Advertisement

10ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್‌

10:55 AM Jun 07, 2019 | Team Udayavani |

ಚಿಂತಾಮಣಿ: ಬರಗಾಲ ಪರಿಹಾರ ಕಾರ್ಯಕ್ರಮವನ್ನು ಜಾರಿ ಮಾಡಲು ಒತ್ತಾಯಿಸಿ ಜೂ.10 ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗ ಚಿಕ್ಕಬಳ್ಳಾಪುರದ ಚದಲ್ಪುರ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ ಬಂದ್‌ ಅಂಗವಾಗಿ ಪೂರ್ವಭಾವಿ ಸಭೆ ಯನ್ನು ನಗರದ ಎಪಿಎಂಸಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಉಪಸ್ಥಿತಿಯಲ್ಲಿ ನಡೆಯಿತು.

Advertisement

ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆ ಗಳಲ್ಲಿ ಭೂಮಿ ಇಲ್ಲದಂತಾಗುತ್ತಿದೆ. ಜಿಲ್ಲೆಯಲ್ಲಿ 4. 5 ಲಕ್ಷ ಹೆಕ್ಟೇರ್‌ ಭೂಮಿ ಯಿದ್ದು, ಈಗ ಕೃಷಿಗೆ 1.57 ಸಾವಿರ ಹೆಕ್ಟೇರ್‌ ಭೂಮಿಯಾಗಿದೆ. ರಾಜ್ಯ ಹೆದ್ದಾರಿ ಬಂದ್‌ನಲ್ಲಿ ಪಾಲ್ಗೊಂಡು ನಮ್ಮ ಭೂಮಿ ಯನ್ನು ಉಳಿಸಿಕೊಳ್ಳಬೇಕು. ನೂರಾರು ಎಕರೆ ಭೂಮಿಯ ಒಡೆಯರು ಭೂಮಿ ಕಳೆದುಕೊಂಡು ಇಂದು ಕೈಗಾರಿಕೆಗಳಲ್ಲಿ ವಾಚ್ಮ್ಯಾನ್‌ ಕೆಲಸ ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಮಾತ ನಾಡಿ, ನಾವು ನಿಮ್ಮ ಜೊತೆಯಲ್ಲಿರುತ್ತೇವೆ, ರೈತರು ಯಾವುದೇ ಸಮಯದಲ್ಲೂ ಕರೆದರೆ ಬರುತ್ತೇವೆ. ನಮ್ಮ ಸಮಿತಿ ರೈತರ ಸೇವೆಗಾಗಿ ಶ್ರಮಿಸುತ್ತದೆ ಎಂದರು.

ಎಪಿಎಂಸಿ ಮಾಜಿ ನಿರ್ದೇಶಕ ಎಂ.ಎಂ.ಎಸ್‌ ಶ್ರೀನಿವಾಸ್‌, ತಾಲೂಕು ಅಧ್ಯಕ್ಷ ಸೀಕಲ್ ರಮಣಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ್‌, ತಾಲೂಕು ಉಪಾಧ್ಯಕ್ಷ ಅಂಕಾಲಮಡಗು ಚೌಡಪ್ಪ, ಆರ್‌.ಆರ್‌.ರಾಮಸ್ವಾಮಿ, ಖಜಾಂಚಿ ಅನಕಲ್ ಶಿವಾನಂದ, ಅನಕಲ್ ಶಿವಾರೆಡ್ಡಿ, ಆರ್‌ಎಸ್‌ಸಿ ಆಂಜನೇಯರೆಡ್ಡಿ, ಕೈವಾರ ಜಯ ರಾಮರೆಡ್ಡಿ, ರೆಡ್ಡೆಪ್ಪ, ಶ್ರೀನಿವಾಸರೆಡ್ಡಿ, ಹಿರಣ್ಯಪಾಳ್ಯಮಂಜುಳ, ರಾಮಚಂದ್ರಾ ರೆಡ್ಡಿ, ಬಿ.ಕೆ.ಶಿವಾರೆಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next