Advertisement
ಬುಧವಾರ ರಾ.ಹೆ. ಭೂಮಾಲಕರ ಹೋರಾಟ ಸಮಿತಿಯ ಸದಸ್ಯರು ಸಭೆ ಸೇರಿ ಈ ನಿರ್ಣಯ ಕೈಗೊಂಡರು. ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅಧ್ಯಕ್ಷತೆ ವಹಿಸಿದ್ದರು.ಚತುಷ್ಪಥ ಯೋಜನೆಗೊಳ ಪಡುವ ಕುಲಶೇಖರದಿಂದ ಸಾಣೂರು ವರೆಗಿನ ಭೂಮಾಲಕರು ಹೈಕೋರ್ಟ್‌ನ ನ್ಯಾಯೋಚಿತವಾದ ಪರಿಹಾರವನ್ನು ವಿತರಿಸುವುದಕ್ಕೆ ಆದೇಶ ಬಂದರೂ ಅಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ. ಇನ್ನೊಂದೆಡೆ ಜನಪ್ರತಿನಿಧಿಗಳು ಈ ಬಗ್ಗೆ ದಿವ್ಯನಿರ್ಲಕ್ಷ್ಯ ತಾಳಿದ್ದಾರೆ. ಇದನ್ನು ಖಂಡಿಸಿ ಮೇ 10ರ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ.
ಉಪಾಧ್ಯಕ್ಷ ಮನೋಹರ್ ಭಟ್ ಕುಡುಪು, ಸಂಚಾಲಕ ಪ್ರಕಾಶ್ಚಂದ್ರ, ಕಾರ್ಯದರ್ಶಿ ವಿಶ್ವಜಿತ್, ಖಜಾಂಚಿ ರತ್ನಾಕರ್ ಶೆಟ್ಟಿ, ಜಯರಾಮ ಪೂಜಾರಿ, ಬೃಜೇಶ್ ಶೆಟ್ಟಿ ಮಿಜಾರು, ಕಿರಣ್ ಕ್ಯಾಸ್ಟಲಿನೋ , ನಾಗೇಶ್ ಕಾಮತ್ ಹಾಗೂ ಭೂ ಮಾಲಕರು ಪಾಲ್ಗೊಂಡಿದ್ದರು.