Advertisement
ಶ್ರೀಜಯತೀರ್ಥರ ವೃಂದಾವನಕ್ಕೆ ಬೆಳ್ಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತಾಭಿಷೇಕ, ಸರ್ವಪುಷ್ಪಗಳ ಅಲಂಕಾರ, ಬೆಳ್ಳಿ ಕವಚ ಹಾಗೂ ನಾಣ್ಯಗಳು, ರೇಶ್ಮೆ ವಸ್ತçದಿಂದ ಸರ್ವಾಲಂಕಾರ ಮಾಡಲಾಗಿತ್ತು. ಪೂಜ್ಯ ಸುಭುದೇಂದ್ರತೀರ್ಥ ಶ್ರೀಪಾದಂಗಳು ಶ್ರೀಜಯತೀರ್ಥರ ವೃಂದಾವನ ಸೇರಿದಂತೆ ೯ ಯತಿಗಳ ವೃಂದಾನಕ್ಕೆ ಪೂಜೆ ಮಹಾಮಂಗಳಾರತಿ ಮಾಡಿದರು. ಇದಕ್ಕೂ ಮುಂಚೆ ಮಂತ್ರಾಲಯ ಮಠದ ಪಂಡಿತ ಬಂಡಿ ಶಾಮಾಚಾರ್ ಮತ್ತು ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳು ಶ್ರೀಮನ್ ನ್ಯಾಯಸುಧಾ ಕುರಿತು ಉಪನ್ಯಾಸ ನೀಡಿದರು.ನಂತರ ಪೂಜ್ಯ ಸುಭುದೇಂದ್ರತೀರ್ಥ ಶ್ರೀಪಾದಗಳು ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.
Related Articles
Advertisement
ಶ್ರೀಜಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಈ ಭಾರಿ ಜೋಡು ರಥೋತ್ಸವ ಎಳೆಯುವ ಮೂಲಕ ಭಕ್ತರು ಸಂಭ್ರಮಪಟ್ಟರು. ಮಹಾರಥಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ನವವೃಂದಾವನಗಡ್ಡಿಯ 9 ಯತಿಗಳ ಸುತ್ತ ಜಯಘೋಷಗಳನ್ನು ಕೂಗಿ ಜೋಡುರಥಗಳನ್ನು ಎಳೆಯಲಾಯಿತು. ಒಂದು ರಥದಲ್ಲಿ ಶ್ರೀಜಯತೀರ್ಥ ಯತಿಗಳ ಗ್ರಂಥಗಳು ಮತ್ತೊಂದು ರಥದಲ್ಲಿ ಶ್ರೀಜಯತೀರ್ಥರ ವಿಗ್ರಹ ಇಟ್ಟು ರಥೋತ್ಸವ ನಡೆಸಲಾಯಿತು.
ಪೊಲೀಸ್ ಸರ್ಪಗಾವಲು ಹಾಕುವುದು ಸರಿಯಲ್ಲಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ಶ್ರೀಪಾದಂಗಳು ಮಾತನಾಡಿ, ಮಾಧ್ವ ಸಮಾಜ ಸೇರಿ ಇಡೀ ಸಮಾಜಕ್ಕೆ ಪೂಜ್ಯ ಶ್ರೀ ಜಯತೀರ್ಥರ ಕೊಡುಗೆ ಅಪಾರವಾಗಿದೆ. ನೂರಾರು ವರ್ಷಗಳಿಂದ ಆನೆಗೊಂದಿಯ ನವವೃಂದಾವನಡ್ಡಿಯಲ್ಲಿ ನೆಲೆಸಿರುವ ಶ್ರೀಜಯತೀರ್ಥರ ವೃಂದಾವನಕ್ಕೆ ಪೂಜೆ ಪುನಸ್ಕಾರಗಳನ್ನು ಮಂತ್ರಾಲಯ ಮಠ ಸೇರಿ ಇತರೆ ಮಠದವರು ಮಾಡುತ್ತಿದ್ದಾರೆ. ನಾವು ಚಿಕ್ಕಂದಿನಲ್ಲಿರುವಾಗ ಗಡ್ಡಿಯಲ್ಲಿ ಜಯತೀರ್ಥರ ಆರಾಧನೆ ಸಂದರ್ಭದಲ್ಲಿ ರಥೋತ್ಸವ ಜರುಗುತ್ತಿತ್ತು. ಕಳೆದ ವರ್ಷ ನೆರೆ ಹಾವಳಿ ಮತ್ತು ಇನ್ನೊಂದು ಮಠದವರ ಆಕ್ಷೇಪದಿಂದ ಕರ್ಪ್ಯೂ ವೀಧಿಸಿದ್ದರಿಂದ ಜಯತೀರ್ಥರ ಆರಾಧನೆಯನ್ನು ಆನೆಗೊಂದಿ ಮಠ ಸೇರಿ ನಾಡಿನಾದ್ಯಂತ ಶ್ರೀರಾಘವೇಂದ್ರ ಮಠದಲ್ಲಿ ಮತ್ತು ಭಕ್ತರ ಮನೆಗಳಲ್ಲಿ ಆಚರಣೆ ಮಾಡಲಾಗಿತ್ತು. ಜಯತೀರ್ಥರ ಆರಾಧನೆಯನ್ನು ಅವರ ಸರ್ವ ಅನುಯಾಯಿಗಳು ಆಚರಣೆ ಮಾಡಲು ಮಂತ್ರಾಲಯ ಮಠ ಆಕ್ಷೇಪವಿಲ್ಲ. ಗ್ರಂಥ ಮತ್ತು ಪ್ರಮಾಣಗಳಲ್ಲಿ ತಿಳಿಸಿರುವಂತೆ ಶ್ರೀಜಯತೀರ್ಥ ಮೂಲವೃಂದಾವನ ಆನೆಗೊಂದಿಯ ನವವೃಂದಾವನದಲ್ಲಿದೆ. ಈ ಕಾರಣಕ್ಕಾಗಿಯೇ ಗೌರವಾನ್ವಿತ ಉಚ್ಚನ್ಯಾಯಾಲಯ ಮಂತ್ರಾಲಯಮಠಕ್ಕೆ ಆರಾಧನೆ ಮಾಡುವ ಅವಕಾಶ ಕಲ್ಪಿಸಿದೆ. ಯಾವುದೇ ಆಶಾಂತಿಯ ವಾತಾವರಣವಿರದಿದ್ದರೂ ಪೊಲೀಸ್ ಇಲಾಖೆ ಭದ್ರತೆ ನೆಪದಲ್ಲಿ ಪೊಲೀಸ್ ಸರ್ಪಗಾವಲು ಹಾಕುವುದು ಸರಿಯಲ್ಲ. ಇತ್ತೀಚಿನ ವರ್ಷಗಳಲ್ಲಿ ಅನಪೇಕ್ಷೀತವಾಗಿ ಪೊಲೀಸ್ ಮಧ್ಯ ಪ್ರವೇಶವಾಗುತ್ತಿದೆ ಎಂದರು.