Advertisement

ಆ.13ರಂದು ರಾಷ್ಟ್ರೀಯ ಲೋಕ ಅದಾಲತ್‌: ನ್ಯಾ.ನಳಿನಿಕುಮಾರಿ

02:33 PM Jul 23, 2022 | Team Udayavani |

ಮಂಡ್ಯ: ಜಿಲ್ಲೆಯಲ್ಲಿ 75,870 ಪ್ರಕರಣ ಬಾಕಿ ಇದ್ದು, ಅದರಲ್ಲಿ 10,660 ವ್ಯಾಜ್ಯ ಪೂರ್ವ ರಾಜಿ ಆಗಬಹುದಾಗಿದೆ. ಇದರಲ್ಲಿ ಈಗಾಗಲೇ 590 ಇತ್ಯರ್ಥಗೊಂಡಿವೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶೆ ಎ.ಎಂ.ನಳಿನಿಕುಮಾರಿ ತಿಳಿಸಿದರು.

Advertisement

ನಗರದ ಎಡಿಆರ್‌ ಕಟ್ಟಡದಲ್ಲಿ ಲೋಕ ಅದಾಲತ್‌ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ರಾಜ್ಯಾದ್ಯಂತ ಆ.13ರಂದು ರಾಷ್ಟ್ರೀಯ ಲೋಕ ಅದಾಲತ್‌ ಹಮ್ಮಿ  ಕೊಂಡಿದ್ದು, ಇದರ ಭಾಗವಾಗಿ ಜಿಲ್ಲೆಯಲ್ಲಿಯೂ ಲೋಕ ಅದಾಲತ್‌ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಸಾರ್ವಜನಿಕರು ಕೋರ್ಟ್‌ನಲ್ಲಿ ಬಾಕಿಇರುವ, ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥ ಪಡಿಸಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧ ಪಟ್ಟವರಿಗೆ ತಿಳಿಸಬೇಕು. ಕಳೆದ ಬಾರಿ ಅದಾಲತ್‌ನಲ್ಲಿ ವಕೀಲರ, ಪಕ್ಷಗಾರರ ಹಾಗೂ ಎಲ್ಲಾ ಕೋರ್ಟ್‌ನ ನ್ಯಾಯಾ ಧೀಶರಸಹಯೋಗದೊಂದಿಗೆ 11,012 ಪ್ರಕರಣಇತ್ಯರ್ಥಪಡಿಸುವಲ್ಲಿ ಯಶಸ್ವಿ ಆಗಿದ್ದೇವೆ ಎಂದು ಹೇಳಿದರು.

ವಿಶೇಷ ಪೀಠ: ಪ್ರತಿದಿನ ಎಲ್ಲಾ ಕೋರ್ಟ್ ಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್‌, ಪೀಠಗಳು ನಡೆಯುತ್ತಿದ್ದು, ಆ.13ರವರೆಗೆ ಟೆಲಿಫೋನ್‌, ವಿದ್ಯುತ್‌ ಬಿಲ್‌, ಕೋರ್ಟ್‌ನಲ್ಲಿಬಾಕಿ ಇರುವ ಸಿವಿಲ್‌ ವ್ಯಾಜ್ಯ, ಚೆಕ್‌ಬೌನ್ಸ್‌,ಎಂಎಂಆರ್‌ಡಿ ಪ್ರಕರಣಗಳು ರಾಜಿ ಮೂಲಕನಡೆಸಲಾಗುವುದು. ಸಣ್ಣಪುಟ್ಟ ಸಾಲವಸೂಲಿಗಾಗಿ ಸಲ್ಲಿಸಿರುವ ವ್ಯಾಜ್ಯ ಪೂರ್ವಪ್ರಕರಣ ಗಳನ್ನು ಇತ್ಯರ್ಥಪಡಿಸುವ ಸಲುವಾಗಿ ವಿಶೇಷ ಪೀಠ ನಡೆಸಲಾಗುವುದು ಎಂದು ತಿಳಿಸಿದರು.

ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಗೆ ಭೇಟಿ ನೀಡಿ, ತಮ್ಮ ಸಿವಿಲ್‌ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು. ಸಿವಿಲ್‌ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯದ ಶುಲ್ಕವಿದೆ. ಈಗಾಗಲೇ ಶುಲ್ಕ ಕಟ್ಟಿದ್ದರೆ ಅದಾಲತ್‌ನಲ್ಲಿ ರಾಜಿಯಾದ ಹಿನ್ನೆಲೆಯಲ್ಲಿ ಎಲ್ಲಾ ನ್ಯಾಯಾಲಯಗಳು ಶುಲ್ಕ ಮರುಪಾವತಿ ಮಾಡಲಿವೆ ಎಂದು ಹೇಳಿದರು.

Advertisement

ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಿ: ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕೋರ್ಟ್‌ ನಲ್ಲಿ ಬಾಕಿ ಇದ್ದರೆ ತಮ್ಮ ವಕೀಲರಿಗೆ ಅರ್ಜಿ ಕೊಟ್ಟು ಪ್ರಕರಣಗಳನ್ನು ಅದಾಲತ್‌ನಲ್ಲಿ ರಾಜಿ ಮಾಡಿಸಿ ಎಂದು ಅರ್ಜಿ ಸಲ್ಲಿಸಬಹುದು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿಗೆ ಎಲೆಕ್ಟ್ರಾನಿಕ್‌ ಮೋಡ್‌ ಮೂಲಕ ಅಥವಾ ಖುದ್ದಾಗಿ ವಕೀಲರ ಮೂಲಕ ಭೇಟಿ ನೀಡಿಮಾಹಿತಿ ಪಡೆದುಕೊಂಡು ಪ್ರಕರಣವನ್ನುರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ವಿವರಿಸಿದರು.

ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿಗೆ ಇ-ಮೇಲ್‌ dlsa.mandya@gmail.com  ಎಸ್‌ಎಂಎಸ್‌, ವಾಟ್ಸ್‌ ಆ್ಯಪ್‌ ಸಂಖ್ಯೆ: 9482971495 ಸಂದೇಶದ ಮುಖಾಂತರ, ಸಹಾಯವಾಣಿ ಸಂಖ್ಯೆ 08232  -229345, 1800-425-90900 ಅಥವಾ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next