Advertisement

ಕೊರೊನಾ ಓಡಿಸಲು ಮನೆಯಲ್ಲೇ ಇರಿ

12:07 PM Apr 09, 2020 | Naveen |

ನವಲಗುಮದ: ಕೊರೊನಾ ಓಡಿಸಲು ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇರುವ ಮೂಲಕ, ಸರಕಾರದ ಲಾಕ್‌ಡೌನ್‌ ನಿಯಮಕ್ಕೆ ಸಹಕಾರ ನೀಡಬೇಕೆಂದು ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ಕರೆ ನೀಡಿದರು.

Advertisement

ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ, ಹೆಬಸೂರ ಹಾಗೂ ನವಲಗುಂದ ತಾಲೂಕಿನ ಯಮನೂರ ಮತ್ತು ನವಲಗುಂದದ ಕಳ್ಳಿಮಠ ಓಣಿ, ಬಸವೇಶ್ವರ ನಗರ, ದೇಸಾಯಿಪೇಟೆ, ಗಾಂಧಿ ಮಾರ್ಕೇಟ್‌ ಹಾಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿದರಲ್ಲದೆ, ಸರಕಾರ ಅಗತ್ಯ ಸಹಾಯ ನೀಡಲಿ ಎಂದು ಒತ್ತಾಯಿಸಿದರು.

ನವಲಗುಂದ ತಾಲ್ಲೂಕಿನ 11 ಜನ ಶಂಕಿತರದಲ್ಲಿ 8 ಜನರ ವರದಿ ನೆಗೆಟಿವ್‌ ಬಂದಿದೆ. ಇನ್ನು ಮೂವರು ವರದಿ ಬರಬೇಕಿದೆ. ಅವರ ವರದಿಯೂ ನೆಗೆಟಿವ್‌ ಬರಲಿ ಎಂದು ಪ್ರಾರ್ಥಿಸೋಣ ಎಂದರು. ನವಲಗುಂದದಲ್ಲಿ ಪುರಸಭೆ ಹಾಗೂ ಇತರೆ ಇಲಾಖೆಗಳ ನೌಕರರಿಗೆ ಜೆಡಿಎಸ್‌ ಪಕ್ಷದ ಪುರಸಭೆ ಸದಸ್ಯರಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ನಂತರ ವಿವಿಧೆಡೆ ಸಾರ್ವಜನಿ ಕರಿಗೆ ಮಾಸ್ಕ್-ಹಣ್ಣು ವಿತರಿಸಲಾಯಿತು. ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಲೆ ಖರೀದಿ ಕೇಂದ್ರ ಆರಂಭವಾಗಿದ್ದವಾದರೂ, ಕೊರೊನಾದಿಂದ ಖರೀದಿ ಸ್ಥಗಿತಗೊಂಡಿದ್ದು, ಪುನರಾರಂಭಿಸಬೇಕು ಕೋನರಡ್ಡಿ ಒತ್ತಾಯಿಸಿದರು.

ಜೀವನ ಪವಾರ, ಪ್ರಕಾಶ ಶಿಗ್ಲಿ, ಮಹಾಂತೇಶ ಭೋವಿ, ಮೋದಿನ ಶಿರೂರ, ಸುರೇಶ ಮೇಟಿ, ಬಾಬಾಜಾನ ಮಕಾಂದಾರ, ಹನುಮಂತಪ್ಪ ವಾಲ್ಮೀ ಕಿ, ಹುಸೇನಬಿ ಧಾರವಾಡ, ಅಪ್ಪಣ್ಣಾ ಹಳ್ಳದ, ಚಂದ್ರಲೇಖಾ ಮಳಗಿ, ಆನಂದ ಹವಳಕೋಡ, ಸೈಫುದ್ದೀನ್‌ ಅವರಾದಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next