ಕುಷ್ಟಗಿ: ಪಂಜಾಬಿನ ಲುಧಿಯಾನಾದ ಖಾಲ್ಸಾ ಕಾಲೇಜಿನಲ್ಲಿ ಮಾ. 11 ರಿಂದ 14ರ ವರೆಗೆ ನೆಡೆದ ರಾಷ್ಟ್ರೀಯ ಪೆಂಕಾಕ್ ಸಿಲತ್ ಚಾಂಪಿಯನಶಿಪ್ ನಲ್ಲಿ ಕರ್ನಾಟಕ ರಾಜ್ಯದ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳು 1 ಬಂಗಾರ, 8 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ.
45- 50 ಕೆ.ಜಿ. ಯ ಸಿನೀಯರ್ ಮಹಿಳೆಯರ ಟ್ಯಾಂಡಿಗ್ ವಿಭಾಗದಲ್ಲಿ ಚಿಕ್ಕಮಗಳೂರಿನ ಸಂಪ್ರೀತಾ ಕಂಚಿನ ಪದಕ, 70-75 ಕೆ.ಜಿ ಯ ವಿಭಾದಲ್ಲಿ ಮೈಸೂರಿನ ರಶ್ಮೀ ಕೆ.ಆರ್. ಬೆಳ್ಳಿಯ ಪದಕ. ಕ್ರೀಯೇಟಿವ್ ಸೋಲೋ ವಿಭಾಗದಲ್ಲಿ ಬೆಂಗಳೂರಿನ ದೇಚಮ್ಮಾ ಸುಧ್ಹಯ್ಯಾ ಬೆಳ್ಳಿ ಪದಕ ಪಡೆದರೆ, ಪುರುಷರ ವಿಭಾಗದಲ್ಲಿ 85 -90ಕೆ.ಜಿ. ಯ ಟ್ಯಾಂಡಿಂಗ್ ವಿಭಾಗದಲ್ಲಿ ಚಿಕ್ಕಮಗಳೂರಿನ ಸುಶೀಲ್ ಕಂಚಿನ ಪದಕ, ಟೀಮ್ ಆರ್ಟಿಸ್ಟ್ಸಿಕ್
“ಗಾಂಡಾ” ವಿಭಾಗದಲ್ಲಿ ಬೆಂಗಳೂರಿನ ಹರ್ಷಿತ್ ಹಾಗೂ ಪಂಚೇಂದ್ರ ಬೆಳ್ಳಿಯ ಪದಕ ಮತ್ತು ಟೀಮ್ ಆರ್ಟಿಸ್ಟ್ಸಿಕ್ “ರೆಗು” ವಿಭಾಗದಲ್ಲಿ ಕೊಪ್ಪಳದ ಆಕಾಶ್ ದೊಡ್ಡವಾಡ, ಪ್ರದೀಪ್ ರಾಯಬಾಗಿ, ಮನೋಜ ಕುಮಾರ್ ಎ.ಪಿ. ಬೆಳ್ಳಿ ಪದಕ ಪಡೆದಿದ್ದಾರೆ.
ಮಾಸ್ಟರ್ಸ್ ಪುರುಷರ ಟ್ಯಾಂಡಿಂಗ್ (ಒಪನ್ 85+ಕೆ.ಜಿ) ವಿಭಾಗದಲ್ಲಿ ಮೈಸೂರಿನ ನವೀನ್ ಎಸ್. ಕಂಚಿನ ಪದಕ ಪಡೆದರೆ ಹಾಗೂ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಖಜಾಂಚಿಯಾದ ಕೊಪ್ಪಳ ಜಿಲ್ಲೆಯ ಹನಮಸಾಗರದ ಅಬ್ಧುಲ್ ರಜಾಕ್ ಟೇಲರ್ ಮಾಸ್ಟರ್ಸ್ ಟ್ಯಾಂಡಿಂಗ್ ವಿಭಾದಲ್ಲಿ (70 -75ಕೆ.ಜಿ) ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದು ವಿಶೇಷ.
ಪ್ರಥಮ ಬಾರಿಗೆ ರಾಜ್ಯ ಪೋಲಿಸ್ ತಂಡವು ಕ್ರೀಡಾಕೂಟದಲ್ಲಿ ಪಾಲ್ಗೋಂಡು ಪದಕ ಪಡೆದು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ. ಚಿಕ್ಕಮಗಳೂರಿನ ಮಹಿಳಾ ಪೋಲಿಸ್ ಠಾಣೆಯ ಹೆಡ್ ಕಾನೆಸ್ಟೆಬಲ್ ಆದ ಟಿ. ಎಸ್. ಗಿರೀಶ್ ಸೀನಿಯರ್ ಟ್ಯಾಂಡಿಂಗ್ (70- 75ಕೆ.ಜಿ) ವಿಭಾಗದಲ್ಲಿ ಕಂಚಿನ ಪದಕ ಹಾಗೂ ಮಾಸ್ಟರ್ಸ್ ವಿಭಾಗದ ಕ್ರೀಯೇಟಿವ್ ಸೋಲೋ ವಿಭಾಗದಲ್ಲಿ ಬೆಳ್ಳಿಪದಕ ಪಡೆದಿದ್ದಾರೆ.
ಇವರ ಕ್ರೀಡಾ ಸಾಧನೆಗೆ ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಅಧ್ಯಕ್ಷರು ಜಗನ್ನಾಥ ಆಲಂಪಲ್ಲಿ, ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ ಹಾಗೂ ಎಲ್ಲ ಪದಾಧಿಕಾರಿಗಳು, ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.