Advertisement

ಪ್ರಕೃತಿ ವಿಸ್ಮಯ : ಅಡಿಕೆ ಹಿಂಗಾರವೇ ಗಿಡವಾಗಿ ಬೆಳೆಯುತ್ತಿದೆ!

02:40 AM Jul 05, 2018 | Karthik A |

ಪುತ್ತೂರು: ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಳ ಹೊಸಮನೆಯ ಅಡಿಕೆ ತೋಟದಲ್ಲಿ ಬೆಳೆದ ಅಡಿಕೆ ಗಿಡವೊಂದರಲ್ಲಿ ಹಿಂಗಾರವು ಅರಳಿ ಅಡಿಕೆ ಫಸಲು ಬಿಡುವ ಬದಲು ;ಗಿಡವಾಗಿ’ ಕೊಂಬೆಯಂತೆ ಬೆಳೆಯುವ ಮೂಲಕ ವಿಸ್ಮಯ ಸೃಷ್ಟಿಸಿದೆ. ಈ ಗಿಡದಲ್ಲಿ ಆರಂಭಿಕ ಹಿಂಗಾರವೇ ಕೊಂಬೆಯಂತೆ ಚಿಗಿತು, ಗಿಡವಾಗಿ ಬೆಳೆದಿದೆ. ಹಿಂಗಾರ ಪೂರ್ತಿಯಾಗಿ ಅರಳುವ ಮೊದಲೇ ಸಣ್ಣ ಸೋಗೆ ಕಾಣಿಸಿಕೊಂಡಿತ್ತು. 2 ವರ್ಷಗಳ ಅವಧಿಯಲ್ಲಿ ಬಿಟ್ಟ ನಾಲ್ಕು ಹಿಂಗಾರಗಳೂ ಇದೇ ರೀತಿ ಕೊಂಬೆಯಂತೆ ಬೆಳೆದಿವೆ. 

Advertisement


ಇದೇ ಪ್ರಥಮ

ಈ ಹಿಂದೆ ಉಡುಪಿ ಭಾಗದಲ್ಲಿನ ಅಡಿಕೆ ಮರವೊಂದರ ಹಿಂಗಾರದಲ್ಲಿನ ಅಡಿಕೆ ಗಿಡವಾಗಿ ಬೆಳೆದಿರುವುದು ನಮ್ಮ ಗಮನಕ್ಕೆ ಬಂದಿತ್ತು. ಆದರೆ ಅಡಿಕೆ ಮರದ ಹಿಂಗಾರವೇ ನೇರವಾಗಿ ಗಿಡವಾಗಿ ಬೆಳೆದಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಈ ಅಡಿಕೆ ಮರದಿಂದ ಬೇರ್ಪಡಿಸಿ ತೆಗೆದ ಗಿಡಗಳನ್ನು ಬೆಳೆಸಿ ಸಂಶೋಧನೆ ನಡೆಸುತ್ತೇವೆ. ಈ ಕುರಿತು ಅಧ್ಯಯನ ನಡೆಸಿದ ಬಳಿಕವಷ್ಟೇ ಈ ವಿಸ್ಮಯಕ್ಕೆ ಕಾರಣವೇನು ಎಂಬುವುದನ್ನು ತಿಳಿದುಕೊಳ್ಳಲು ಸಾಧ್ಯ.
– ನಾಗರಾಜ್‌ ಎನ್‌. ಆರ್‌. CPCRI ವಿಜ್ಞಾನಿ

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next