ಸಚ್ಚಿದಾನಂದ ರಾವ್‌ ಶ್ರೀ ಬಾಲಾಜಿ ಸನ್ನಿಧಿ ಬಗ್ಗೆ ಮಾತನಾಡಿ, ಉಡುಪಿ ಪರ್ಯಾಯ ಸಂದರ್ಭ ಪುಟಾಣಿಗಳಿಗೆ ಚಿಣ್ಣರೋತ್ಸವ, ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ, ನಿತ್ಯ ಲಕ್ಷ ತುಳಸಿ ಅರ್ಚನೆ, ಚಿನ್ನದ ಗೋಪುರ, ಎರಡು ವರ್ಷಗಳ ಕಾಲ ದಿನಂಪ್ರತಿ ರಾತ್ರಿ ಭಜನೆ ಮೊದಲಾದ ಸಾಮಾಜಿಕ, ಶೈಕ್ಷಣಿಕ, ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಪಲಿಮಾರು

ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ  ಅವರಿಗೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿ ಗೌರವಿಸಿದ್ದು, ಅವರ ನಿರಂತರ ಶ್ರಮಕ್ಕೆ ಸಂದ ಗೌರವವಾಗಿದೆ. ಪಲಿಮಾರು  ಶ್ರೀಗಳ ತತ್ತಾÌದರ್ಶಗಳ ಪಾಲನೆಯೊಂದಿಗೆ ಸಮಾಜಮುಖೀ ಚಿಂತನೆಗಳಿಗೆ ನಾವೆಲ್ಲ ಕೈಜೋಡಿಸೋಣ. ಕೋವಿಡ್‌-19ರ ಸಾಂಕ್ರಾಮಿಕ ರೋಗದದ ಹಿನ್ನೆಲೆಯಲ್ಲಿ ಸರಕಾರದ ಮಾರ್ಗ ಸೂಚಿಯಂತೆ ಮಠದ ಪ್ರತಿಯೊಂದು ಧಾರ್ಮಿಕ, ಆಧ್ಯಾತ್ಮಿಕ ಆಚರಣೆಗಳು ಸರಳವಾಗಿ ನಡೆಯಲಿವೆ ಎಂದು ತಿಳಿಸಿದರು.

ವಿಜಯದಶಮಿಯಂದು ಮಧ್ವಜಯಂತಿ, ಬ್ರಹ್ಮೋತ್ಸವದ ಪೂರ್ವಭಾವಿಯಾಗಿ ಬೆಳಗ್ಗೆ ಕಲಶ ಪ್ರತಿಷ್ಠೆ, ಪ್ರಧಾನ ಹವನ, ಮಹಾಪೂಜೆ, ಅಪರಾಹ್ನ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ಶ್ರೀ ಬಾಲಾಜಿ ಸನ್ನಿಧಿಯ ಮಹಿಳಾ ಸದಸ್ಯೆಯರಿಂದ ಭಜನೆ, ಸಾಂಕೇತಿಕ ರಥೋತ್ಸವ, ಶ್ರೀನಿವಾಸ ದೇವರಿಗೆ ರಂಗಪೂಜೆ ಮತ್ತು ಪರಿವಾರ ದೇವರಾದ ಶ್ರೀ ಗಣಪತಿ, ಹಿಮಾಲಯದ ಸ್ವಾಮಿಗಳಿಂದ ಪೂಜೆಯನ್ನು ಸ್ವೀಕರಿಸಿದ ಓಂಕಾರ ಇರುವ ಮಾಣಿಕ್ಯ ಲಿಂಗ ಶ್ರೀ ಮುಂಗೇಶಿ ಮಹಾ ಮೃತ್ಯುಂಜಯ ರುದ್ರ ದೇವರು, ಶ್ರೀ ಪದ್ಮಾಂಬಿಕೆ, ಶ್ರೀ ಆಂಜನೇಯ, ಶ್ರೀ ನಾಗದೇವರು, ನವಗ್ರಹ ದೇವರಿಗೆ ವಿಶೇಷ ಪೂಜೆಗಳು ನಡೆಯಲಿವೆ  ಎಂದು ತಿಳಿಸಿದ ಅವರು, ಭಕ್ತರ ಸಹಾಯ, ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

Advertisement

ಶುದ್ಧ ಪುಣ್ಯಾಹ ವಾಚನ, ಸಂಕಲ್ಪ, ಕಲಶ ಪ್ರತಿಷ್ಠಾಪನೆ, ಪ್ರಧಾನ ಹೋಮ, ಕಲೊ³àಕ್ತ ಪೂಜೆ, ಪೂರ್ಣಾಹುತಿ, ಸುವಾಸಿನಿ ಪೂಜೆಯ ಬಳಿಕ ಭಕ್ತರು ಮಂಗಲ ದ್ರವ್ಯ, ಮಂಗಲ ವಸ್ತ್ರ, ಫಲಪುಷ್ಪ ಸುವಸ್ತುಗಳನ್ನು ಯಜ್ಞಕುಂಡಕ್ಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ಟ್ರಸ್ಟಿ ವಾಸುದೇವ ಎಸ್‌. ಉಪಾಧ್ಯಾಯ, ಸಂತೋಷ್‌ ಭಟ್‌ ಬಕ್ರೆಮಠ, ಕಾರ್ತಿಕ್‌ ಉಪಾಧ್ಯಾಯ, ಕೃಷ್ಣಮೂರ್ತಿ ಉಪಾಧ್ಯಾಯ, ಗೋಪಾಲ ಭಟ್‌, ರಾಮರಾಜ್‌, ವೃಷಬ್‌ ಭಟ್‌, ಪ್ರಶಾಂತ್‌ ಭಟ್‌, ಮಧುಮತಿ ಸಚ್ಚಿದಾನಂದ ರಾವ್‌ ವಿವಿಧ ಪೂಜೆಗಳನ್ನು ನೆರವೇರಿಸಿದರು. ಕರಮಚಂದ್ರ ಗೌಡ ಮತ್ತು ಶ್ರೀ ಬಾಲಾಜಿ ಭಜನ ಸನ್ನಿಧಿಯ ಸದಸ್ಯರು ಸಹಕರಿಸಿದರು. ಸಾಮಾಜಿಕ ಅಂತರದಲ್ಲಿ ಭಕ್ತರು ದೇವರ ದರ್ಶನ ಪಡೆದರು.

 

-ಚಿತ್ರ-ವರದಿ: ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next