Advertisement
ಆರೋಗ್ಯ ಸಮಸ್ಯೆ ಕಂಡು ಬರುವಾಗ ಪ್ರತಿಯೊಬ್ಬರೂ ಇಂಗ್ಲೀಷ್ ಮದ್ದನ್ನು ಅಧಿಕವಾಗಿ ಅವಲಂಬಿಸುತ್ತಾರೆ. ಆದರೆ ಕೆಲವೊಂದು ಬಾರಿ ನೈಸರ್ಗಿಕ ಮದ್ದುಗಳಿಂದ ರೋಗಗಳಿಗೆ ಪರಿಹಾರ ಸಿಗುತ್ತವೆ.· ಸಾಸಿವೆ ಎಣ್ಣೆಯಿಂದ ಅಸ್ತಮಾ ಉಂಟಾದಾಗ ಪರಿಹಾರ ಲಭಿಸುತ್ತವೆ. ಎದೆ ಭಾಗಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ಸ್ವಲ್ಪ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.
· ಒಣ ಅಂಜೂರದ ಹಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಸೇವಿಸುವುದರಿಂದ ಹಾಗೂ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಅಸ್ತಮಾ ರೋಗ ಕ್ರಮೇಣ ನಿವಾರಣೆಯಾಗುತ್ತದೆ.
· ಚಾ ವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರ ಬದಲಿಗೆ ಕಾಫಿ, ಅಥವಾ ಬ್ಲ್ಯಾಕ್ ಟೀ ಸೇವಿಸುವುದು ಉತ್ತಮ. ಇವುಗಳು ಸುಲಭ ಉಸಿರಾಟಕ್ಕೆ ಸಹಕಾರಿ.
· ಯಾವುದೇ ಔಷಧಗಳ ಸಹಾಯವಿಲ್ಲದೆ ರೋಗ ಗುಣಪಡಿಸುವ ಸಾಮರ್ಥ್ಯವಿರುವ ಆಕ್ಯುಪಂಕ್ಚರ್ ಚಿಕಿತ್ಸೆಯನ್ನು ಅಸ್ತಮಾ ರೋಗಗಳಿಗೆ ಬಳಸಬಹುದು.
· ಯೋಗ ಅಥವಾ ವ್ಯಾಯಾಮ ಮಾಡುವುದರಿಂದ ಅಸ್ತಮಾವನ್ನು ನಿಯಂತ್ರಿಸಬಹುದು. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮವನ್ನು ಮಾಡುವುದು ಹೆಚ್ಚು ಸೂಕ್ತ.
· ನಿಧಾನವಾಗಿ ಉಸಿರಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಅಸ್ತಮಾ ರೋಗವು ಕೇವಲ ಉಸಿರಾಟಕ್ಕೆ ಸಂಬಂಧಿಸಿದ್ದಾಗಿದೆ. ಆಹಾರ ಹಾಗೂ ದೇಹದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.