Advertisement

ವಿದ್ಯಾರ್ಥಿಗಳು, ಯುವಜನರ ಕೃಷಿ ಒಲವು

01:15 PM Feb 25, 2023 | Team Udayavani |

ಬೆಂಗಳೂರು: ನಗರದ ಹೆಸರಘಟ್ಟದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದ 3ನೇ ದಿನವೂ 12 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ, ವಿವಿಧ ತಳಿಯ ಬೆಳೆಗಳನ್ನು, ತರಕಾರಿ ಬೀಜ ಹಾಗೂ ಗೊಬ್ಬರಗಳ ಬಗ್ಗೆ ತಿಳಿದುಕೊಳ್ಳಲು ರೈತರು ಮುಂದಾಗಿದ್ದರು.

Advertisement

ಮೇಳಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಆಗಮಿಸಿದ್ದು, ಕೃಷಿಯ ಕಡೆ ಹೆಚ್ಚು ಒಲವು ತೋರಿಸುತ್ತಿದ್ದರು. ಮೆಕ್ಕೆಜೋಳ, ಬದನೆ, ಮೆಣಸಿನಕಾಯಿ, ಈರುಳ್ಳಿ, ಬೆಂಡೆ, ಗುಲಾಬಿ ಬೆಳೆ, 108 ವಿಧದ ವೀಳ್ಯದೆಲೆ, ಚೆಂಡು ಹೂ ಸೇರಿದಂತೆ ಆರ್ಯುವೇದ ಗಿಡಗಳ ಬಗ್ಗೆ ಸಂಬಂಧಿಸಿದ ವಿಜ್ಞಾನಿಗಳ ಬಳಿ ಮಾಹಿತಿ ಪಡೆದರು.

ಟ್ರ್ಯಾಕ್ಟರ್‌, ಅಳತೆಗೆ ತಕ್ಕಂತೆ ಈರುಳ್ಳಿ ಬೇರ್ಪಡಿಸುವ ಯಂತ್ರ, ಬೇಸಿಗೆಯಲ್ಲಿ ತರಕಾರಿ ಮಾರುವ ತ್ರಿಚಕ್ರ ವಾಹನ, ನೀರನ್ನು ಉಳಿತಾಯ ಮಾಡುವ ಹೈಡ್ರೊ ಅಗ್ರಿ ಮಿತ್ರ, ಫಾರ್ಮ್ ರೋವರ್‌, ಫೈಬರ್‌ ದೋಟಿ ಎಂಬ ಯಂತ್ರಗಳ ಪ್ರದರ್ಶನ ಒಂದೆಡೆಯಾದರೆ, ಮತ್ತೂಂದೆಡೆ ವಿವಿಧ ತಳಿಯ ಹಣ್ಣು-ತರಕಾರಿ ಬೀಜಗಳು, ನರ್ಸರಿ, ತಿಂಡಿ-ತಿನಿಸುಗಳು, ಹೂವಿನ ದಳದಿಂದ ತಯಾರಿಸಿದ ಧೂಪ, ಅಗರಬತ್ತಿಗಳ ಪರಿಮಳ ಮತ್ತೂಂದೆಡೆ ಆಕರ್ಷಕವಾಗಿದ್ದವು.

ಡ್ರ್ಯಾಗನ್‌ ಫ್ರೂಟ್‌ ಐಸ್‌ಕ್ರೀಂಗೆ ಮುಗಿಬಿದ್ದ ಜನ: ತೋಟಗಾರಿಕೆ ಮೇಳಕ್ಕೆ ಆಗಮಿಸಿದ್ದ ಬಹುತೇಕ ಜನರ ಕೈಯಲ್ಲಿ ಡ್ರ್ಯಾಗನ್‌ ಫ್ರೂಟ್‌ನಿಂದ ತಯಾರಿಸಿದ ಐಸ್‌ಕ್ರೀಂ ಇತ್ತು. ಡ್ರ್ಯಾಗನ್‌ ಫ್ರೂಟ್‌ನ ಬಿಳಿ ಮತ್ತು ಕೆಂಪು ತಳಿಯ ಹಣ್ಣಿನಿಂದ ಕ್ಯಾಂಡಿ ಮತ್ತು ಕಪ್‌ ನೈಸರ್ಗಿಕ ಐಸ್‌ಕ್ರೀಂ ತಿನ್ನಲು ಯುವಕರು ಮುಗಿಬಿದ್ದಿದ್ದರು. ಯಾವುದೇ ರಾಸಾಯನಿಕಗಳನ್ನು ಬಳಸದೇ, ಕಡಿಮೆ ಪ್ರಮಾಣದ ಶುಗರ್‌ ಬಳಸಿ ತಯಾರಿಸಿದ ಈ ಐಸ್‌ಕ್ರೀಂ ತಿಂದರೆ, ತಾಜಾ ಹಣ್ಣು ತಿಂದ ಅನುಭವವಾಗುತ್ತದೆ ಎಂದು ಗ್ರಾಹಕರೊಬ್ಬರು ತಿಳಿಸುತ್ತಾರೆ.

ಫ್ಯಾಮ್ಕೋದಿಂದ ಮೂಳೆಗೊಬ್ಬರ: ಅಡಕೆ, ತೆಂಗು, ರಬ್ಬರ್‌, ಶುಂಠಿ ಬೆಳೆಗಳನ್ನು ವೃದ್ಧಿಗೊಳಿಸಲು ಬೋನ್‌ ಮೀಲ್‌ (ಮೂಳೆಗೊಬ್ಬರ) ಹೆಚ್ಚಿನ ರಂಜಕ ಅಂಶವನ್ನು ಒಳಗೊಂಡ ಸಾವಯವ ಗೊಬ್ಬರ ಮಾರಾಟಕ್ಕಿಡಲಾಗಿತ್ತು. ಇದನ್ನು ಖರೀದಿ ಸಲು ಮೈಸೂರಿನ ಫಾಮ್ಕೋ ಸಂಸ್ಥೆಯ ಮಳಿಗೆಯಲ್ಲಿ ರೈತರು ವಿಶೇಷ ಆಸಕ್ತಿ ತೋರುತ್ತಿದ್ದರು. ಸಸ್ಯಗಳ ನಿರಂತರ ಬೆಳವಣಿಗೆಗೆ ಇದು ಹೆಚ್ಚು ಸಹಕಾರಿ ಯಾದ ಗೊಬ್ಬರ ಎಂದು ಮಾರಾಟಗಾರರಾದ ಅಲೀಮ್‌ ಮಾಹಿತಿ ನೀಡಿದರು.

Advertisement

ಜತೆಗೆ ಬೇವಿನ ಕೇಕ್‌ ಮತ್ತಿತರ ಗೊಬ್ಬರಗಳ ಬಗೆಗೂ ರೈತರಿಗೆ ಮಾಹಿತಿ ಹಂಚುತ್ತಿದ್ದರು.

ಪ್ರಗತಿಪರ ರೈತರಿಗೆ ಸನ್ಮಾನ: ಸಂಸ್ಥೆಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇತರೆ ರೈತರಿಗೆ ಮಾದರಿ ಯಾಗಿರುವ 8 ಪ್ರಗತಿಪರ ರೈತರನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್‌.ಕೆ. ಸಿಂಗ್‌ ಸನ್ಮಾನಿಸಿ, ನಿಮ್ಮಂತಹ ರೈತರಿಂದ ಸಂಸ್ಥೆಯ ತಂತ್ರಜ್ಞಾನ ದೇಶದುದ್ದಕ್ಕೂ ಪ್ರಸರಿಸಲು ಸಾಧ್ಯವೆಂದು ರೈತರ ಶ್ರಮವನ್ನು ಪ್ರಶಂಶಿಸಿದರು.

ಚಿತ್ರದುರ್ಗದ ಯುವ ರೈತ ಮನೋಜ್‌ ಬಿ, ಒಡಿಶಾದ ಸುರೇಶ್‌ ಚಂದ್ರ ಓಟ, ಆಂಧ್ರಪ್ರದೇಶದ ರಾಗಿ ಪತಿ ದಾವೆಡು, ಚಿಕ್ಕಬಳ್ಳಾಪುರದ ಅಶ್ವತಪ್ಪ ಮತ್ತು ಸುಧಾಕರ್‌, ಚಾಮರಾಜನಗರದ ಮಹೇಶ್‌ ನಾಯಕ್‌, ಬೆಂಗಳೂರಿನ ಯುವ ಉದ್ಯಮಿ ಸತೀಶ, ಬಿಜಾಪುರದ ಹಿರಿಯ ರೈತ ಆರ್‌.ಎಸ್‌. ಪಾಟೀಲ್‌ ಹಾಗೂ ತುಮಕೂರಿನ ವಿರಾಕ್ಯತಾರಾ ಯಪ್ಪ ಇವರು ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬೆಂಗ ಳೂರಿನ ಅಟಾರಿಯ ಪ್ರಧಾನ ವಿಜ್ಞಾನಿ ಡಾ.ಡಿವಿ ಎಸ್‌ ರೆಡ್ಡಿ, ಪ್ರಧಾನ ವಿಜ್ಞಾನಿ ಡಾ.ಸಿ.ಕೆ. ನಾರಾ ಯಣ, ಡಾ.ಪ್ರಕಾಶ್‌ ಪಾಟೀಲ್‌, ಎಸ್‌ಪಿಎಚ್‌ನ ಉಪಾಧ್ಯಕ್ಷ ಡಾ. ಸಿ. ಅಶ್ವಥ್‌, ರಾಷ್ಟ್ರೀಯ ತೋಟ ಗಾರಿಕೆ ಮೇಳದ ಆಯೋಜನ ಕಾರ್ಯದರ್ಶಿ ಡಾ.ವೆಂಕಟ್‌ ಕುಮಾರ್‌ ಸೇರಿದಂತೆ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next