ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್‌ನ ಬೆರಿಪದವು ಬಳ್ಳೂರು ಅಂಗನವಾಡಿ ಬಳಿಯಲ್ಲಿ ಕೋಳಿ ತ್ಯಾಜ್ಯ ಸಂಸ್ಕರಣೆ ಘಟಕದಿಂದ ಪರಿಸರ ನಿವಾಸಿಗಳ ಆರೋಗ್ಯಕ್ಕೆ ಮಾರಕವಾಗಿದ್ದು ಇದನ್ನು ಮುಚ್ಚ ಬೇಕೆಂಬುದಾಗಿ ಸ್ಥಳೀಯರು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ ಉದ್ಘಾಟಿಸಿ ಮಾತನಾಡಿದರು.
ಸಾರ್ವಜಕರ ಆರೋಗ್ಯಕ್ಕೆ ಮಾರಕವಾಗಿರುವ ಈ ಘಟಕವನ್ನು ತಕ್ಷಣ ಮುಚ್ಚಬೇಕು.ಇಲ್ಲದಿದ್ದಲ್ಲಿ ಘಟಕದ ಮುಂದೆ ಮುಚ್ಚುವ ತನಕ ಸರಣಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಆರ್. ಜಯಾನಂದ ಮಾತ ನಾಡಿ ಸಂಸ್ಕರಣೆ ಘಟಕದ ಪರವಾನಿಗೆ ರದ್ದು ಪಡಿಸಿ ಸ್ಥಳೀಯರ ಆರೋಗ್ಯವನ್ನು ಕಾಪಾಡ ಬೇಕೆಂಬುದಾಗಿ ಅಧಿಕಾರಿಗಳಲ್ಲಿ ವಿನಂತಿಸಿದರು.
ಗಾ.ಪಂ. ಸದಸ್ಯೆ ಕೆ. ಜಯಲಕ್ಷ್ಮೀ ಭಟ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸದಸ್ಯಪ್ರಸಾದ್ ರೈ ಕಯ್ನಾರ್, ಗ್ರಾ.ಪಂ. ಸದಸ್ಯರಾದ ಬಶೀರ್ ದೇವಕಾನ, ಚನಿಯ ಕೊಮ್ಮಂಗಳ, ಹರೀಶ್ ಬೊಟ್ಟಾರಿ, ಎಸ್.ಸುಬ್ರಹ್ಮಣ್ಯ ಭಟ್, ಕಿಶೊರ್ ಮುಮಾರ್ ಪೆರ್ವಡಿ, ಗಣೇಶ ಕುಲಾಲ್, ರಹೀಂ ನಡುಮನೆ, ತಾರಾ ವಿ. ಶೆಟ್ಟಿ, ಭವ್ಯಾ ಬಾಯಾರು ಪ್ರತಿಭಟನೆಗೆ ನೇತೃತ್ವ ನೀಡಿದರು. ರಾಮಪ್ರಕಾಶ್ ಭಟ್ ಸ್ವಾಗತಿಸಿದರು. ಪುರುಷೋತ್ತಮ ಬಳ್ಳೂರು ವಂದಿಸಿದರು.