ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಕಟ್ಟಡವನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಭೂ ಅಭಿವೃದ್ಧಿ ಇಲಾಖೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೋಟಿಸ್ ನೀಡಿದ್ದಾರೆ. ದಿಲ್ಲಿಯ ಪ್ರಮುಖ ಪ್ರದೇಶದಲ್ಲಿರುವ ಹೆರಾಲ್ಡ್ ಹೌಸ್ ತೆರವು ಗೊಳಿಸುವಂತೆ ದಿಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಅಸೋಸಿಯೇಟೆಡ್ ಜರ್ನಲ್ಸ್ ಮೊರೆ ಹೋಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮಾಲೀಕತ್ವ ಯಂಗ್ ಇಂಡಿಯನ್ ಕಂಪನಿಗೆ ಅಸೋಸಿಯೇಟೆಡ್ ಜರ್ನಲ್ಸ್‌ನ ಷೇರುಗಳ ಮಾರಾಟವು ಅನು ಮಾನಾಸ್ಪದವಾಗಿದೆ. ಅಲ್ಲದೆ ಕೇಂದ್ರ ಸರಕಾರ ಎಜೆಎಲ್‌ಗೆ ಮುದ್ರಣ ಹಾಗೂ ಪ್ರಕಾಶನಕ್ಕಾಗಿ ನೀಡಿರುವ ಭೂಮಿಯಲ್ಲಿ ಅಂತಹ ಯಾವುದೇ ಕೆಲಸಗಳು ನಡೆಯುತ್ತಿಲ್ಲವಾದ್ದರಿಂದ ಭೂಮಿ ಯನ್ನು ಸರಕಾರಕ್ಕೆ ವಾಪಸ್ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ವಶಪಡಿಸಿ ಕೊಳ್ಳಲು ಭೂ ಅಭಿವೃದ್ಧಿ ಇಲಾಖೆ ಯತ್ನಿಸಿತಾದರೂ, ಎಜೆಎಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.