Advertisement
ದೊಡ್ಡಬಳ್ಳಾಪುರದಲ್ಲಿ ಗಾಂಧಿ: ಮಹಾತ್ಮ ಗಾಂಧೀಜಿ 1934ರ ಜನವರಿ 4 ರಂದು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದರು.ನಾವು ಗಾಂಧೀಜಿಯನ್ನು ನೋಡಿದ್ದೇವೆ ಎಂದು ಹೇಳುವಾಗ ಇಲ್ಲಿನ ಹಿರಿತಲೆಗಳಿಗೆ ಏನೋ ಧನ್ಯತಾಭಾವ. ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನಸಂಖ್ಯೆ ಕೇವಲ 25 ಸಾವಿರ. ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸವಯ್ಯ, ರುಮಾಲೆ ಭದ್ರಣ್ಣ, ಎಚ್.ಮುಗುವಾಳಪ್ಪ, ನಾ.ನಂಜುಂಡಯ್ಯ ಹೂ ಮಾಲೆ ಹಾಕಿ ಆತ್ಮೀಯ ಸ್ವಾಗತ ಕೋರಿದ್ದರು.
Related Articles
Advertisement
ಗಾಂಧೀಜಿ ಅವರ ಉಸ್ತುವಾರಿಯನ್ನು ಮಹಾದೇವ ದೇಸಾಯಿ, ರಾಜಗೋಪಾಲಚಾರಿ ಹಾಗೂ ಗಂಗಾಧರರಾವ್ ದೇಶಪಾಂಡೆ ವಹಿಸಿಕೊಂಡಿದ್ದರು. ಏಪ್ರಿಲ್ 20 ರಂದು ಗಾಂಧಿ, ಕಸ್ತೂರಿಬಾ ಮತ್ತು ಹಂಜಾ ಹುಸೇನ್, ಎಲ್ಲರೂ ಗಿರಿಧಾಮದ ತಪ್ಪಲಿನ ಸುಲ್ತಾನ್‌ಪೇಟೆಗೆ ಬಂದಿಳಿದರು. ಇಲ್ಲಿಂದ ಗಿರಿಯೇ ಮೇಲಕ್ಕೆ ಇವರನ್ನು ಡೋಲಿಗಳ ಮೂಲಕ ಕರೆದೊಯ್ಯಲಾಯಿತು. ಕನ್ನಿಂಗ್ ಹ್ಯಾಂ ಭವನದಲ್ಲಿ ಗಾಂಧೀಜಿ ತಂಗಿದ್ದರು. ಅಂದು ಬೆಟ್ಟದಲ್ಲಿ ಜನಜಾತ್ರೆಯೇ ಸೇರಿತ್ತು.ಗಿರಿಧಾಮದಲ್ಲಿ ಬಂದುಹೋಗುವವರ ಸಂದಣಿ ಹೆಚ್ಚಿ, ಗಾಂಧಿ ಆರೋಗ್ಯ ಕೆಟ್ಟಿದ್ದೂ ಉಂಟು. ಆದರೆ ವೈದ್ಯರ ಕಟ್ಟುನಿಟ್ಟಿನ ನಿಗಾದಿಂದ ಅವರು ಬಹುಬೇಗ ಚೇತರಿಸಿಕೊಂಡರು. ಜೂನ್ 5 ರಂದು ಗಾಂಧೀಜಿ ಬೆಟ್ಟದಿಂದ ಬೆಂಗಳೂರಿಗೆ ತೆರಳಿದರು. ಇಲ್ಲಿರುವ ಯೋಗನಂದೀಶ್ವರ ದೇವಾಲಯಕ್ಕೆ ಹರಿಜನರ ಪ್ರವೇಶ ನಿಷಿದ್ಧ ಎಂದು ತಿಳಿದು, ಅಲ್ಲಿಗೆ ಭೇಟಿ ನೀಡಬೇಕೆಂಬ ಆಹ್ವಾನವನ್ನು ಗಾಂಧಿ ತಿರಸ್ಕರಿಸಿದ್ದರು. .1936ರಲ್ಲಿ ಮತ್ತೂಮ್ಮೆ ಹಠಾತ್ತನೆ ರಕ್ತದೊತ್ತಡ ಅಧಿಕವಾಗಿ ನಂದಿಗಿರಿಧಾಮವೇ ಪ್ರಶಸ್ತ ಸ್ಥಳವೆಂದು ಮತ್ತೂಮ್ಮೆ ಇಲ್ಲಿಗೆ ಆಗಮಿಸಿದ್ದರು. ಗಾಂಧೀಜಿಯನ್ನು ಡೋಲಿಯಲ್ಲಿ ಹೊತ್ತು ಸಾಗಲು ಎಲ್ಲರೂ ಸಜ್ಜಾಗಿದ್ದರು. ಆದರೆ ಕುಡುವತಿ ಗ್ರಾಮದಿಂದ ಇರುವ ಕುದುರೆ ರಸ್ತೆಯಲ್ಲಿ ಗಾಂಧಿ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದರು. ಈ ಬಾರಿ ಮೂರು ವಾರ ತಂಗಿದ್ದರು. ಇದೇ ವೇಳೆ ಖ್ಯಾತ ವಿಜ್ಞಾನಿ ಭಾರತರತ್ನ ಸರ್ ಸಿ.ವಿ. ರಾಮನ್ ಕೂಡ ಬೆಟ್ಟಕ್ಕೆ ಬಂದು ಮಹಾತ್ಮರೊಡನೆ ಕೆಲ ದಿನ ತಂಗಿದ್ದರು. ಗಾಂಧಿ ತಂಗಿದ್ದ ಕನ್ನಿಂಗ್‌ಹ್ಯಾಂ ಭವನಕ್ಕೆ 1949ರಲ್ಲಿ ಗಾಂಧೀ ನಿಲಯ ಎಂದು ನಾಮಕರಣ ಮಾಡಲಾಯಿತು. ಕಾಂಗ್ರೆಸ್ ಶಕ್ತಿ ವರ್ಧನೆಯಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟ ವ್ಯಾಪ್ತಿ ವಿಸ್ತರಿಸುವಲ್ಲಿ ಗಾಂಧೀಜಿ ಅವರ ನಂದಿಬೆಟ್ಟದ ವಾಸ್ತವ್ಯ ಪ್ರಮುಖ ಕಾರಣವಾಯಿತು. ಗಾಂಧಿ ಸ್ಮಾರಕ ಕಾಣ ಸಿಗಲ್ಲ: ನಂದಿಗಿರಿಯನ್ನು ನಿರ್ವಹಣೆ ಮಾಡುತ್ತಿರುವ ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ ಅತಿಥೇಯ ಸಂಸ್ಥೆಗಳಿಗೆ ಗಾಂಧೀ ಬಂದೋಗಿರುವ ವಿಚಾರ ಗೊತ್ತಿಲ್ಲ. ಗಾಂಧೀ ನಿಲಯ ಎಂಬ ಹೆಸರು ಹಾಗೂ ಅದರ ಮುಂದೆ ನಗುತ್ತಿರುವ ಗಾಂಧಿ ಪ್ರತಿಮೆಯೊಂದು ಕುರುಹು ಬಿಟ್ಟರೆ ಈ ಅತ್ಯಾಧುನಿಕ ವಸತಿ ಗೃಹದಲ್ಲಿ ಇತಿಹಾಸದ ಯಾವ ಕುರುಹುಗಳೂ ಇಲ್ಲ ಎನ್ನುವುದು ಬೇಸರದ ಸಂಗತಿ. * ಡಿ. ಶ್ರೀಕಾಂತ