ಕೆ.ಆರ್.ಪೇಟೆ: ಮನುಷ್ಯನ ಉದಾಸೀನತೆ, ದುರಾಸೆ, ತಿಳಿಗೇಡಿತನದಿಂದ ಪ್ರಕೃತಿ ನಾಶವಾಗುತ್ತಿದೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಚ್. ಆರ್. ನಾಗೇಶ್ ತಿಳಿಸಿದರು.
ತಾಲೂಕಿನ ಅಘಲಯ ಗ್ರಾಪಂ ವ್ಯಾಪ್ತಿಯ ಹಳೇ ಅತ್ತಿಗುಪ್ಪೆ ಗ್ರಾಮದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿರುವ ಸ್ವಾತಂತ್ರ್ಯ ಭಾರತ ಅಮೃತ ಮಹೋತ್ಸವ-75ರ ಅಂಗವಾಗಿ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿ 2022ನೇ ಸಾಲಿನ ವಾರ್ಷಿಕ 7 ದಿನಗಳ ವಿಶೇಷ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಜನರಲ್ಲಿ ಸಮುದಾಯ ಅಭಿವೃದ್ಧಿಯ ಬಗ್ಗೆ ಕಾಳಜಿ, ಸಂಘಟಿತ ಶ್ರಮದಾನದಿಂದ ಆಗುವ ಅಭಿವೃದ್ಧಿ, ಜಾತಿ àಯತೆಯ ನಿರ್ಮೂಲನೆ, ಸಂಕುಚಿತ ಮನೋಭಾವನೆಯುಳ್ಳ ವ್ಯಕ್ತಿಗಳ ವಿಕಸನಗಳು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿ ರಾರ್ಥಿಗಳು ಗ್ರಾಮಗಳಲ್ಲಿ ಶ್ರಮದಾನ, ಸಾಂಸ್ಕೃತಿಕ ಕಾರ್ಯ ಕ್ರಮ ಮತ್ತು ವ್ಯಕ್ತಿ ವಿಕಸನಗಳ ಬಗ್ಗೆ ಜಾಗೃತಿ ಮೂಡಿಸಿ ಗ್ರಾಮ ಸ್ಥರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ರೈತರು, ಜಾನುವಾರುಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ದೂರವಿರುವಂತೆ ಬೀದಿ ನಾಟಕದ ಮೂಲಕ ಜಾಗೃತಿಗೊಳಿಸಿ ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್, ಎನ್.ಎಸ್.ಎಸ್ ಅಧಿಕಾರಿ ಶಶಿಕುಮಾರ್ ಬಿ.ಎಸ್., ಕನ್ನಡ ಉಪನ್ಯಾಸಕ ಪಿ.ಕೆ.ಧನಂಜಯ, ಅರ್ಥಶಾಸ್ತ್ರ ಉಪನ್ಯಾಸಕ ಎಂ.ಕೆ.ಮಂಜುನಾಥ್, ಮನೋಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ಯಾಮ್ ಎಚ್.ಆರ್. ಭಾಗವಹಿಸಿದ್ದರು.