Advertisement
“”ಅಜ್ಜಿ, ನಿಮ್ಮ ಕಾಲದ ಹೆಂಗಸರ ಸೌಂದರ್ಯದ ರಹಸ್ಯವೇನು?” ಅಂತೊಮ್ಮೆ ಅವರ ನ್ನು ಕೇಳಿದ್ದೆ. ಆಗ ಅವರು, “”ಅದರಲ್ಲಿ ರಹಸ್ಯವೇನು ಬಂತು? ಸುತ್ತಮುತ್ತ ಏನು ಸಿಗುತ್ತಿತ್ತೋ, ಅದನ್ನೇ ಎಲ್ಲಾ ಬಳಸುತ್ತಿದ್ವಿ. ಈಗಿನಂತೆ ಬ್ಯೂಟಿ ಪಾರ್ಲರೂ, ಕ್ರೀಮು, ಸೋಪು, ಶ್ಯಾಂಪೂ ಏನೂ ಇರಲಿಲ್ಲ. ಮೈಗೆ ಕಡಲೆಹಿಟ್ಟು, ತಲೆಗೆ ಸೀಗೇಕಾಯಿ, ಮುಖಕ್ಕೆ ಅರಿಶಿನ” ಅಂತ ಹೇಳಿದ್ದರು. ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ ಅನ್ನೋದು ಅಜ್ಜಿ ಯಾವಾಗಲೂ ಹೇಳುತ್ತಿದ್ದ ಮಾತು.
Related Articles
ಮೈ ಬಣ್ಣ ಬಿಳಿಯಾಗಿಸಲು ಸಾವಿರಾರು ರೂ. ಖರ್ಚು ಮಾಡುವಿರೇಕೆ? ಲಿಂಬೆರಸಕ್ಕೆ, ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ, ಈ ಮಿಶ್ರಣಕ್ಕೆ ಒಂದು ಟೀ ಚಮಚ ಸೌತೆಕಾಯಿ ರಸವನ್ನು ಹಾಕಿ ಚೆನ್ನಾಗಿ ಬೆರೆಸಿ, ಮುಖ- ಕುತ್ತಿಗೆ ಭಾಗಗಳಿಗೆ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯುವುದು, ಪಾರ್ಲರ್‌ನಲ್ಲಿ ಒಂದು ಗಂಟೆ ಮುಖಕ್ಕೆ ಕೆಮಿಕಲ್ ಉಜ್ಜಿಸಿಕೊಳ್ಳುವುದಕ್ಕಿಂತ ಹೆಚ್ಚು ಪರಿಣಾಮಕಾರಿ.
Advertisement
ಒಡವೆಗೆ ತೊಡಕು ಮೊಡವೆಒಂದು ತುಂಡು ಶ್ರೀಗಂಧವನ್ನು, ಸ್ವಲ್ಪ ಸೌತೆಕಾಯಿ ರಸ ಅಥವಾ ಗುಲಾಬಿ ನೀರಿನೊಂದಿಗೆ ಸ್ವತfವಾದ ಕಲ್ಲಿನಲ್ಲಿ ತೇಯ್ದು, ಆ ಮಿಶ್ರಣವನ್ನು ದಿನಕ್ಕೊಂದು ಬಾರಿ ಮುಖಕ್ಕೆ ಲೇಪಿಸಬೇಕು. ಪಾದಗಳಿಗೆ ಲಿಂಬೆಸ್ನಾನ
ಅಂಗೈ, ಅಂಗಾಲು ಒಡೆದಿದ್ದರೆ ಪೆಡಿರ್ಕ್ನೂ ಮಾಡಿಕೊಳ್ಳಬೇಕಿಲ್ಲ. ಅಂಗಾಲಿಗೆ ಲಿಂಬೆರಸವನ್ನು ತಿಕ್ಕಿ ಸ್ವಲ್ಪ ಸಮಯ ಬಿಟ್ಟು ತೊಳೆದು, ಬೆಣ್ಣೆ ಅಥವಾ ಹಾಲಿನ ಕೆನೆಯನ್ನು ಹಾಕಿ ತಿಕ್ಕಿದರೆ, ಚರ್ಮ ನುಣುಪಾಗುತ್ತದೆ. ಹುಬ್ಬಿಗೆ ಕೊಬ್ಬರಿ ಎಣ್ಣೆ ಕುಡಿಸಿ
ಕಣ್ಣಿನ ಹುಬ್ಬುಗಳನ್ನು ಕಪ್ಪಾಗುವಂತೆ ಮಾಡಲು ದಿನವೂ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಮೃದುವಾಗಿ ಹಚ್ಚಿ. ಅಂದವಾದ ತುಟಿಯ ರಹಸ್ಯ ಎಲ್ಲಿ ಅಡಗಿದೆ ಗೊತ್ತಾ? ಅಧರಂ ಮಧುರಂ
ತಾವರೆಯ ಮೊಗ್ಗಿನೊಳಗೆ ಕೇಸರದ ಬಳಿಯಿರುವ ಸಣ್ಣ ದಳಗಳನ್ನು ಲಿಂಬೆರಸದಲ್ಲಿ ಅದ್ದಿ ತುಟಿಗೆ ತಿಕ್ಕುವುದರಿಂದ ಕಪ್ಪಾದ ತುಟಿಗಳು ಗುಲಾಬಿ ಬಣ್ಣ ಪಡೆಯುತ್ತವೆ. ನ್ಯಾಚುರಲ್ ಫೇಸ್‌ಪ್ಯಾಕ್
ಮುಖದ ಸೌಂದರ್ಯಕ್ಕೆ ಸೌತೆಕಾಯಿ ರಸವನ್ನು ಹತ್ತಿಯಲ್ಲಿ ಅದ್ದಿ ಮುಖದ ಮೇಲೆ ಮೃದುವಾಗಿ ಉಜ್ಜಿ. ಬಳಲಿದ ಚರ್ಮಕ್ಕೆ ಆರೈಕೆ ಸಿಗುತ್ತದೆ. ಕ್ಯಾರೆಟ್ ಅನ್ನು ತುರಿದು, ಆದರ ರಸವನ್ನು ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ವೇದಾವತಿ ಎಚ್. ಎಸ್.