Advertisement
ಅವರು ಎ. 12ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ದಲ್ಲಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಬಂಟ್ವಾಳ ಸಹಯೋಗದಲ್ಲಿ ನವಜೀವನ ಸಮಿತಿಯ ಪೋಷಕರ ತರಬೇತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿ. ಪಾಯಸ್ ಮಾತನಾಡಿ, ಮದ್ಯ ತ್ಯಜಿಸಿ ನವಜೀವನ ಕಂಡುಕೊಂಡ ಸದಸ್ಯರು ಶಿಬಿರ ನಡೆಸಲು ಸಾಧ್ಯವಾದಲ್ಲಿ ಮಾತ್ರ ಅವರ ಜೀವನ ಪಾವನವಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಮಾತನಾಡಿ, ಸದೃಢ ಸಮಾಜ ಕಟ್ಟಬೇಕಾದರೆ ಕ್ರಿಯಾಶೀಲ ಕಾರ್ಯಕರ್ತರು ನಿರಂತರ ಕರ್ತವ್ಯ ನಿರ್ವಹಿಸಬೇಕು. ನಮ್ಮಲ್ಲಿ ಸದುದ್ದೇಶ ಇದ್ದಾಗ ಯಾವುದೇ ಸಮಸ್ಯೆಗಳು ಎದರಾದರೂ ನಿವಾರಣೆ ಸಾಧ್ಯ. ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮ ಉದ್ದೇಶ ಆಗಬೇಕು ಎಂದರು.