Advertisement

ನೈಸರ್ಗಿಕ ವಿಕೋಪ ವಿಶ್ವ ಬೊಕ್ಕಸಕ್ಕೆ 16.5ಲ.ಕೋ. ರೂ. ನಷ್ಟ

10:05 AM Feb 04, 2020 | sudhir |

ನೈಸರ್ಗಿಕ ವಿಪತ್ತು ಮತ್ತು ಮಾನವ-ನಿರ್ಮಿತ ವಿಪತ್ತುಗಳಿಂದ ಜಾಗತಿಕವಾಗಿ ಆರ್ಥಿಕ ಕ್ಷೇತ್ರಕ್ಕೆ 16.5 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು 2020ರ ಹವಾಮಾನ ಅಧ್ಯಯನ ವರದಿ ಹೇಳಿದೆ. 2019ನೇ ಇಸವಿ ಹಣದುಬ್ಬರದ ದೃಷ್ಟಿಯಿಂದ ಹೇಳುವುದಾದರೆ 8ನೇ ಅತಿ ದುಬಾರಿ ವರ್ಷವಾಗಿದೆ. ಈ ಹಿನ್ನೆಲೆ ವಿಶ್ವ ಮತ್ತು ರಾಷ್ಟ್ರ ಮಟ್ಟದಲ್ಲಿ ಉಂಟಾದ ನೈಸರ್ಗಿಕ ವಿಪತ್ತು ಹಾಗೂ ಅದರಿಂದ ಆದ ನಷ್ಟ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Advertisement

409 ನೈಸರ್ಗಿಕ ವಿಕೋಪ ಘಟನೆ
2019ರಲ್ಲಿ ವಿಶ್ವಾದ್ಯಂತ ಒಟ್ಟು 409 ನೈಸರ್ಗಿಕ ವಿಕೋಪ ಘಟನೆ ಗಳು ನಡೆದಿವೆ. ಏಷ್ಯನ್‌ ಪೆಸಿಫಿಕ್‌ ಪ್ರದೇಶ ಅನುಭವಿಸಿದ ಅತಿದೊಡ್ಡ ಸಂಖ್ಯೆಯ ನೈಸರ್ಗಿಕ ವಿಕೋಪ ಗಳಿಗೆ ಮತ್ತು ಅಧಿಕ ಮಟ್ಟದ ನಷ್ಟಕ್ಕೆ ಈ ವರ್ಷ ಸಾಕ್ಷಿಯಾಗಿದೆ.

15ರಷ್ಟು ಹೆಚ್ಚಳ
2018ರಲ್ಲಿ ಒಟ್ಟು 394 ನೈಸರ್ಗಿಕ ವಿಕೋಪ ಘಟನೆಗಳು ನಡೆದಿದ್ದು, 2019ಕ್ಕೆ ಇದರ ಪ್ರಮಾಣದಲ್ಲಿ 15 ಪ್ರಕರಣಗಳಷ್ಟು ಹೆಚ್ಚಳವಾಗಿದೆ.

ಶೇ.17ರಷ್ಟು
ಹವಾಮಾನ ಸಂಬಂಧಿತ ವಿಪತ್ತುಗಳಿಂದ ಆದ ನಷ್ಟ 21ನೇ ಶತಮಾನದ ಸರಾಸರಿಗಿಂತ ಶೇ.17ರಷ್ಟು ಹೆಚ್ಚು. ಅಂದರೆ 16.40 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಶೇ. 60ರಷ್ಟು ಹೆಚ್ಚಳ
ದಶಕಗಳ ಬಳಿಕ ಭೂಮಿ ಮತ್ತು ಹವಾಮಾನಕ್ಕೆ ಸಂಬಂಧಿಸಿದ ವಿಪತ್ತುಗಳು ಶೇ.60 ಹೆಚ್ಚಾ ಗಿವೆ. ದುಬಾರಿ ನೈಸರ್ಗಿಕ ವಿಕೋಪ ಕಳೆದ ವರ್ಷ ಭಾರತ, ಬಾಂಗ್ಲಾ ದೇಶದ ಮತ್ತು ಒಡಿಶಾದಲ್ಲಿ ಘಟಿಸಿದ ಫಾನಿ ಚಂಡಮಾರುತ ವಿಶ್ವದ ಹತ್ತನೇ ಅತ್ಯಂತ ದುಬಾರಿ ನೈಸರ್ಗಿಕ ವಿಕೋಪವಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.

Advertisement

ದೇಶದ ಕಥೆ ಏನು
2019ನೇ ಸಾಲಿನಲ್ಲಿ ಒಟ್ಟು 13 ನೈಸರ್ಗಿಕ ವಿಕೋಪ ಘಟನೆಗಳು ನಡೆದಿವೆ.
1,750 ಸಾವು: 2019ರ‌ಲ್ಲಿ ಮಾನ್ಸೂನ್‌ ಪ್ರವಾಹದಿಂದ 1,750 ಸಾವು ಸಂಭವಿಸಿದೆ.
72 ಸಾವಿರ ಕೋಟಿ ರೂ. ದೇಶದಲ್ಲಿ ಘಟಿಸಿದ ಪ್ರಕೃತಿ ವಿಕೋಪಗಳಿಂದ 72 ಸಾವಿರ ಕೋಟಿ ರೂ. ನಷ್ಟವಾಗಿದೆ.

ಇವುಗಳಿಂದ ಹೆಚ್ಚು
3 ವರ್ಷಗಳ ನೈಸರ್ಗಿಕ ವಿಕೋಪಗಳ ಪೈಕಿ ಸುಂಟರಗಾಳಿ, ನೆರೆ ಮತ್ತು ಚಂಡಮಾರುತದಿಂದ ಅತೀ ಹೆಚ್ಚು ನಷ್ಟವಾಗಿದ್ದು, 39 ಬಿಲಿಯನ್‌ ಡಾಲರ್‌ನಷ್ಟು ಚಂಡಮಾರುತದಿಂದ ಮತ್ತು 15 ಬಿಲಿಯನ್‌ ಡಾಲರ್‌ನಷ್ಟು ಪ್ರವಾಹದಿಂದ ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next