Advertisement

ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ನಾಳೆ

03:45 PM Feb 15, 2020 | Suhan S |

ಶಿರಸಿ: ಇಲ್ಲಿನ ವಿವೇಕಾನಂದ ನಗರದಲ್ಲಿ ಶಿರಸಿ ಹಬ್ಬದ ಪ್ರಯುಕ್ತ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆಯನ್ನು ಫೆ. 16 ರಂದು

Advertisement

ಮುಂಜಾನೆ 9.30 ಗಂಟೆಗೆ ಏರ್ಪಡಿಸಲಾಗಿದೆ. 26 ತಳಿಗಳ 180 ಜಾತಿ ನಾಯಿಗಳ ಪ್ರದರ್ಶನದ ಸ್ಪರ್ಧೆ ನಡೆಯಲಿದೆ. ಪ್ರತಿ ತಳಿಯಲ್ಲಿ ಚಾಂಪಿಯನ್‌ ಮತ್ತು 2 ಮತ್ತು 3ನೇ ಸ್ಥಾನದ ಬಹುಮಾನ ನೀಡಲಾಗುತ್ತದೆ ಎಂದು ಶಿರಸಿ ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಆರ್‌.ಜಿ.ಹೆಗಡೆ ಹೇಳಿದರು.

ಅವರು ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವೇಕಾನಂದ ಗೆಳೆಯರ ಬಳಗ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಶಿರಸಿ, ಜೀವ ಜಲ ಕಾರ್ಯ ಪಡೆ, ಸಮರ್ಪಣಾ ಫೌಂಢೇಶನ್‌, ಹಾಗೂ ಶ್ರೀ ಸರ್ವಶಕ್ತಿ ಮಹಿಳಾ ಮಂಡಳ ಸಂಯುಕ್ತವಾಗಿ ನಡೆಸುತ್ತಿರುವ ರಾಷ್ಟ್ರಮಟ್ಟದಶ್ವಾನ ಪ್ರದರ್ಶನದಲ್ಲಿ 9 ತಿಂಗಳ ಒಳಗಿನ ಮರಿಗಳಿಗೂ ಸ್ಪರ್ಧೆ ಇರಲಿದೆ. ಜೊತೆಗೆ 3 ಬಹುಮಾನ, 5 ಸಮಾಧಾನಕರ ಬಹುಮಾನ ಸೇರಿ ಒಟ್ಟೂ 75 ಸಾವಿರ ರೂ. ಮೊತ್ತದ ಬಹುಮಾನ ನೀಡಲಾಗುತ್ತದೆ ಎಂದರು.

ಸ್ಪರ್ಧೆಯಲ್ಲಿ ಪಾಲ್ಗೊಂಡ ಶ್ವಾನಗಳ ಚಾಕಚಕ್ಯತೆಯ ಪರೀಕ್ಷೆ ಮಾಡಲಾಗುವುದು. ತರಬೇತಿ ಪಡೆದ ನಾಯಿಗಳಿರುವ ಕಡೆ ಬೇರೆಯವರು ಜಾಗ್ರತರಾಗಿ ವ್ಯವಹರಿಸಬೇಕಾಗುತ್ತದೆ. ಸಾರ್ವಜನಿಕರು ಪ್ರದರ್ಶನಕ್ಕೆ ಆಗಮಿಸಬಹುದಾಗಿದ್ದು, ಜಾಗ್ರತೆ ವಹಿಸಬೇಕು. ರೋಟ ವ್ಹೀಲರ್‌ ಮತ್ತು ಪಿಟಬುಲ್‌ ನಾಯಿಗಳು ಭಯಾನಕವಾಗಿದ್ದು, ಈ 2 ಜಾತಿಯ ನಾಯಿಗಳನ್ನು ಪ್ರದರ್ಶನದಿಂದ ದೂರವಿಡಲು ಯೋಚಿಸಲಾಗಿದೆ ಎಂದರು.

ವಿನಾಯಕ ವೆರ್ಣೇಕರ್‌ ಮಾತನಾಡಿ, ವಿವೇಕಾನಂದ ಗೆಳೆಯರ ಬಳಗ, ಸರ್ವಶಕ್ತಿ ಮಹಿಳಾ ಮಂಡಳ ಪ್ರತಿವರ್ಷ ನಗರಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದು, 2 ವರ್ಷಗಳಿಂದ ಶಿರಸಿ ನಮ್ಮ ಹಬ್ಬ ಎನ್ನುವ ಕಾರ್ಯಕ್ರಮ ವಿಶಿಷ್ಠವಾಗಿ ಆಯೋಜಿಸಲಾಗುತ್ತಿದೆ. ಈ ವರ್ಷ ಫೆ.15 ಮತ್ತು 16 ರಂದು ಶಿರಸಿ ಹಬ್ಬ ಆಚರಿಸಲಾಗುತ್ತಿದೆ.

Advertisement

ತಾಲೂಕು ಮಟ್ಟದ ಅನೇಕ ಕಾರ್ಯಕ್ರಮ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ. ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳುವವರು ವಿನಯ ನಾಯ್ಕ 9535989895ಗೆ ಸಂಪರ್ಕಿಸಬಹುದಾಗಿದೆ.

ಡಾ| ರಾಕೇಶ ಬಂಗ್ಲೆ ಧಾರವಾಡ, ಡಾ| ಶಿಲ್ಪಾ ಪೊನ್ನಪ್ಪ, ಉಡುಪಿ, ಡಾ| ಪಿ.ಎಸ್‌. ಹೆಗಡೆ, ಶ್ರೀನಿವಾಸ ಹೆಬ್ಟಾರ್‌, ರಾಘು ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next