Advertisement
ಬುಧವಾರ ಶಿಫಾರಸು ನಡೆಸುವುದಕ್ಕೆ ವಿವಿಧ ಕ್ರೀಡಾ ಸಂಸ್ಥೆಗಳಿಗೆ ಕೊನೆಯ ದಿನವಾಗಿತ್ತು. ಸದ್ಯದ ಕೋವಿಡ್ -19 ವೈರಸ್ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಕ್ರೀಡಾಪಟುಗಳಿಗೆ ವಿವಿಧ ಅಧಿಕಾರಿಗಳನ್ನು ಭೇಟಿಯಾಗಿ ವ್ಯಕ್ತಿಗಳ ಶಿಫಾರಸು ಪಡೆಯುವಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡಿರುವ ಕ್ರೀಡಾ ಸಚಿವಾಲಯವು ಸ್ವಯಂ ಶಿಫಾರಸು ನಡೆಸುವುದಕ್ಕೆ ಅಥ್ಲೀಟ್‌ಗಳಿಗೆ ಅವಕಾಶ ನೀಡಿದೆ. ವ್ಯಕ್ತಿಗಳ ಶಿಫಾರಸು ಅಗತ್ಯವಿರುವ ಅರ್ಜಿಯ ಭಾಗ ವನ್ನು ಖಾಲಿ ಬಿಡಬಹುದು ಎಂದು ಪ್ರಕಟಿಸಿದೆ. ಮಾತ್ರವಲ್ಲ ಎಲ್ಲರು ಕಡ್ಡಾಯವಾಗಿ ತಮ್ಮ ಶಿಫಾರಸು ಅರ್ಜಿಗಳನ್ನು ಇ-ಮೇಲ್ ಮೂಲಕವೇ ಕಳಿಸಬೇಕು ಎಂದು ಸೂಚಿಸಿದೆ.
Advertisement
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಗಡುವು ಜೂ.22ರ ತನಕ ವಿಸ್ತರಣೆ
02:06 AM Jun 04, 2020 | Sriram |
Advertisement
Udayavani is now on Telegram. Click here to join our channel and stay updated with the latest news.