Advertisement

ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಚಾಲನೆ

03:42 PM Feb 12, 2018 | Sharanya Alva |

ಸಿದ್ಧಗಿರಿ (ಕೊಲ್ಹಾಪುರ): ನಗರದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಮೇಳದಲ್ಲಿ ದೇಶದ ವಿವಿಧೆಡೆಯ 120ಕ್ಕೂ ಅಧಿಕ ಕರಕುಶಲಕರ್ಮಿಗಳು ತಮ್ಮ ಉತ್ಪನ್ನ ಹಾಗೂ ಪ್ರತಿಭಾ ಕೌಶಲ ಪ್ರದರ್ಶಿಸಿದರು.

Advertisement

ಬೆಳಗ್ಗೆ ನಡೆದ ಶೋಭಾಯಾತ್ರೆಗೆ ಉತ್ತರ ಪ್ರದೇಶದ ರಾಯಬರೇಲಿ ರಾಜಮನೆತನದ ಕೌಶಲೇಂದ್ರ ಸಿಂಹ ಅವರು ಚಾಲನೆ ನೀಡಿದರು. ಸಿದ್ಧಗಿರಿ ಕರಕುಶಲ ತರಬೇತಿ ಕೇಂದ್ರವನ್ನು ಗುಜರಾತ್‌ನ ಸ್ವಾಮಿ ನಾರಾಯಣ ಸಂಸ್ಥೆಯ ತ್ಯಾಗವಲ್ಲಭದಾತ್‌ ಅವರು ಉದ್ಘಾಟಿಸಿದರು. ಮಹಾಕುಂಭ ಮೇಳವನ್ನು ಕೇಂದ್ರ ಕೃಷಿ ಸಹಾಯಕ ಸಚಿವೆ ಕೃಷ್ಣಾ ರಾಜಾಜಿ ಉದ್ಘಾಟಿಸಿದರು. ಆಹಾರ ಮೇಳವನ್ನು ಮಹಾರಾಷ್ಟ್ರದ ಗೃಹ ಹಾಗೂ ಹಣಕಾಸು ಸಚಿವ ದೀಪಕಭಾಯಿ ಕೇಸರಕರ ಉದ್ಘಾಟಿಸಿದರು. 

ಮಹಾರಾಷ್ಟ್ರದ ಕಂದಾಯ ಮತ್ತು ಮೂಲಭೂತ ಸೌಕರ್ಯ ಸಚಿವ ಚಂದ್ರಕಾಂತ ದಾದಾಪಾಟೀಲ ಸೇರಿ ಅನೇಕರಿದ್ದರು. ಕಾಡಸಿದ್ದೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಸುಮಾರು 120 ಬಗೆಯ ದೋಸೆ, ಮಧುಮೇಹಿಗಳಿಗೆ ಪೂರಕವಾಗುವ ಸಿರಿಧಾನ್ಯಗಳಿಂದ ತಯಾರಿಸಿದ ಉಪಾಹಾರ ಮತ್ತು ಊಟ, ಸುಮಾರು 140ಕ್ಕೂ ಅಧಿಕ ಪ್ರಕಾರದ ಪೊರಕೆ ಸೇರಿ ಇನ್ನಿತರೆ ಉತ್ಪನ್ನಗಳು ಗಮನ ಸೆಳೆಯುತ್ತಿವೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಸು ಮತ್ತು ಹೋರಿಗಳ ಪ್ರದರ್ಶನವೂ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next