ಚಿಕ್ಕಬಳ್ಳಾಪುರ: ರಾಷ್ಟ್ರೀಯ ಭೂ ಸ್ವಾಧೀನ ಅಧಿಕಾರಿಯ ಸೋಗಿನಲ್ಲಿ ವಂಚನೆ ಮಾಡಿರುವ ಆರೋಪಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸೈಬರ್ ಕ್ರೈಂ ಪೋಲಿಸರು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆಯ ಸೈಯದ್ ಮುಬಾರಕ್(34) ಬಂಧಿತ ಆರೋಪಿ.
ಏನಿದು ಘಟನೆ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಶ್ರೀನಿವಾಸ್‍ರೆಡ್ಡಿಗೆ ಆರೋಪಿಗಳಾದ ಸೈಯದ್ ಮುಬಾರಕ್ ಹಾಗೂ ಅನೇಕಲ್ ನಗರದ ಅಕ್ರಂ ಪಾಷ ಎಂಬುವರು ಆಗಸ್ಟ್ 23 ರಂದು ಕರೆ ಮಾಡಿ ನಿಮಗೆ 28 ಲಕ್ಷ ರೂಗಳ ಭೂ ಪರಿಹಾರ ಧನದ ಚೆಕ್ ಬಂದಿದೆ ಚೆಕ್ ಪಡೆಯಲು ದಾಖಲೆಗಳನ್ನು ಮತ್ತು ಬಾಂಡ್ ಬರೆದುಕೊಡಲು 1 ಲಕ್ಷ 50 ಸಾವಿರ ರೂಗಳು ಮತ್ತು ತಮ್ಮ ಖರ್ಚುಗಳಿಗೆ 10 ಸಾವಿರ ರೂಗಳು ತೆಗೆದುಕೊಂಡು ಡಿಸಿ ಕಚೇರಿಗೆ ಬರುವಂತೆ ಹೇಳಿದ್ದಾರೆ ಆರೋಪಿಗಳು 1 ಲಕ್ಷ 60 ಸಾವಿರ ರೂಗಳನ್ನು ಮೋಸದಿಂದ ಪಡೆದುಕೊಂಡು ಖಜಾನೆಯಲ್ಲಿ ಪಾವತಿಸಿ ಬರುತ್ತೇವೆ ಎಂದು ಹೇಳಿ ಪರಾರಿಯಾಗಿರುವ ಕುರಿತು ವಂಚನೆಗೊಳಗಾದ ಶ್ರೀನಿವಾಸ್‍ರೆಡ್ಡಿ ಸೈಬರ್,ಆರ್ಥಿಕ ಮತ್ತು ಮಾದಕದ್ರವ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು ತನಿಖಾಧಿಕಾರಿ ಪೋಲಿಸ್ ಇನ್ಸ್ ಪೆಕ್ಟರ್ ಬಿ.ಪಿ.ಮಂಜು,ಪಿಎಸ್‍ಐ ಶರತ್ ಕುಮಾರ್, ಸಿಬ್ಬಂದಿಗಳಾದ ಮುರಳಿಧರ್, ಮಲ್ಲಾಕಾರ್ಜುನ್,ಅಂಬರೀಶ್ ಅವರು ವಂಚನೆಯ ಪ್ರಕರಣವನ್ನು ಬೇದಿಸಿ ಇಬ್ಬರ ಆರೋಪಿಗಳ ಪೈಕಿ ಸೈಯದ್ ಮುಬಾರಕ್ ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆಯಲ್ಲಿ ಬಂಧಿಸಲಾಗಿದೆ.
1 ಲಕ್ಷ 20 ಸಾವಿರ ರೂಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಆರೋಪಿಯು ಈ ಕೃತ್ಯಕ್ಕೆ ಅಸ್ಸಾಂ ರಾಜ್ಯದಲ್ಲಿ ಆಕ್ಟಿವ್ ಆಗಿರುವ ಸಿಮ್‍ಗಳನ್ನು ತಮಿಳುನಾಡು ರಾಜ್ಯದ ಹೊಸೂರು ನಗರದಲ್ಲಿ ಖರೀದಿಸಿ ಕೃತ್ಯಕ್ಕೆ ಉಪಯೋಗಿಸಿ ನಂತರ ಫೋನ್ ಸಮೇತ ಸಿಮ್‍ಗಳನ್ನು ಬಿಸಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸಿಮ್‍ಗಳನ್ನು ಮಾರಾಟ ಮಾಡಿದ ಜಾಲದ ಬಗ್ಗೆಯೂ ತನಿಖೆಯನ್ನು ಕೈಗೊಳ್ಳಲಾಗಿದೆ ಈ ಪ್ರಕರಣ ಮತ್ತೊಬ್ಬ ಆರೋಪಿ ಅಕ್ರಂ ಪಾಷಾ ತಲೆ ಮರೆಸಿಕೊಂಡಿದ್ದು ಆತನನ್ನು ಬಂಧಿಸಲು ಬಲೆ ಬೀಸಲಾಗಿದೆ.
ವಂಚಕರನ್ನು ಬಂಧಿಸಿದ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಪ್ರಶಂಸೆ ಮಾಡಿದ್ದಾರೆ.