Advertisement

ಕಾಲು, ಕೈ ಸಂದಿಯಲ್ಲಿನ “ಆಣಿ”ಸಮಸ್ಯೆಗೆ ಇಲ್ಲಿದೆ ಪರಿಹಾರ

03:52 PM Mar 13, 2021 | Team Udayavani |

ಚರ್ಮದ ಆರೋಗ್ಯವು ನಮ್ಮ ದೇಹದ ಆರೋಗ್ಯದ ಒಂದು ಪ್ರಮುಖ ಭಾಗ. ನಮ್ಮ ಮುಖದ ಚರ್ಮವನ್ನು ಮಾತ್ರವಲ್ಲದೆ  ಸಂಪೂರ್ಣ ದೇಹದಲ್ಲಿನ ಚರ್ಮದ ಆರೈಕೆಯೂ ಅತೀ ಮುಖ್ಯ. ಸಾಮಾನ್ಯವಾಗಿ ಕೂಲಿ- ಕೃಷಿ  ಕೆಲಸ ಮಾಡುವವರ ಕಾಲುಗಳಲ್ಲಿ ಕೆಸರು ಗುಳ್ಳೆ , ಚರ್ಮ ಸವೆಯುವಿಕೆ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡುಬರುತ್ತದೆ. ಅವುಗಳಲ್ಲಿ ಆಣಿ ಸಮಸ್ಯೆಯೂ ಒಂದು.

Advertisement

ಈ ಆಣಿ ಸಮಸ್ಯೆಯು ಕೇವಲ ಕಾಲುಗಳಲ್ಲಿ ಮಾತ್ರ ಕಂಡುಬರದೆ, ಕೈ ಹಾಗೂ ಬೆರಳುಗಳ ಸಂದಿನಲ್ಲಿಯೂ ಕಾಣಬಹುದಾಗಿದೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರಲ್ಲಿ ಚರ್ಮದಲ್ಲಿ ಕಪ್ಪಾದ ಮಾಂಸದಂತಹ ಚರ್ಮ ಕಂಡುಬರುತ್ತದೆ.

ಈ ರೀತಿಯ ಸಮಸ್ಯೆ ಇರುವವರು ಮನೆಯಲ್ಲಿಯೇ ದೊರೆಯುವ ಕೆಲವು ನೈಸರ್ಗಿಕ ಉತ್ಪನ್ನಗಳಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಲಿಂಬೆ ಹಣ್ಣನ್ನು ಬಳಸಿ

ಲಿಂಬೆ ಹಣ್ಣಿನಲ್ಲಿ ಆಣಿಯ ಸಮಸ್ಯೆಯನ್ನು ಗುಣಪಡಿಸಬಲ್ಲ ಔಷಧೀಯ ಗುಣಗಳಿದ್ದು, ಒಂದು ಲಿಂಬೆಹಣ್ಣನ್ನು ಹಿಂಡಿ ಅದರ ರಸವನ್ನು ಆಣಿ ಇರುವ ಭಾಗಕ್ಕೆ ಲೇಪಿಸಬೇಕು. ಹೀಗೆ ನಿರಂತರವಾಗಿ ಲಿಂಬೆರಸವನ್ನು ಲೇಪನ ಮಾಡುವುದರಿಂದ ಚರ್ಮದಲ್ಲಿ ರೂಪುಗೊಂಡ ಆಣಿ ಗುಣಮುಖವಾಗುತ್ತದೆ.

Advertisement

ಇದನ್ನೂ ಓದಿ:ಎಂತಹ ಸಂದರ್ಭದಲ್ಲೂ ನಾವೆಲ್ಲರೂ ಜಾರಕಿಹೊಳಿ ಜೊತೆಗಿದ್ದೇವೆ: ಭೈರತಿ ಬಸವರಾಜು

ಈರುಳ್ಳಿ ಬಳಕೆ

ಈರುಳ್ಳಿಯಲ್ಲಿ ಚರ್ಮದ ಹಲವಾರು ಸಮಸ್ಯೆಗಳನ್ನು ಗುಣಪಡಿಸಬಲ್ಲ ಅಂಶಗಳಿದ್ದು, ಇದನ್ನು ನಿರಂತರವಾಗಿ ಆಣಿ ಇರುವ ಜಾಗಕ್ಕೆ ಹಚ್ಚುವುದರಿಂದ ಶೀಘ್ರವಾಗಿ ಆಣಿ ಗುಣಮುಖವಾಗುತ್ತದೆ.

ಹರಳೆಣ್ಣೆ ಬಳಸಿ

ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಹರಳೆಣ್ಣೆಯ ಪಾತ್ರ ಮಹತ್ವವಾಗಿದ್ದು, ಇದನ್ನು ಬಿಸಿನೀರಿಗೆ ಹಾಕಿ ಜೊತೆಯಲ್ಲಿ ಲಿಕ್ವಿಡ್ ಸೋಪ್ ಅನ್ನು ಸೇರಸಿ. ಈ ನೀರಿಗೆ ನಿಮ್ಮ ಕಾಲುಗಳನ್ನು ಅದ್ದುವುದರಿಂದ ಕಾಲಿನಲ್ಲಿರುವ ಆಣಿ ಸಮಸ್ಯೆ ಪರಿಹಾರವಾಗುತ್ತದೆ.

ಬೆಳ್ಳುಳ್ಳಿ ಬಳಕೆ

ಬೆಳ್ಳುಳ್ಳಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಒಳಗೊಂಡಿರುವ ಅಂಶಗಳಿದ್ದು, ಚರ್ಮಕ್ಕೆ ಸಂಬಂಧಿಸಿದ ಸೋಂಕು ಹಾಗೂ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಆಣಿ ಸಮಸ್ಯೆ ಇರುವವರು ಪ್ರತಿನಿತ್ಯ ರಾತ್ರಿ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ, ಆಣಿ ಇರುವ ಜಾಗಕ್ಕೆ ಹಚ್ಚಬೇಕು. ನಂತರ ಮರುದಿನ ಬೆಳಿಗ್ಗೆ ಬಿಸಿನೀರಿನಲ್ಲಿ ಕಾಲು ತೊಳೆಯಬೇಕು. ನಿರಂತವಾಗಿ ಹೀಗೆ ಮಾಡುವುದರಿಂದ ಆಣಿ ಸಮಸ್ಯೆ ಬಹುಬೇಗ ಗುಣಮುಖವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next