Advertisement
ಸೇತುವೆ ದಾಟಿದ ಕೂಡಲೇ ಸಿಗುವ ಗುಂಡಿಗಳು ಹೇಗಿವೆಯೆಂದರೆ, ಯಾವುದೇ ವಾಹನಗಳಿದ್ದರೂ ಅಲ್ಲಿ ನಿಧಾನಗೊಳಿಸಲೇಬೇಕು. ಇತ್ತೀಚೆಗಷ್ಟೇ ಲೋಡು ತುಂಬಿಕೊಂಡಿದ್ದ ಲಾರಿಯೊಂದು ಆಯ ತಪ್ಪಿ ಬೀಳುವ ಸ್ಥಿತಿಯಲ್ಲಿತ್ತು. ಮೂರು ದಿನ ಲಾರಿ ಅಲ್ಲೇ. ಆಗಲಂತೂ ಗುಂಡಿಯನ್ನು ತಪ್ಪಿಸುವಂತೆಯೇ ಇಲ್ಲ. ಎಲ್ಲ ವಾಹನಗಳೂ ಗುಂಡಿ ಹಾದುಕೊಂಡೇ ಹೋಗಬೇಕಿತ್ತು. ಸೋಮವಾರ (ಸೆ. 23) ದಂದು ತೇಪೆ ಕಾಮಗಾರಿ ಆರಂಭವಾಗಿತ್ತು. ಆ ಗುಂಡಿಗಳು ಅಲ್ಲಷ್ಟೇ ಇಲ್ಲ. ಅನಂತರ ಎಸ್‌ಎಂಎಸ್ ವರೆಗೂ ಗುಂಡಿಗಳೂ ಸಿಕ್ಕೇ ಸಿಗುತ್ತವೆ. ಅವುಗಳನ್ನು ದಾಟಿಕೊಂಡೇ ಸಾಗಬೇಕು. ಮಾನಸ ಹೊಟೇಲ್ ಎದುರು ಗುಂಡಿಗಳನ್ನು ತಪ್ಪಿಸಲು ಪ್ರಯತ್ನ ಪಡುವ ವಾಹನ ಸವಾರರು ಪಲ್ಟಿ ಹೊಡೆಯುವುದಂತೂ ಖಚಿತ. ಹಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಾಗಲೀ ಅಥವಾ ಕಾಮಗಾರಿ ನಿರ್ವಹಿಸಿದ ಕಂಪೆನಿಯವರಾಗಲೀ ನೋಡಿದ್ದೇ ಕಡಿಮೆ. ಇಲ್ಲಿಯೂ ಅಪಘಾತದ ಸಾಧ್ಯತೆ ದಿನೇದಿನೇ ಹೆಚ್ಚುತ್ತಿದೆ.
Related Articles
ಉಡುಪಿ: ಅಂಬಾಗಿಲು ಜಂಕ್ಷನ್‌ನಿಂದ ಪಾರಾಗಿ ಬಂದೆವೆಂದುಕೊಳ್ಳೋಣ. ಅನತಿ ದೂರದಲ್ಲೇ ಇರುವ ಸಂತೆಕಟ್ಟೆ ಸರ್ಕಲ್ ಬ್ಯಾರಿಕೇಡ್‌ಗಳಿಂದಲೇ ನಿಮ್ಮನ್ನು ಸ್ವಾಗತಿಸುತ್ತದೆ. ಆ ಬ್ಯಾರಿಕೇಡ್ ಮಧ್ಯೆ ಕಸರತ್ತು ಮಾಡಿಕೊಂಡು ದಾಟುವಾಗ ಎಚ್ಚರ ತಪ್ಪಿದರೆ ಮತ್ತೂಂದು ಬದಿಯಿಂದ ವಾಹನ ಬಂದು ಢಿಕ್ಕಿ ಹೊಡೆಯುವ ಸಂಭವವೇ ಹೆಚ್ಚು.
Advertisement
ಯಾಕೆಂದರೆ ಇಲ್ಲಿ ಹೆದ್ದಾರಿಯ ಬದಿಯಲ್ಲೇ ಎರಡೂ ಬದಿಯಿಂದ (ಬಲ ಮತ್ತು ಎಡ) ಸರ್ವಿಸ್ ರಸ್ತೆಯಲ್ಲಿ ವಾಹನಗಳು ಬಂದು ಇದೇ ಸರ್ಕಲ್ಲಿನಲ್ಲಿ ಸೇರುತ್ತವೆ. ಕುಂದಾಪುರದ ಕಡೆಯಿಂದ ಬರುವ ವಾಹನಗಳು ಒಂದೆಡೆಯಾದರೆ, ಕೆಮ್ಮಣ್ಣು ಮತ್ತಿತರ ಕಡೆಯಿಂದ ಉಡುಪಿ ಕಡೆಗೆ ಬರುವ ವಾಹನಗಳೂ ಸಂಧಿಸುವುದು ಇಲ್ಲಿಯೇ. ಇವೆಲ್ಲದರ ಕಾರಣದಿಂದ ಈ ಸರ್ಕಲ್ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಆಗಾಗ್ಗೆ ಆಗುವ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಕಾಣ ಸಿಗುವುದು ಕಡಿಮೆ.
ರವಿವಾರದ ಸಂತೆಯ ದಿನದಂದು ಹೇಳುವಂತಿಲ್ಲ. ಸರ್ವಿಸ್ ರಸ್ತೆ ಎರಡೂ ಸೇರಿದಂತೆ ಹೆದ್ದಾರಿಯಲ್ಲೂ ಬೆಳಗಿನ ಹೊತ್ತಿನಲ್ಲಿ ವಾಹನಗಳು ನಿಂತಿರುತ್ತವೆ. ಅದರ ಮಧ್ಯೆ ಹೆದ್ದಾರಿಯಲ್ಲಿ ಬರುವ ವಾಹನಗಳು ಜಾಗ ಮಾಡಿಕೊಂಡು ಸಾಗಬೇಕು. ಒಮ್ಮೊಮ್ಮೆ ಪೊಲೀಸರು ಇರುತ್ತಾರೆ. ಬಹಳಷ್ಟು ಬಾರಿ ಯಾರೂ ಇರುವುದಿಲ್ಲ. ಸದಾ ವಾಹನಗಳ ಒತ್ತಡದಿಂದ ಬಳಲುತ್ತಿರುವ ಸಂತೆಕಟ್ಟೆ ಸರ್ಕಲ್‌ಗೆ ಯಾವ ರೀತಿಯ ಪರ್ಯಾಯ ವ್ಯವಸ್ಥೆ ಮಾಡಬಹುದೆಂಬುದನ್ನು ಕಾಮಗಾರಿ ನಿರ್ವಹಿಸಿದ ಕಂಪೆನಿ ಗಮನಿಸಿಯೇ ಇಲ್ಲ.
ಕಲ್ಯಾಣಪುರ ಸಂತೆಕಟ್ಟೆ ಸೇತುವೆಯಿಂದ ತೆಕ್ಕಟ್ಟೆ ವರೆಗೆ ಸಂಭವಿಸಿರುವ ಅಪಘಾತಗಳ ವಿವರ
ಉದಯವಾಣಿ: ವಾಸ್ತವ ವರದಿ: ಉಡುಪಿ ಟೀಮ್