Advertisement

ಸಾವೊ ಜಾಸಿಂಟೊ ದ್ವೀಪದಲ್ಲಿ ಧ್ವಜಾರೋಹಣಕ್ಕೆ ಸ್ಥಳೀಯರ ವಿರೋಧ

08:03 PM Aug 14, 2021 | Team Udayavani |

ಪಣಜಿ: ಇಲ್ಲಿನ ಸಾವೊ ಜಾಸಿಂಟೊ ದ್ವೀಪದಲ್ಲಿ ಧ್ವಜಾರೋಹಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ.

Advertisement

ನೌಕಾದಳವು 75 ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಆಚರಿಸಲಾಗುತ್ತಿರುವ ಆಜಾದಿ ಕೆ ಅಮೃತ ಮಹೋತ್ಸವ ಕಾರ್ಯಕ್ರಮದಡಿ  ಆಗಸ್ಟ್ 13 ರಿಂದ 15 ರವರೆಗೆ ದೇಶದಲ್ಲಿನ ವಿವಿಧ ದ್ವೀಪಗಳಲ್ಲಿ ಧ್ವಜಾರೋಹಣ ನಡೆಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ, ಗೋವಾದ ಸಾವೊ ಜಾಸಿಂಟೊ ಐಲ್ಯಾಂಡಿನಲ್ಲಿ ಧ್ವಜಾರೋಹಣಕ್ಕೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದರು.

ನೌಕಾದಳವು ಈ ದ್ವೀಪವನ್ನು ಬಂದ್ ಮಾಡಲಿದೆ ಎಂದು ಸ್ಥಳೀಯರು ತಪ್ಪು ತಿಳಿದುಕೊಂಡಿದ್ದರಿಂದ ಧ್ವಜಾರೋಹಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇಂದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ನಿಜ ಸಂಗತಿಯನ್ನು ಸ್ಥಳೀಯರ ಗಮನಕ್ಕೆ ತಂದು ಧ್ವಜಾರೋಹಣ ನಡೆಸಿದರು. ನಾಳೆ ಕೂಡ (ಆ.15) ಇಲ್ಲಿ ಧ್ವಜಾರೋಹಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next