Advertisement

ರಾಷ್ಟ್ರೀಯ ಸೀನಿಯರ್‌ ರೆಸ್ಲಿಂಗ್‌ : ಸಾಕ್ಷಿಯನ್ನು ಕೆಡವಿದ ಸೋನಂ

12:41 AM Jan 31, 2021 | Team Udayavani |

ಆಗ್ರಾ: ರಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ರಾಷ್ಟ್ರೀಯ ಸೀನಿಯರ್‌ ಕುಸ್ತಿ ಸ್ಪರ್ಧೆಯಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. 19 ವರ್ಷದ ಹರ್ಯಾಣದ ರೆಸ್ಲರ್‌ ಸೋನಂ ವಿರುದ್ಧದ 62 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸಾಕ್ಷಿ 5-7 ಅಂತರದ ಸೋಲನುಭವಿಸಿದರು.

Advertisement

ಇದು ಸೋನಂ ವಿರುದ್ಧ ಸಾಕ್ಷಿ ಅನುಭವಿಸಿದ 3ನೇ ಸೋಲು. ಸೋನಂ ಸ್ವರ್ಣ ಗೆದ್ದರು. ಕಂಚು ಮಧ್ಯಪ್ರದೇಶದ ಪುಷ್ಪಾ ಮತ್ತು ಹರ್ಯಾಣದ ಮನೀಷಾ ಪಾಲಾಯಿತು. ಸಾಕ್ಷಿ ಮಲಿಕ್‌ ಇಲ್ಲಿ ರೈಲ್ವೇಯನ್ನು ಪ್ರತಿನಿಧಿಸಿದ್ದರು.

50 ಕೆಜಿ ವಿಭಾಗದಲ್ಲಿ ಹರ್ಯಾಣದ ಮೀನಾಕ್ಷಿ, 55 ಕೆಜಿ ವಿಭಾಗದಲ್ಲಿ ಹರ್ಯಾಣದ ಅಂಜು, 57 ಕೆಜಿ ವಿಭಾಗದಲ್ಲಿ ಹರ್ಯಾಣದ ಅಂಶು, 72 ಕೆಜಿ ವಿಭಾಗದಲ್ಲಿ ಆರ್‌ಎಸ್‌ಪಿಬಿಯ ಪಿಂಕಿ ಚಿನ್ನದ ಪದಕ ಗೆದ್ದರು.

ಇದನ್ನೂ ಓದಿ:ರಣಜಿ ಪಂದ್ಯಾವಳಿ ಕೈಬಿಟ್ಟ BCCI :87 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ರದ್ದು

Advertisement

Udayavani is now on Telegram. Click here to join our channel and stay updated with the latest news.

Next