ಕುಷ್ಟಗಿ: ಹರಿಯಾಣದ ರೋಹತಕ್ ನ ಮಹರ್ಷಿ ದಯಾನಂದ ವಿಶ್ವ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಪೆಂಕಾಕ್ ಸೀಲತ್ ಚಾಂಪಿಯನ್ ಷಿಪ್ ನಲ್ಲಿ ರಾಜ್ಯದ ಸ್ಪರ್ಧಿಗಳು ಮಿಂಚಿದ್ದಾರೆ.
ಡಿಸೆಂಬರ್ 23ರಿಂದ 27ರವರೆಗೆ ನಡೆದ ಕ್ರೀಡಾಕೂಟದಲ್ಲಿ 32 ರಾಜ್ಯದ 1200 ಕ್ರೀಡಾಪಟುಗಳು ಭಾಗವಹಿಸಿದ್ದರು. ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಕೊಪ್ಪಳ, ಮೈಸೂರು, ಬೆಂಗಳೂರು ಹಾಗೂ ರಾಯಚೂರು ಜಿಲ್ಲೆಗಳ 26 ಬಾಲಕಿಯರು, 43 ಬಾಲಕರು ಸೇರಿದಂತೆ 70 ಕ್ರೀಡಾಪಟುಗಳು ಭಾಗವಹಿಸಿದ್ದರು. ತೀವ್ರ ಹಣಾಹಣಿಯಲ್ಲಿ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು 7 ಚಿನ್ನದ ಪದಕ, 10 ಬೆಳ್ಳಿ ಪದಕ, 13 ಕಂಚಿನ ಪದಕ ಪಡೆದು ಸಾಧನೆ ಮೆರೆದಿದ್ದಾರೆ.
ಬಾಲಕಿಯರ ವಿಭಾಗ: ಕೊಪ್ಪಳ ಜಿಲ್ಲೆಯ ರೇಣುಕಾ ವಡ್ಡರ್ (ಚಿನ್ನದ ಪದಕ) ನಿಸರ್ಗ ವಡ್ಡರ್ (ಕಂಚಿನ ಪದಕ), ಬೆಂಗಳೂರಿನ ಸಮೀಕ್ಷಾ ರಡ್ಡಿ (ಚಿನ್ನದ ಪದಕ), ಶ್ರೀ ವಿದ್ಯಾ ಹಾಗೂ ಶಿವಾನಿಬಾಯಿ (ಬೆಳ್ಳಿ ಪದಕ) ಕೀರ್ತನಾ (ಕಂಚಿನ ಪದಕ) ಹಾಗೂ ರಾಯಚೂರು ಜಿಲ್ಲೆಯ ಕಾಜಿ ತುಬಾ ಅನುಂ ಹಾಗೂ ಕಾವ್ಯಾಂಜಲಿ (ಬೆಳ್ಳಿ ಪದಕ), ಬೆಳಗಾವಿ ಜಿಲ್ಲೆಯ ರೇಣುಕಾ ತರಲೆ ಹಾಗೂ ಚಿಕಮಗಳೂರು ಜಿಲ್ಲೆಯ ನಿಶೆಲ್ ಡಿಸೋಜಾ (ಚಿನ್ನದ ಪದಕ) ರಿಯಾನ್ ಲೇವಿಸ್ (ಬೆಳ್ಳಿ ಪದಕ) ಶೋಭಾ, ವಿನ್ನೀಶಾ ಹಾಗೂ ಮೈಸೂರು ಜಿಲ್ಲೆಯ ಯಾಧವಿ (ಬೆಳ್ಳಿ ಪದಕ) ಶ್ರಧ್ಧಾ (ಕಂಚಿನ ಪದಕ)
ಬಾಲಕರ ವಿಭಾಗ: ಕೊಪ್ಪಳ ಜಿಲ್ಲೆಯ ಸೃಜನ್ ಅಂಗಡಿ, ಸಂಜಯ್ (ಚಿನ್ನದ ಪದಕ), ಸಾಕೇತ್ ಆಲಂಪಲ್ಲಿ ಹಾಗೂ ಆದಿತ್ಯ ಕೊತ್ವಾಲ್ (ಕಂಚಿನ ಪದಕ) ಕಾರ್ಯದರ್ಶಿ ಹಾಗೂ ಸಾನ್ವಿಕ್ (ಬೆಳ್ಳಿ ಪದಕ) ಚಿಕಮಗಳೂರು ಜಿಲ್ಲೆಯ ಮನೋಜ್ ಅರಸ್, ಅಮಾನ್ ಶ್ರೀವಾಸ್ತ ಹಾಗೂ ನಿಹಾಲ್ (ಚಿನ್ನದ ಪದಕ), ಕುಶಾಲ್ ಜ್ಞಾನದೀಪ (ಕಂಚಿನ ಪದಕ) ಮೈಸೂರು ಜಿಲ್ಲೆಯ ಹರ್ಷನ್ ಕಂಚಿನ ಪದಕ ಪಡೆದಿದ್ದಾರೆ.
ರಾಜ್ಯ ತಂಡದ ತರಭೇತುದಾರ, ತಾಂತ್ರಿಕ ನಿರ್ದೇಶಕ ಜಗದಶೀಧ ಎಸ್. ಪಿ ತಿಳಿಸಿದ್ದಾರೆ. ರಾಜ್ಯ ಪೆಂಕಾಕ್ ಸೀಲತ್ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ, ಕಾರ್ಯದ ವಿಜಯಕುಮಾರ ಹಂಚಿನಾಳ, ಖಜಾಂಚಿ ಅಬ್ದುಲ್ ರಝಾಕ್ ಟೇಲರ್ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ.