Advertisement

ಉಕ್ರೇನ್‌ನಲ್ಲಿ 7,000 ರಿಂದ 15,000 ರಷ್ಯಾದ ಸೈನಿಕರು ಹತ್ಯೆಗೀಡಾಗಿದ್ದಾರೆ: ನ್ಯಾಟೋ

01:33 PM Mar 24, 2022 | Team Udayavani |

ಮಾಸ್ಕೋ : ಉಕ್ರೇನ್‌ನಲ್ಲಿ ನಾಲ್ಕು ವಾರಗಳ ಯುದ್ಧದಲ್ಲಿ 7,000 ರಿಂದ 15,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ನ್ಯಾಟೋ ಬುಧವಾರ ಅಂದಾಜಿಸಿದೆ. ಉಕ್ರೇನ್ ನ ಯೋಧರು ನಿರೀಕ್ಷೆಗಿಂತ ಹೆಚ್ಚು ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮಾಸ್ಕೋಗೆ ಸುಲಭದ ಜಯವನ್ನು ನಿರಾಕರಿಸಿದ್ದಾರೆ ಎಂದು ನ್ಯಾಟೋ ಹೇಳಿದೆ.

Advertisement

ಉಕ್ರೇನಿಯನ್ ಅಧಿಕಾರಿಗಳ ಮಾಹಿತಿ ಮತ್ತು ಮುಕ್ತ ಮೂಲಗಳಿಂದ ಗುಪ್ತಚರ ಇಲಾಖೆ ಸಂಗ್ರಹಿಸಿರುವ ಮಾಹಿತಿಯನ್ನು ಆಧರಿಸಿ ಅಂದಾಜಿಸಲಾಗಿದೆ ಎಂದು ಹಿರಿಯ ನ್ಯಾಟೋ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎರಡನೇ ವಿಶ್ವ ಯುದ್ಧದ ನಂತರ ಯುರೋಪಿನ ಅತಿದೊಡ್ಡ ಆಕ್ರಮಣದಲ್ಲಿ ಫೆಬ್ರವರಿ 24 ರಿಂದ ರಷ್ಯಾ ತನ್ನ ಆಕ್ರಮಣವನ್ನು ಆರಂಭಿಸಿದ್ದು, ಉಕ್ರೇನ್‌ನ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಶೀಘ್ರವಾಗಿ ಉರುಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇನ್ನೊಂದೆಡೆ ಯುರೋಪ್‌ಗೆ ಪ್ರಯಾಣ ಆರಂಭಿಸುವ ಮೊದಲು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಬುಧವಾರ ಶ್ವೇತಭವನದಲ್ಲಿ ಮಾತನಾಡಿ, ರಷ್ಯಾ ರಾಸಾಯನಿಕ ಅಸ್ತ್ರಗಳನ್ನು ಬಳಸಬಹುದಾದ “ನಿಜವಾದ ಬೆದರಿಕೆ” ಇದೆ ಎಂದು ಅವರು ಎಚ್ಚರಿಸಿದ್ದಾರೆ. ಇತರ ನಾಯಕರೊಂದಿಗೆ ಆ ಅಪಾಯದ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ.

ಯುದ್ಧದ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಆಘಾತದ ಅಲೆಗಳಿಂದ ಹೆಚ್ಚುತ್ತಿರುವ ಇಂಧನ ಬೆಲೆಗಳು, ಜಾಗತಿಕ ಆಹಾರ ಪೂರೈಕೆಗಳ ಭಯ ಮತ್ತು ಶೀತಲ ಸಮರದ ಪ್ರತಿಧ್ವನಿಗಳೊಂದಿಗೆ ವಿಶ್ವದಲ್ಲಿ ತಲ್ಲಣ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next