ಸುಬ್ರಹ್ಮಣ್ಯ: ಮಳೆಗಾಲದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತ ಸಭೆ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಸಭೆ ಬಳಿಕ ಅವರು ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗುಡ್ಡ ಕುಸಿತದಂತಹ ಅಪಾಯ ಕಾರಿ ಪ್ರದೇಶಗಳಲ್ಲಿನ ಮನೆ ನಿವಾಸಿಗ ಳನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿ ಸಲು ನೋಟಿಸ್ ನೀಡುವಂತೆ ಸೂಚಿಸಲಾಯಿತು. ತುರ್ತು ಸಂದರ್ಭಕ್ಕೆ ಅವಶ್ಯವಿರುವ ಪರಿಹಾರ ಶಿಬಿರಗಳನ್ನು ಪರಿಶೀಲಿಸುವಂತೆಯೂ ತಿಳಿಸಲಾಯಿತು.
ಮಳೆಗಾಲ ಸಂದರ್ಭದಲ್ಲಿ ಇಲಾಖೆಗಳು ಕೈಗೊಳ್ಳಬೇಕಾದ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಮುಂಜಾಗ್ರತೆ ವಹಿಸಬೇಕಾದ ಸ್ಥಳಗಳ ಬಗ್ಗೆ ಅಧಿ ಕಾರಿಗಳಿಂದ ಮಾಹಿತಿ ಪಡೆದರು. ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳುವಂತೆ ಅ ಧಿಕಾರಿಗಳಿಗೆ ಸೂಚಿಸಿದರು. ಚರಂಡಿ ದುರಸ್ತಿ, ದರ್ಪಣ ತೀರ್ಥ ನದಿಯ ಹೂಳು ತೆರವು ಮತ್ತಿತರ ಕೆಲಸ ನಿರ್ವಹಿಸಲು ಸಹಾಯಕ ಆಯುಕ್ತರು ಸೂಚಿಸಿದರು.
ಪಾರ್ಕಿಂಗ್ ಸಮರ್ಪಕವಾಗಿಸಿ: ಕುಕ್ಕೆ ಸುಬ್ರಹ್ಮಣ್ಯ ಯಾತ್ರಾ ಕ್ಷೇತ್ರವಾಗಿದ್ದು ಇಲ್ಲಿಗೆ ದಿನಂಪ್ರತಿ ಸಾವಿರಾರು ಭಕ್ತರು, ವಾಹನಗಳು ಆಗಮಿಸುತ್ತಿದ್ದು, ಇಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಾಗೂ ಅದರ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಮಾರಧಾರ ನದಿ ಬಳಿಯ ಹೆದ್ದಾರಿ ಬದಿ ಕಳೆದ ವರ್ಷ ಕುಸಿತ ಗೊಂಡಿದ್ದು ಆ ಪ್ರದೇಶಕ್ಕೆ ಭೇಟಿ ನೀಡಿದ ಜುಬಿನ್ ಮೊಹಪಾತ್ರ ಅವರು ಸ್ಥಳೀಯ ಪ್ರಮುಖರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು, ಮಳೆಗಾಲದಲ್ಲಿ ಯಾವುದೇ ಅಪಾಯ ಉಂಟಾಗದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾ ರಿಗಳಿಗೆ ವರದಿ ನೀಡಲು ಸೂಚಿಸಿದರು.ಸುಬ್ರಹ್ಮಣ್ಯದ ಸಮೀಪದ ನೂಚಿಲಎಂಬಲ್ಲಿ ಎತ್ತರದ ಗುಡ್ಡದ ಕೆಳಭಾಗದಲ್ಲಿನ ಪ್ರದೇಶದಲ್ಲಿ ಮನೆಗಳಿದ್ದು ಅಲ್ಲಿಗೆ ಸಹಾಯಕ ಆಯುಕ್ತರು ಭೇಟಿ ನೀಡಿದರು.
ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಈ ವರ್ಷದ ಮಳೆಗಾಲದಲ್ಲಿ ಮುಂಜಾಗ್ರತೆಗಾಗಿ ಅಲ್ಲಿನ ನಿವಾಸಿಗಳನ್ನು ಬೇರೆ ಕಡೆ ಸ್ಥಳಾಂತರಿಸಲು ನೋಟಿಸ್ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ, ಉಪತಹಶೀಲ್ದಾರ್ ಮನೋಹರ ಕೆ.ಟಿ., ಕಂದಾಯ ನಿರೀಕ್ಷಕ ಪೃಥ್ವಿ ಕುಮಾರ್, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.