Advertisement

ಪ್ರಕೃತಿ ಚಿಕಿತ್ಸೆ, ಯೋಗ ಜಾಗೃತಿಗೆ ಹಲವು ಉಪಕ್ರಮ

08:54 AM Nov 22, 2017 | |

ಬೆಳ್ತಂಗಡಿ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಲು ಕೇಂದ್ರ ಸರಕಾರ ಯೋಗ ಗ್ರಾಮಗಳನ್ನು ರೂಪಿಸಿದ್ದು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿಗೆ ಹಲವು ಉಪಕ್ರಮ ಕೈಗೊಂಡಿದೆ ಎಂದು ಕೇಂದ್ರದ ಆಯುಷ್‌ ಇಲಾಖಾ ಸಹಾಯಕ ಸಚಿವ ಶ್ರೀಪಾದ್‌ ಯೆಸ್ಸೋ ನಾಯ್ಕ ಅವರು ಹೇಳಿದರು.

Advertisement

ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗೋತ್ಸವ ಮತ್ತು ಎರಡನೇ ಒಕ್ಕೂಟ ಯೋಗ ಕ್ರೀಡಾ ಕಪ್‌ 2017ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಂಡ್ಯದ ನಾಗಮಂಗಲ, ಭುವ ನೇಶ್ವರ, ಪಶ್ಚಿಮ ಬಂಗಾಲ ಹಾಗೂ ಗೋವಾ ದಲ್ಲಿ ಸದ್ಯ ದಲ್ಲಿಯೇ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ ಪ್ರಾರಂಭಿಸ ಲಾಗುವುದು ಎಂದರು.

ಎಸ್‌ಡಿಎಂಗೆ ಮಾನ್ಯತೆ
ಉಜಿರೆಯಲ್ಲಿರುವ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಉತ್ಕೃಷ್ಟತಾ ಕಾಲೇಜು ಮಾನ್ಯತೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ನೀಡಲಾಗುತ್ತಿದೆ ಎಂದರು.

ಮನೆಯೆ ಮೊದಲ ಪಾಠಶಾಲೆ
ಯೋಗೋತ್ಸವ ಉದ್ಘಾಟಿಸಿದ ಆಸ್ಟ್ರಿಯಾದ ಮಹಾಮಂಡಲೇಶ್ವರ ಶ್ರೀ ಪರಮ ಹಂಸ ಸ್ವಾಮಿ ಮಹೇಶ್ವರಾ ನಂದಜಿ ಮಾತನಾಡಿ, ಯೋಗ ಎಂದರೆ ನಿರ್ದಿಷ್ಟ ಧರ್ಮ ಅಲ್ಲ; ಕಲೆಯೂ ವಿಜ್ಞಾನವೂ ಆಗಿದೆ. ನಿತ್ಯವೂ ಯೋಗಾ ಭ್ಯಾಸ ದಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ವನ್ನು ಹೊಂದ ಬಹುದು. ಮನೆ ಯಲ್ಲಿ ತಾಯಿ- ತಂದೆ ಮಮತೆ ಯಿಂದ ನೀಡುವ ನೈತಿಕ ಶಿಕ್ಷಣ ಮತ್ತು ಸಂಸ್ಕಾರ ಶ್ರೇಷ್ಠ ವಾಗಿದೆ. ಸಸ್ಯಾಹಾರ ಸೇವನೆ ಮಾಡ ಬೇಕು. ಕೃಷಿಯೇ ಉತ್ತಮ ಸಂಸ್ಕೃತಿ ಎಂದರು.

ಬೆಂಗಳೂರಿನಲ್ಲಿ  ಆಸ್ಪತ್ರೆ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ವತಿಯಿಂದ ಬೆಂಗ ಳೂರು ಮತ್ತು ದುಬಾೖಯಲ್ಲಿ ಸದ್ಯ ದಲ್ಲಿಯೇ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾರಂಭಿಸ ಲಾಗುವುದು ಎಂದು ಪ್ರಕಟಿಸಿದರು.

Advertisement

ನಿತ್ಯವೂ ಯೋಗ, ಧ್ಯಾನ, ಪ್ರಾರ್ಥನೆ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಶಕ್ತಿ ವರ್ಧನೆ ಯೊಂದಿಗೆ ಶಾಂತಿಯಿಂದ ಆರೋಗ್ಯ ಪೂರ್ಣ ಜೀವನ ನಡೆಸಬಹುದು. ಯುವ ಜನತೆ ಆರೋಗ್ಯ ಭಾಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಯೋಗ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಅಶೋಕ್‌ ಕುಮಾರ್‌ ಅಗ್ರವಾಲ್‌, ಸ್ವಾಮಿ ಜ್ಞಾನೇಶ್ವರ ಗುರೂಜಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಂತಿವನ ಟ್ರಸ್ಟ್‌ನ ಟ್ರಸ್ಟಿ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಯೋಗ ಫೆಡರೇಶನ್‌ ಆಫ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷೆ ಇಂದು ಅಗ್ರವಾಲ್‌, ಕರ್ನಾಟಕ ಅಮೆಚೂರ್‌ ಯೋಗ ನ್ಪೋರ್ಟ್ಸ್ ಸೋಸಿಯೇಶನ್‌ ಅಧ್ಯಕ್ಷ ಗಂಗಾಧರಪ್ಪ, ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಚಾರ್ಯ ಡಾ| ಪ್ರಶಾಂತ್‌ ಶೆಟ್ಟಿ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ. ಶಶಿಕಾಂತ್‌ ಜೈನ್‌ ಉಪಸ್ಥಿತರಿದ್ದರು.

ಟ್ರಸ್ಟಿ ಡಿ. ಹಷೇìಂದ್ರ ಕುಮಾರ್‌ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಡಾ| ಚಂದ್ರಕಾಂತ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next