Advertisement
2016 ಜನವರಿಯಿಂದ, 2018 ಮಾರ್ಚ್ 30ರ ತನಕ ಕೋಟ ಪೊಲೀಸ್ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಇದರಲ್ಲಿ ಮಾಬುಕಳದಿಂದ-ತೆಕ್ಕಟ್ಟೆ ಕೊರವಾಡಿ ತನಕ ಒಟ್ಟು 51 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದು ಜಿಲ್ಲೆಯಲ್ಲೇ ದಾಖಲಾದ ಅತಿ ದೊಡ್ಡ ಸಾವಿನ ಸಂಖ್ಯೆಯಾಗಿದೆ.
ಮಾಬುಕಳ, ಸಾಸ್ತಾನ ಬಸ್ ನಿಲ್ದಾಣ, ಗುಂಡ್ಮಿ ಬಸ್ ನಿಲ್ದಾಣ ಹಾಗೂ ಸಾಲಿಗ್ರಾಮದ ಡಿವೈಡರ್, ಸಾಲಿಗ್ರಾಮ ಬಸ್ಸು ನಿಲ್ದಾಣದ ಆಸು-ಪಾಸು, ಕೋಟ ಮೂಕೈ ವೃತ್ತ, ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಎದುರು, ಕೋಟ ಡಿವೈಡರ್, ಫ್ಲೈಓವರ್ ಅಂತ್ಯದಿಂದ ಮಣೂರು, ಬಾಳೆಬೆಟ್ಟು, ಕರಿಕಲ್‌ಕಟ್ಟೆ, ತೆಕ್ಕಟ್ಟೆ ಪೇಟೆ ಆಸುಪಾಸು ಖಾಯಂ ಅಪಘಾತ ತಾಣಗಳಾಗಿದೆ. ಸರ್ವೀಸ್ ರಸ್ತೆಯ ಕೊರತೆ
ಸಾಲಿಗ್ರಾಮ ಬಸ್ಸು ನಿಲ್ದಾಣ ಹಾಗೂ ಡಿವೈಡರ್ ಸಮೀಪ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಕಾರ್ಕಡ ಗ್ರಾಮಾಂತರ ರಸ್ತೆಯಿಂದ ಮುಖ್ಯ ಪೇಟೆಗೆ ಬರುವವರಿಗೆ ಸರ್ವೀಸ್ ರಸ್ತೆ ಇಲ್ಲದಿರುವುದರಿಂದ ವಿರುದ್ಧ ದಿಕ್ಕಿನಲ್ಲೇ ಸಂಚರಿಸುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾಸ್ತಾನದಲ್ಲಿ ಕೂಡ ಇದೇ ಸಮಸ್ಯೆ ಇದೆ.
Related Articles
Advertisement
ಕೋಟಕ್ಕೆ ಪ್ರಥಮ ಸ್ಥಾನ 2016ರಲ್ಲಿ ಕೋಟ ಠಾಣೆ ವ್ಯಾಪ್ತಿಯಲ್ಲಿ 75 ಅಪಘಾತಗಳು ಸಂಭವಿಸಿದ್ದು 22ಮಂದಿ ಸಾವನ್ನಪ್ಪಿದ್ದಾರೆ. ಆ ಸಾಲಿನಲ್ಲಿ ಕಾಪುವಿನಲ್ಲಿ 64 ಅಪಘಾತಗಳು ನಡೆದು 24ಮಂದಿ ಸಾವನ್ನಪ್ಪಿದ್ದಾರೆ. 2017ರಲ್ಲಿ ಕೋಟದಲ್ಲಿ 75 ಅಪಘಾತಗಳು ಸಂಭವಿಸಿದ್ದು 26 ಮಂದಿ ಸಾವನ್ನಪ್ಪಿದ್ದಾರೆ. ಕಾಪು ಎರಡನೇ ಸ್ಥಾನದಲ್ಲಿದ್ದು 63 ಅಪಘಾತಗಳು ನಡೆದು 17ಮಂದಿ ಸತ್ತಿದ್ದಾರೆ. 2018 ಮಾ.30ರ ವರೆಗೆ ಮೂರೇ ತಿಂಗಳಲ್ಲಿ ಕೋಟದಲ್ಲಿ 24 ಅಪಘಾತಗಳು ಸಂಭವಿಸಿದ್ದು 3 ಮಂದಿ ಸತ್ತಿದ್ದಾರೆ. ಹೀಗೆ 2016ರಿಂದ- 2018 ಮಾಚ್ ವರೆಗೆ ಕೋಟದಲ್ಲಿ 174 ಅಪಘಾತಗಳು ನಡೆದು 51 ಮಂದಿ
ಸಾವನ್ನಪಿದ್ದಾರೆ, 154 ಮಂದಿ ಗಾಯಗೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಕಾಪು ಇದ್ದು ಇಲ್ಲಿ 138 ಅಪಘಾತಗಳು ನಡೆದಿದ್ದು 44 ಮಂದಿ ಸಾವನ್ನಪ್ಪಿದ್ದಾರೆ. ಇದೆಲ್ಲವೂ ಕೇಸು ದಾಖಲಾದ ಪ್ರಕರಣಗಳಾದರೆ ರಾಜಿಯಲ್ಲಿ ಇತ್ಯರ್ಥಗೊಂಡವುಗಳ ಸಂಖ್ಯೆ ಬಹಳಷ್ಟಿದೆ. ವರದಿ ನೀಡಿದ್ದೇವೆ
ಪೊಲೀಸ್ ಇಲಾಖೆ ಹಾಗೂ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ತೆಕ್ಕಟ್ಟೆಯಿಂದ ಪಡುಬಿದ್ರೆಯ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಪಾಯಕಾರಿ ಜಂಕ್ಷನ್‌ಗಳ ಕುರಿತು ಸರ್ವೆ ನಡೆಸಿ ವರದಿ ಸಿದ್ಧಪಡಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಪ್ಪಿಸಿದ್ದೇವೆ. ಪ್ರಸ್ತಾವಿತ ಸುಧಾರಣೆಗಳನ್ನು ಕೈಗೊಂಡರೆ ಅಪಘಾತ ತಡೆ ಸಾಧ್ಯವಿದೆ. ಪೊಲೀಸ್ ಇಲಾಖೆಯಿಂದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
– ಲಕ್ಷ್ಮಣ ನಿಂಬರ್ಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉಡುಪಿ ಅಸಮರ್ಪಕ ಕಾಮಗಾರಿ
ಅಗತ್ಯ ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸದಿರುವುದು, ಪರಿಹಾರ ನೀಡಿದ ಜಾಗವನ್ನು ಹೆದ್ದಾರಿ ಇಲಾಖೆ ವಶಪಡಿಸಿಕೊಳ್ಳದಿರುವುದು, ಅಸಮರ್ಪಕ ಡಿವೈಡರ್‌ಗಳು ಅಪಘಾತ ಹೆಚ್ಚಳಕ್ಕೆ ಕಾರಣವಾಗಿವೆ. ಸಂಬಂಧಪಟ್ಟ ಇಲಾಖೆ ಈ ನ್ಯೂನತೆಗಳನ್ನು ಸರಿಪಡಿಸಬೇಕು. ಈ ಕುರಿತು ಕಾನೂನು ಹೋರಾಟದ ಸಿದ್ಧತೆಯಲ್ಲಿದ್ದೇವೆ.
– ಕೇಶವ ಆಚಾರ್ಯ ಕೋಟ,
ಅಧ್ಯಕ್ಷರು, ಜೇಸಿಐ ಸಾಸ್ತಾನ ವೈಬ್ರೆಂಟ್ – ರಾಜೇಶ ಗಾಣಿಗ ಅಚ್ಲಾಡಿ