Advertisement
ಸಮರ್ಪಕವಾದ ಚರಂಡಿಯಿಲ್ಲಸಂಗಮ್ನಿಂದ ಆರಂಭವಾಗಿ ಬಸ್ರೂರು ಮೂರುಕೈ ವರೆಗೂ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಹೆದ್ದಾರಿಯ ಎರಡೂ ಭಾಗದಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಇದ್ದ ಚರಂಡಿಗಳೂ ಮುಚ್ಚಿ ಹೋಗಿವೆ. ಕಸಕಡ್ಡಿಗಳಿಂದ ತುಂಬಿದೆ. ಪರಿಣಾಮ ಮಳೆ ಬಂದಾಗ ಒಂದೋ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಇಲ್ಲದಿದ್ದರೆ ರಸ್ತೆಯ ಬದಿಯಲ್ಲೇ ನೀರು ಸಂಗ್ರಹವಾಗುತ್ತದೆ. ತತ್‌ಕ್ಷಣ ಹೆದ್ದಾರಿ ಪ್ರಾಧಿಕಾರದವರು ಚರಂಡಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಬೇಕಿದೆ.
ಅಪೂರ್ಣವಾದ ಫ್ಲೈ ಓವರ್ ಕಾಮಗಾರಿಯಿಂದಾಗಿ ಸಾಕಷ್ಟು ಕಡೆ ಇಂತಹ ದುಃಸ್ಥಿತಿ ಕಂಡು ಬರುತ್ತಿದೆ. ಪೇಟೆಯಲ್ಲಿ ಹೆದ್ದಾರಿಯಲ್ಲಿ ಇಂತಹ ದುರವಸ್ಥೆ ಇರುವುದು ನಗರ ಸೌಂದರ್ಯಕ್ಕೂ ಮಾರಕವಾಗಿದೆ. ಆದ್ದರಿಂದ ತುರ್ತು ಗಮನ ಹರಿಸದಿದ್ದಲ್ಲಿ ರಸ್ತೆ ಬದಿ ಇನ್ನಷ್ಟು ಗಬ್ಬು ವಾತಾವರಣ ನಿಶ್ಚಯ. ಇದರ ಜತೆಗೆ ಚರಂಡಿಗಳಲ್ಲಿ ಕಸದ ರಾಶಿಯೂ ಇದೆ, ರಸ್ತೆ ಬದಿಯೂ ಕಸದ ರಾಶಿ ಕಂಡು ಬರುತ್ತಿದೆ. ಮಳೆಗಾಲಕ್ಕೆ ಮುನ್ನ ಇಂತಹ ಕಾಮಗಾರಿಗಳ ಕಡೆಗೆ ಗಮನ ಹರಿಸುವುದು ಒಳಿತು. – ಲಕ್ಷ್ಮೀ ಮಚ್ಚಿನ