ತಿ.ನರಸೀಪುರ: ನಾಟಿ ಕೋಳಿ ಸಾಕಾಣಿಕೆಯ ಪ್ರಯೋಜನಗಳ ಬಗ್ಗೆ ಅದರಲ್ಲಿರುವ ಸಮಸ್ಯೆ-ಸವಾಲುಗಳ ಪರಿಹಾರಕ್ಕಾಗಿ ರೈತರಿಗೆ ಅಗತ್ಯ ಮಾಹಿತಿ ನೀಡಿ ಲಾಭದಾಯಕ ಸ್ವ-ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸಲಾಗುತ್ತದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಆಶ್ರಯದಲ್ಲಿ ನಡೆದ ಮೊಟ್ಟೆ ಕೋಳಿ ಸಾಕಾಣಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಲಾಭದಾಯಕ ಹೈನುಗಾರಿಕೆ, ಕೋಳಿ, ಕುರಿ, ಆಡು ಸಾಕಾಣಿಕೆ ಯೋಜನೆಗಳನ್ನು ಪ್ರೋತ್ಸಾಹಿಸಿ ಹೆಚ್ಚು ಒತ್ತು ನೀಡುತ್ತಿದೆ.
ವೈಯಕ್ತಿಕ ಮತ್ತು ಸ್ವ-ಸಹಾಯ ಗುಂಪುಗಳು ಈ ಕುಟುಂಬ ಕೇಂದ್ರಿತ ವ್ಯವಹಾರವನ್ನು ಪ್ರಾರಂಭಿಸಬಹುದು. ಅಭಿಲಾಷ್ ಹ್ಯಾಚರೀಸ್ ಎಬಿಎಸ್ ಪಂಜರ, ಬಿ 380 ಮತ್ತು ವ್ಯಾನ್ಕೋಬ್ 430 ತಳಿಯ ಕೋಳಿ ಮತ್ತು ಅವುಗಳ ಅಗತ್ಯ ಸಾಮಗ್ರಿಗಳನ್ನು ಕಡಿಮೆ ವೆಚ್ಚದಲ್ಲಿ ಪೂರೈಸುವುದರಿಂದ ಸಮರ್ಥನೀಯ ರೀತಿಯಲ್ಲಿ ಅತ್ಯಂತ ಸಮಂಜಸ ಲಾಭ ಎಂದು ತಿಳಿಸಿದರು.
ಕೇರಳದ ಮೊಟ್ಟೆ ಕೋಳಿ ಸಾಕಾಣಿಕೆ ತಜ್ಞ ಸ್ಯಾನಿ ಲೋಬೋ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರ ದುರಾಸೆಗೆ ವಿಷಕಾರಿ ಹಾರ್ಮೋನ್ಸ್ ಹೊಂದಿರುವ ಕೋಳಿ ಮತ್ತು ಅದರ ಮೊಟ್ಟೆ ದೀರ್ಘಕಾಲದ ಅನಾರೋಗ್ಯ ಕಾಯಿಲೆಗಳಿಗೆ ಕಾರಣವಾಗಿವೆ. ಜೊತೆಗೆ ಫಾಸ್ಟ್ ಫುಡ್ ಶೈಲಿಯ ಆಹಾರ ಬಳಕೆಯಿಂದ ಅಪಾಯಕಾರಿ ಇದೆ. ಈ ಹಿನ್ನೆಲೆಯಲ್ಲಿ ಸಾವಯವ ಕೋಳಿ ಸಾಕಾಣಿಕೆಗೆ ಮನೆಯಲ್ಲಿರುವ ತರಕಾರಿ ತ್ಯಾಜ್ಯ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕೆ.ಎನ್.ಪ್ರಭುಸ್ವಾಮಿ, ಯೋಜನಾ ಜಿಲ್ಲಾ ನಿರ್ದೇಶಕ ಜಯಕುಮಾರ್ ನಾಗನಾಳ, ಯೋಜನಾಧಿಕಾರಿ ಸಂಜೀವ್ ನಾಯ್ಕ, ಕೃಷಿ ಮೇಲ್ವಿಚಾರಕ ಮಧುರಾಜ್, ಯೋಜನೆಯ ಜ್ಞಾನ ಕಾಸ ಸಮನ್ವಯಾಧಿಕಾರಿ ಆಶಾ , ವಲಯದ ಮೇಲ್ವಿಚಾರಕರಾದ ನಾರಾಯಣ್, ಮಮತ, ಶೋಭ, ಸುಧಾ, ರಾಜೇಶ್ವರಿ ಇತರರಿದ್ದರು.