Advertisement
ಇದು ಅವರೊಬ್ಬರ ಮಾತಲ್ಲ, ಕಥೆಯಲ್ಲ, ವ್ಯಥೆಯಲ್ಲ. ಇದೇ ಮಾತನ್ನು ಬಹುತೇಕರು ಹೇಳುತ್ತಾರೆ. ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳು, ಸರ್ವೀಸ್ ರಸ್ತೆ ಸಮಸ್ಯೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಏನೂಂದೂ ಮಾಡದ ಗುತ್ತಿಗೆದಾರರ ನಡವಳಿಕೆ ಬಗ್ಗೆ ಜನ ಆಕ್ರೋಶಿತರಾಗಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಬಸ್ರೂರು ಮೂರು ಕೈ ಅಂಡರ್‌ಪಾಸ್ ಕಾಮಗಾರಿಗಾಗಿ ಮುಖ್ಯ ರಸ್ತೆ ಬ್ಲಾಕ್ ಮಾಡಿರುವುದು ಮತ್ತಷ್ಟು ಸಮಸ್ಯೆ ಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಹೊಂಡಗಳು ವಿಸ್ತಾರವಾಗುತ್ತಾ ಹೋಗುತ್ತಿದ್ದರೂ ಅದಕ್ಕೆ ತೇಪೆ ಹಾಕುವ ವ್ಯವಸ್ಥೆಯೂ ಆಗುತ್ತಿಲ್ಲ. ಶಾಸ್ತ್ರಿ ವೃತ್ತದಿಂದ ಸಂಗಮ್ ವರೆಗೆ ಒಂದಷ್ಟಾದರೂ ತೇಪೆ ನಡೆದಿದ್ದು ಬಸ್ರೂರು ಮೂರುಕೈವರೆಗೆ ಕಾಟಾಚಾರಕ್ಕೂ ನಡೆದಿಲ್ಲ. ಬಸೂÅರು ವೃತ್ತದಲ್ಲಿ ಅಂಡರ್‌ಪಾಸ್ ಕಾಮಗಾರಿ ಆರಂಭವಾಗಲಿದೆ ಎಂದು ಹೆದ್ದಾರಿಯಲ್ಲಿ ವಾಹನ ಸಂಚಾರ ನಿಲ್ಲಿಸಿದ್ದರೂ ಸರ್ವಿಸ್ ರಸ್ತೆಯಲ್ಲೇ ವಾಹನ ಸಂಚಾರದ ಒತ್ತಡ ಹೆಚ್ಚಾಗಿದೆ. ಈಗಾಗಲೇ ಸರ್ವೀಸ್ ರಸ್ತೆಯಲ್ಲಿ ಸಮಸ್ಯೆ ಬಿಗಡಾಯಿಸಿದೆ. ಎರಡು ಸರ್ವೀಸ್ ರಸ್ತೆಗಳಲ್ಲಿ ಗಾಂಧಿ ಮೈದಾನದ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿವೆ. ಶರೋನ್ ಬದಿಯ ಸರ್ವೀಸ್ ರಸ್ತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ಪ್ರವೇಶ ಹಾಗೂ ಹೊರಬರುವುದು ಸುಲಭವಲ್ಲ. ಸಮಸ್ಯೆಗಳ ಆಗರ
ಸರ್ವಿಸ್ ರಸ್ತೆಗಳಲ್ಲಿ ದಾರಿದೀಪಗಳೂ ಇರದಿರುವು ದರಿಂದ ಕತ್ತಲಲ್ಲಿ ಪಾದಚಾರಿಗಳು ಕಾಣುವುದಿಲ್ಲ. ಮಳೆ ಕತ್ತಲು ಆವರಿಸಿದರಂತೂ ಭಾರಿ ಸಮಸ್ಯೆ. ಈಗಾಗಲೇ ಒದ್ದಾಟ ಆರಂಭಗೊಂಡಿದ್ದರೂ ಸದÂಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಯೋಗ್ಯ ಮಾಡಲಾಗುತ್ತಿಲ್ಲ. ಉತ್ತರಿಸುವವರೂ ಇಲ್ಲ. ಹೀಗಾಗಿ ಎಲ್ಲರೂ “ಕುಂದಾಪ್ರದಲ್ ಏನ್ ನಡಿತ್ತೋ ದೇವ್ರೇ ಬಲ್ಲ’ ಎನ್ನುತ್ತಿದ್ದಾರೆ.
Related Articles
Advertisement
ಪಾರ್ಕಿಂಗ್ ಸಮಸ್ಯೆಒಂದು ಕಿ.ಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದಂತಾಗಿದೆ. ಭಾರಿ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವರು ಸರ್ವೀಸ್ ರಸ್ತೆಗೆ ತಾಗಿಕೊಂಡಿರುವ ಅಂಗಡಿ, ಹೋಟೆಲ್‌ಗಳಿಗೆ, ಕಚೇರಿಗಳಿಗೆ ಹೋಗಲು ರಸ್ತೆ ಬದಿ ಕಾರು, ಬೈಕ್ ಇಟ್ಟು ಹೋಗುತ್ತಿದ್ದರು. ಈಗ ಸಂಚಾರಿ ಪೋಲೀಸರು ಅವಕಾಶ ನೀಡುತ್ತಿಲ್ಲ. ಗಾಂಧಿಮೈದಾನ ಬದಿಯ ರಸ್ತೆಯಲ್ಲಿ ಮೆಸ್ಕಾಂ, ಲೋಕೋಪಯೋಗಿ, ತೆರಿಗೆ ಇಲಾಖೆ ಕಚೇರಿಗಳು, ಶಾಲೆಗಳು, ಮಹಾತ್ಮಗಾಂಧಿ ಪಾರ್ಕ್ ಇದೆ. ಕ್ರೀಡಾಂಗಣಕ್ಕೆ ಜನ ಬರುತ್ತಾರೆ. ನೂರಾರು ವಾಹನಗಳ ಪಾರ್ಕಿಂಗ್ ಮಾಡುವುದೆಲ್ಲಿ ಎಂಬ ಪ್ರಶ್ನೆಗೆ ಉತ್ತರವಿಲ್ಲ.