Advertisement

ಜೀವನೋತ್ಸಾಹ ಮೂಡಿಸಿದ ನವರೂಪ: ವಿದುಷಿ ಮಂಜುಳಾ ಸುಬ್ರಹ್ಮಣ್ಯ

09:47 PM Nov 24, 2021 | Team Udayavani |

ಪುತ್ತೂರು: ಕೋವಿಡ್‌ ಸಂಕಷ್ಟ ಕಾಲ ಕಳೆದು ಮರಳಿ ಜೀವನೋತ್ಸಾಹ ಮೂಡಿಸಲು ಉದಯವಾಣಿಯ ನವರೂಪ ಕಾರ್ಯಕ್ರಮ ಪೂರಕವಾಗಿತ್ತು ಎಂದು ನೃತ್ಯ ನಿರ್ದೇಶಕಿ, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹೇಳಿದರು.

Advertisement

ನವರಾತ್ರಿ ಪ್ರಯುಕ್ತ ಉದಯವಾಣಿ ಆಯೋಜಿಸಿದ ನವರೂಪ ಕಾರ್ಯಕ್ರಮದ ಅದೃಷ್ಟಶಾಲಿಗಳಿಗೆ ಬುಧವಾರ ಪುತ್ತೂರು ಉದಯವಾಣಿ ಕಚೇರಿಯಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ನವಬಣ್ಣಗಳ ಮೂಲಕ ಮಹಿಳೆ ತನ್ನ ಭಾವನೆಗಳನ್ನು ಅಭಿವ್ಯಕ್ತಿಪಡಿಸಿಕೊಳ್ಳಲು ನವರೂಪ ವೇದಿಕೆಯಾಯಿತು ಎಂದರು.

ಸೀರೆ ನಮ್ಮ ಪರಂಪರೆಯ ಕೊಂಡಿ. ಪುರಾಣ ಕಾಲದಿಂದಲೂ ಇಲ್ಲಿಯ ತನಕ ಅದರ ಮನ್ನಣೆ ಮುಂದುವರಿದಿದೆ ಎಂದ ಅವರು, ಮಹಿಳೆಯರನ್ನು ಕೇಂದ್ರೀಕರಿ ಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ದಿನಂಪ್ರತಿ ಒತ್ತಡದ ಕೆಲಸಗಳಲ್ಲಿಯೇ ಕಾಲ ಕಳೆಯುವ ಮಹಿಳೆಯರಿಗೆ ಸಂಭ್ರಮಿಸುವ ಅವಕಾಶವೊಂದು ದೊರೆಯಿತು ಎಂದವರು ಶ್ಲಾಘಿಸಿದರು.

ಅಭಿಮಾನದ ಪತ್ರಿಕೆ
ಉದಯವಾಣಿ ಅಭಿಮಾನದ ಪತ್ರಿಕೆ. ಅದು ಪ್ರತೀ ಮನೆ ಮನೆಯಲ್ಲಿ ಇರಬೇಕು ಎಂದು ಬಯಸುವವರೇ ಅಧಿಕ. ಹಾಗಾಗಿ ಮನೆಯಲ್ಲಿ ಮಹಿಳೆಯರು ಪತ್ರಿಕೆ ಓದುವ ಅಭಿರುಚಿ ಬೆಳೆಸಲು ಇಂತಹ ಚಟುವಟಿಕೆಗಳು ಸಹಕಾರಿ ಎಂದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಮಾತನಾಡಿ, ಹೆಣ್ಣಿಗೆ ಗೌರವ ಕೊಡುವ ಮನೆ ನಂದಗೋಕುಲದಂತೆ ಇರುತ್ತದೆ. ಅಂತಹ ಶಕ್ತಿ ಆಕೆಗಿದೆ. ಹಾಗಾಗಿ ದೇವಿ ಸ್ವರೂಪದಲ್ಲಿ ಹೆಣ್ಣನ್ನು ಪೂಜಿಸುವ ಪರಂಪರೆ ನಮ್ಮ ನೆಲದ್ದು. ನವರೂಪದ ಮೂಲಕ ನವ ರಾತ್ರಿಯನ್ನು ಸಂಭ್ರಮಿಸುವ ಅವಕಾಶ ಇಮ್ಮಡಿಯಾಯಿತು ಎನ್ನುವುದಕ್ಕೆ ಈ ಚಟುವಟಿಕೆಗೆ ಬಂದ ಅಭೂತ ಪೂರ್ವ ಸ್ಪಂದನೆಯೇ ಸಾಕ್ಷಿ ಎಂದರು.

Advertisement

ಇದನ್ನೂ ಓದಿ:ರಾಜ್ಯ ರೈತರ ಸಂಘದಿಂದ ಸುವರ್ಣ ವಿಧಾನಸೌಧ ಮುತ್ತಿಗೆ ಎಚ್ಚರಿಕೆ

ಸಾಮಾಜಿಕ ಜಾಲದಲ್ಲಿ ಒಂದು ಫೋಟೋ ಕಳುಹಿಸಿದರೆ ಬೆರಳೆಣಿಕೆಯ ಲೈಕ್‌ಗಳು ಬರಬಹುದು, ಬಾರದೆ ಇರಬಹುದು. ಆದರೆ ನವರೂಪದಲ್ಲಿ ಆಯ್ಕೆಗೊಂಡು ಉದಯವಾಣಿಯಲ್ಲಿ ಪ್ರಕಟಗೊಂಡ ಫೋಟೋ ಪ್ರತೀ ದಿನ ಐದು ಲಕ್ಷ ಓದುಗರಿಗೆ ತಲುಪಿದೆ ಎಂದ ಅವರು, ನಂಬಿಕೆ, ವಿಶ್ವಾಸ, ಪಾರದರ್ಶಕತೆ ಮೂಲಕ ಅದೃಷ್ಟಶಾಲಿಗಳ ಆಯ್ಕೆ ನಡೆದಿದೆ. ನವರೂಪದ ಯಶಸ್ಸು ಓದುಗರಿಗೆ ಸಲ್ಲಬೇಕು ಎಂದರು.

ಪ್ರಮೀಳಾ ಜೈನ್‌ ಮತ್ತು ಕುಟುಂಬ ಮಡಂತ್ಯಾರು, ವಿಶಾಲಾಕ್ಷಿ ಮತ್ತು ಬಳಗ ನಿಡ³ಳ್ಳಿ, ಪೂಜಾ ಪ್ರಭು ಮತ್ತು ಬಳಗ ಪುತ್ತೂರು, ಅಳಕ್ಕೆ ಸಹೋದರಿಯರು ತಣ್ಣೀರುಪಂತ, ಶ್ಲೋಕಾ ಮತ್ತು ಬಳಗ ಪುತ್ತೂರು, ಮೋನಿಕಾ ಮತ್ತು ಗೆಳತಿ ಯರು ಸುಳ್ಯ ಇವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು. ಉದಯ ವಾಣಿ ಮಾರುಕಟ್ಟೆ ವಿಭಾಗದ ಸೀನಿಯರ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next