ಬೆಳ್ತಂಗಡಿ: ಮಾನವೀಯ ಸಂಬಂಧಗಳ ಮೌಲ್ಯ ಅರಿಯದ ಯಾವುದೇ ಪದವಿ ವ್ಯರ್ಥ. ಇಂದು ನಾಟಕೀಯ, ಯಾಂತ್ರಿಕ ಬದುಕುಗಳಿಗೆ ಸಿಲುಕಿ ಸಹಜತೆಯ ಬದುಕನ್ನು ಕಳೆದುಕೊ ಳ್ಳುತ್ತಿರುವುದು ವಿಷಾದನೀಯ ಎಂದು ಕೇಮಾರು ಸಾಂದೀಪನಿ ಸೇವಾಶ್ರಮದ ಈಶವಿಠಲದಾಸ ಸ್ವಾಮೀಜಿ ನುಡಿದರು.
ಮಹಾಚೇತನ ಯುವ ವೇದಿಕೆ ಕಣಿಯೂರು, ಬಂದಾರು, ಮೊಗ್ರು ಮತ್ತು ಅರಿವು ಪಚ್ಚೆ ಬಳಗ ಬಂಟ್ವಾಳ ಆಯೋ ಜನೆಯಲ್ಲಿ ನಡೆದ ಕಣಿಯೂರು ಗ್ರಾಮದ ನೀರಾಡಿ ಪಚ್ಚೆ ಪರ್ಬ ಮಕ್ಕಳ ವಿಶೇಷ ಪರಿಸರ ಶಿಬಿರದಲ್ಲಿ ಅವರು ಆಶೀರ್ವಚನ ನೀಡಿ, ಪುರುಷರು ಮಾದಕ ವ್ಯಸನಗಳಿಂದ ಹಾಳಾಗುತ್ತಿದ್ದರೆ, ಹೆಣ್ಣುಮಕ್ಕಳು ಟಿ.ವಿ. ಧಾರಾವಾಹಿ ವ್ಯಾಮೋಹದಿಂದ ಸಂಸ್ಕೃತಿ ಮರೆತು ಹಾಳಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಲೆಯಿಂದ ಮಾಡಿದ ಪೀಪಿ ವಾದ್ಯವನ್ನು ಸಾಮೂಹಿಕವಾಗಿ ಮಕ್ಕಳಿಂದ ಊದಿಸಿ ಮತ್ತು ಕೆಸರು ಮಣ್ಣಿಗೆ ಕೈ ಮುಳುಗಿಸಿ ಉದ್ದದ ಶ್ವೇತ ಬಟ್ಟೆಗೆ ಹಸ್ತ ಗುರುತು ಹಚ್ಚಿ ಮಕ್ಕಳ ವಿಶೇಷ ಪರಿಸರ ಶಿಬಿರವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು. ಅರಿವು ಪಚ್ಚೆ ಬಳಗ ಬಂಟ್ವಾಳದ ಇದರ ನಿರ್ದೇಶಕ, ಸಂಘಟಕ, ಕತ್ತಲ ಹಾಡುಗಾರ ನಾದ ಮಣಿನಾಲ್ಕೂರು ಪ್ರಸ್ತಾವಿಸಿ, ಪಚ್ಚೆಪರ್ಬ ಶಿಬಿರದ ಮಾಹಿತಿ ಹಂಚಿಕೊಂಡರು. ಕಲಾವಿದರಾದ ಶಿವಾನಂದ ನಾಯ್ಕ ಉಳಿ, ಜಯರಾಮ ನಾವಡ ಸ್ಥಳೀಯ ಪರಿಕರಗಳನ್ನು ಬಳಸಿ ಆಟಿಕೆ, ಆಲಂಕಾರಿಕ ವಸ್ತುಗಳನ್ನು ತಯಾ ರಿಸುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಗ್ರಾ.ಪಂ. ಸದಸ್ಯ ಯಶೋಧರ ಶೆಟ್ಟಿ ಕಣಿಯೂರು, ಡಾ| ಪ್ರವೀಣ್ ಸೆರಾವೊ, ಕಲಾವಿದ ಪ್ರಶಾಂತ್, ಸುಜಿತ್, ಆಶಾ, ಸಾಮಾಜಿಕ ಕಾರ್ಯಕರ್ತರಾದ ಅಣ್ಣು ಸಾಧನ, ಚೆನ್ನಕೇಶವ, ಪದ್ಮನಾಭ, ಬಿ.ಕೆ. ಅಮ್ಮು ಬಾಂಗೇರು, ಗಣೇಶ್ ಶೆಟ್ಟಿ ಸವಣಾಲು, ಪಾಲ್ಗೊಂಡರು.
ಅರಿವು ಪಚ್ಚೆ ಬಳಗದ ಶ್ವೇತಾ ತುಪ್ಪದ ಮನೆ, ಮಹಾಚೇತನ ಯುವ ವೇದಿಕೆಯ ಅಧ್ಯಕ್ಷ ಲೋಕೇಶ್ ನೀರಾಡಿ, ಪ್ರತಾಪ್, ಧರ್ಣಪ್ಪ ನೀರಾಡಿ, ತನಿಯಪ್ಪ ಪುದ್ದೊಟ್ಟು, ಅಮ್ಮು ಪುದ್ದೊಟ್ಟು, ರಘು ಪುನರಡ್ಕ, ಸುರೇಶ್ ನೀರಾಡಿ, ಸಂಧ್ಯಾ ನೀರಾಡಿ ಉಪಸ್ಥಿತರಿದ್ದರು. ಅಚುಶ್ರೀ ಬಾಂಗೇರು ನಿರೂಪಿಸಿ, ಪ್ರಮುಖರಾದ ಮೋನಪ್ಪ ನೀರಾಡಿ ವಂದಿಸಿದರು. ಸಂಜೆ “ಮನುಷ್ಯ ತಾನೊಂದೇ ವಲಂ’ ನಾಟಕ ವೀಡಿಯೋ ಪ್ರದರ್ಶಿಸಲಾಯಿತು.
ಪರಿಸರವನ್ನು ಪ್ರೀತಿಸಿ
ಪೊಳಲಿ ತಪೋವನದ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಮರ- ಗಿಡಗಳೊಂದಿಗೆ ಆಪ್ತವಾಗಿ ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಮರಗಳಿಗೂ ಒಂದು ಭಾಷೆ ಇದೆ, ಭಾವನೆ ಇದೆ. ನೆಲ- ಜಲ- ಪರಿಸರವನ್ನು ಪ್ರೀತಿಸಿ ಎಂದು ಮಕ್ಕಳಿಗೆ ಕರೆ ನೀಡಿದರು.