Advertisement
ದೇವರ ಹೆಸರಲ್ಲಿ ಬಡಜನತೆಯ ಸುಲಿಗೆ ಮಾಡುತ್ತಿದ್ದ ವರ್ಗಕ್ಕೆ ಈಗ ದಿಕ್ಕೇ ತೋಚದಂತಾಗಿದೆ.
Related Articles
Advertisement
ಕೋವಿಡ್ ವೈರಸ್ ಹರಡುವಿಕೆಗಿಂತಲೂ ವೇಗವಾಗಿ ಹರಡಿದ ‘ಕೋಮು ವೈರಸ್’ಗೆ ಸದ್ಯ ಬ್ರೇಕ್ ಬಿದ್ದಿದೆ. ದೇಶಕ್ಕೆ ದೇಶವೇ ಲಾಕ್‌ಡೌನ್ ಆದಾಗಲೂ ಪರಿಸ್ಥಿತಿಯ ಗಂಭೀರತೆ ಅರಿತ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಜಾತೀಯ ಮತಭೇದದ ಸಂದೇಶ ರವಾನಿಸಿ, ಮಜಾ ಉಡಾುಸಿದ್ದರು.
ದಿನಗಳೆಯುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆ ತನ್ನ ಮನೆಗೇ ಬರಸಿಡಿಲಿನಂತೆ ಬಡಿದಾಗ ಇಂತಹ ವಿಷಯ ವಿಘ್ನ ಸಂತೋಞಿಗಳ ಸಂದೇಶಗಳು ಕ್ಷೀಣಿಸತೊಡಗಿವೆ. ಇನ್ನೂ ಒಂದು ತಿಂಗಳು ಇದೇ ಸ್ಥಿತಿ ಮುಂದುವರಿದಲ್ಲಿ ಜಾತೀಯ ತಡೆಗೋಡೆ ತನ್ನಿಂದ ತಾನೇ ಬಿರುಕು ಬಿಟ್ಟು, ನೆರೆಮನೆಯವರ ಪರಿಚಯವಾಗಲಿದೆ.
ಅಂದರೆ, ಸಾವಿನಂಚಿನಲ್ಲಿರುವ ಶ್ರೀಮಂತರಿಗೂ ಬಡವರಿಗೂ ಯಾವುದೇ ಅಂತರವಿಲ್ಲ ಎಂಬುದು ಮನದಟ್ಟಾಗಲಿದೆ. ಸಾವು ಯಾರನ್ನೂ ಬಿಟ್ಟಿಲ್ಲ, ಸಾವು ಗೆದ್ದವರಿಗೆ ಕೋವಿಡ್ ತಟ್ಟಲಿಕ್ಕಿಲ್ಲ ಎಂದು ಹೇಳುವವರಿದ್ದಾರೆ.
ಹಾಗಾದರೆ ಈ ಜಗತ್ತಿನಲ್ಲಿ ಸಾವು ಗೆದ್ದವರಿದ್ದಾರೆಯೇ? ಹುಟ್ಟಿದ ಜೀವಂತ ಮನುಷ್ಯ ಆತ ಸ್ವಾಮಿಯಾಗಿರಲಿ, ಧರ್ಮಗುರುವಾಗಿರಲಿ, ಪಾದ್ರಿ, ಮೌಲ್ವಿ ಸ್ವಯಂ-ಘೋಷಿತರಿರರಲಿ ಯಾರನ್ನು ಕೋವಿಡ್ ಉಸಿರುಗಟ್ಟಿಸದೆ ಹಾಗೆಯೇ ಸುಮ್ಮನೆ ಬಿಡದು. ಈ ಜಗತ್ತಿನಲ್ಲಿ ಇನ್ನೊಂದಷ್ಟು ಕಾಲ ಮನುಷ್ಯರಿರಬೇಕೆಂದುಕೊಂಡಲ್ಲಿ, ನಾವೆಲ್ಲರೂ ಜಾಗೃತೆ ವಹಿಸುವುದು ಉಚಿತ.
ಪ್ರಸಕ್ತ ಪರಿಸ್ಥಿತಿಯಲ್ಲಿ ಮನುಷ್ಯರ ಸ್ವೇಚ್ಛಾಚಾರ, ಸ್ವಾತಂತ್ರ್ಯಕ್ಕೆ ಒಂದಷ್ಟು ಬ್ರೇಕ್ ಬಿದ್ದಿದೆ ಎಂಬುದು ಸತ್ಯ. ಅಳಿದುಳಿದ ಕಾಡುಗಳಲ್ಲಿ ಪ್ರಾಣಿ – ಪಕ್ಷಿಗಳು ಭಯಭೀತಿ ಬಿಟ್ಟು ತಿರುಗಾಡುತ್ತಿರುವುದೇ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಜಾತ್ರೆ, ಕೋಲ, ಬಲಿಪೂಜೆ, ನಮಾಜು ಗೌಜಿ ಗದ್ದಲಲ್ಲ. ಇವೆಲ್ಲ ಇದ್ದ ಸಂದರ್ಭಗಳಲ್ಲಿ ಎಷ್ಟೇ ಕಷ್ಟವಾದರೂ ಅವಕ್ಕೆ ಮನುಷ್ಯ ಕುಲ ಒಗ್ಗಿ ಹೋಗಿತ್ತು. ಜಾತ್ರೆ, ಉತ್ಸವ, ಕೋಲ ನೇಮ, ಉರುಸ್… ಹೀಗೆ ಅನೇಕಾನೇಕ ನವನವೀನ ಕಾರ್ಯಕ್ರಮ ಆಯೋಜಿಸಿ, ಜೇಬು ತುಂಬಿಕೊಳ್ಳುತ್ತಿದ್ದ ವರ್ಗಕ್ಕೆ ಈಗ ಸುನಾಮಿ ಬೀಸಿದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಎಲ್ಲರಿಗೂ ಎಲ್ಲರ ಗುರುತು ಸಿಗಲಿದೆ. “ಸಾವು’ ಇದೆಲ್ಲದರ ಹಿಂದಿರುವ ಸತ್ಯ ಎಂಬುದು ಜಾಹೀರಾಗಲಿದೆ.
ಈಗಲಾದರೂ “ಮಾನವೀಯತೆ’ ಎಂಬ ಪದದ ಅರ್ಥ ತಿಳಿದು ವ್ಯವಹರಿಸುವುದು ಮನುಷ್ಯ ಧರ್ಮವಾಗಲಿದೆ. ಎಲ್ಲಿ ಮಾನವೀಯತೆಗೆ ಬೆಲೆ ಇಲ್ಲದೆ, ಮನುಷ್ಯ ಸೃrಗಳಿಗೆ ಬೆಲೆ -ನೆಲೆಯಾಗುತ್ತದೆಯೋ ಅಲ್ಲಿಯವರೆಗೆ ಮನುಷ್ಯನ ಒದ್ದಾಟ-ಗುದ್ದಾಟಗಳಿಗೆ ಕೊನೆ ಎಂಬುದಿಲ್ಲ. ಅದಕ್ಕೆ ಕೇವಲ ಕೋವಿಡ್ ವೈರಸ್ ಬರಬೇಕಾಗಿಲ್ಲ.
ಭವಿಷ್ಯದಲ್ಲಿ ಇದಕ್ಕಿಂತಲೂ ದೊಡ್ಡ ಸಮಸ್ಯೆ ಮನುಕುಲ ಕಾಡಬಹುದು. ಆದ್ದರಿಂದ ಎಚ್ಚರಿಕೆ ಮತ್ತು ಸಹೋದರತೆಯಿಂದದ ಬಾಳುವುದು ಮುಖ್ಯ. ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ಮೇಲಿನ ಅತ್ಯಾಚಾರ ನಿಲ್ಲಬೇಕು. ಜನಸಂಖ್ಯೆಗೆ ಕಡಿವಾಣ ಹೇರಿ, ಇರುವ ಜಾಗದಲ್ಲಿ ಬದುಕು ರೂಪಿಸಬೇಕು.
ದೇವರು ಎಂಬುದು ನಂಬಿಕೆ ಮತ್ತು ಮನುಷ್ಯರಿಗೆ ದಾರಿ ದೀಪವಾದ ನಂಬಿಕೆಯೇ ಹೊರತು, ಅದು ಪ್ರಕೃತಿ ಸೃಷ್ಟಿಯಲ್ಲ ಎಂಬುದನ್ನು ಅರಿಯುವ ಕಾಲದು. ಹಾಗಾದರೆ ಇನ್ನಾದರೂ ನಾವೆಲ್ಲ ಬೆಳಗೆದ್ದು ಭೂಮಿಗೆ, ಸೂರ್ಯ-ಚಂದ್ರ, ಪ್ರಕೃತಿ ಮಾತೆಗೆ ಕೈಮುಗಿಯುವ ಪರಿಪಾಠ ಬೆಳೆಸೋಣ. ಮನಸ್ಸಿನ ಮಲಿನತೆ ಬಿಟ್ಟು, ಮನುಷ್ಯರಾಗಿ, ಮನುಷ್ಯರಿಗಾಗಿ ಬದುಕೋಣ.
— ಧನಂಜಯ ಗುರುಪುರ