Advertisement
ಬೆಳಗ್ಗೆ ಸುಮಾರು 11.10ರ ವೇಳೆಗೆ ಇ.ಡಿ. ಕಚೇರಿ ತಲುಪಿದ ರಾಹುಲ್ ಗಾಂಧಿ ಅವರನ್ನು ಅಪರಾಹ್ನ 2.10ರ ವರೆಗೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಅನಂತರ ಊಟದ ವಿರಾಮದ ವೇಳೆ ಸರ್ ಗಂಗಾರಾಂ ಆಸ್ಪತ್ರೆಗೆ ತೆರಳಿದ ರಾಹುಲ್ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಸೋನಿಯಾ ಗಾಂಧಿ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಸುಮಾರು 3.30ರ ವೇಳೆಗೆ ಮತ್ತೆ ವಿಚಾರಣೆಗೆ ಹಾಜರಾದರು. ಹಣಕಾಸು ಅವ್ಯವಹಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 50ರಡಿ ರಾಹುಲ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ಸೋಮವಾರ ಇಡೀ ದಿನ ನಡೆದ ವಿಚಾರಣೆ ರಾತ್ರಿ 9ರ ವೇಳೆಗೆ ಮುಕ್ತಾಯವಾಯಿತು.
ಇದಕ್ಕೆ ಮುನ್ನ ಬೆಳಗ್ಗೆ ದಿಲ್ಲಿಯ ಅಕºರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಇ.ಡಿ. ಕಚೇರಿಯತ್ತ ಸಾಗುವಾಗ ರಾಹುಲ್‌ಗೆ ಪಕ್ಷದ ಪ್ರಮುಖ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಸಿಎಂ ಅಶೋಕ್ , ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಸಾಥ್ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕದಂತೆ ನಿರ್ಬಂಧಿಸುವ ಸಲುವಾಗಿ ಇ.ಡಿ. ಕಚೇರಿಗೆ ತೆರಳುವ ಮಾರ್ಗದಲ್ಲಿ ದಿಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು, ನಿಷೇಧಾಜ್ಞೆ ಜಾರಿ ಮಾಡಿದ್ದರು. ಆರ್‌ಎಎಫ್, ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
Related Articles
ರಾಹುಲ್ ಇ.ಡಿ. ಕಚೇರಿಗೆ ಹಾಜರಾಗುತ್ತಿದ್ದಂತೆ ದೇಶಾದ್ಯಂತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದರು. ಬೆಂಗಳೂರು, ರಾಂಚಿ, ಮುಂಬಯಿ, ಶಿಮ್ಲಾ, ಇಟಾನಗರ, ರೋಹrಕ್, ಜೈಪುರ, ಗುವಾಹಟಿ, ಅಹ್ಮದಾಬಾದ್ ಸಹಿತ ದೇಶದ ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲೂ ಕಾಂಗ್ರೆಸ್ ಶಕ್ತಿಪ್ರದರ್ಶನ ಮಾಡಿದೆ. ಹಲವೆಡೆ ಪ್ರತಿಭಟನಕಾರರನ್ನು ವಶಕ್ಕೆ ಪಡೆದು, ಅನಂತರ ಬಿಡುಗಡೆ ಮಾಡಲಾಗಿದೆ. ದಿಲ್ಲಿಯಲ್ಲಿ ಪ್ರತಿಭಟನನಿರತರಾಗಿದ್ದ ಹಿರಿಯ ನಾಯಕ ಚಿದಂಬರಂ ಅವರನ್ನು ಪೊಲೀಸರು ತಳ್ಳಿದ ಪರಿಣಾಮ ಅವರ ಎಡ ಪಕ್ಕೆಲುಬಿಗೆ ಗಾಯವಾಗಿದೆ.
Advertisement
ದಿನದ ಬೆಳವಣಿಗೆ01 ಬೆಳಗ್ಗೆ ದಿಲ್ಲಿಯ ಎಐಸಿಸಿ ಪ್ರಧಾನ ಕಚೇರಿಗೆ ರಾಹುಲ್ ಆಗಮನ
02 ಪಕ್ಷದ ಹಿರಿಯ ನಾಯಕರೊಂದಿಗೆ ಇ.ಡಿ. ಕಚೇರಿ ಕಡೆಗೆ ಪಯಣ
0311.10ರ ವೇಳೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರು
04 ಅಪರಾಹ್ನ 2.10ರ ವರೆಗೆ ಇ.ಡಿ. ಅಧಿಕಾರಿಗಳಿಂದ ವಿಚಾರಣೆ
05 ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ; ಹಲವರು ಪೊಲೀಸರ ವಶಕ್ಕೆ
06ಊಟದ ವಿರಾಮದ ವೇಳೆ ಸೋನಿಯಾ ಆರೋಗ್ಯ ವಿಚಾರಿಸಿದ ರಾಹುಲ್
07 ಅಪರಾಹ್ನ 3.30ರಿಂದ ರಾತ್ರಿ 9ರ ವರೆಗೆ ಮತ್ತೆ ವಿಚಾರಣೆಗೆ ಹಾಜರು ಏನೇನು ಪ್ರಶ್ನೆ?
ಪ್ರಕರಣದ ತನಿಖಾಧಿಕಾರಿಯಾದ ಇ.ಡಿ.ಯ ಸಹಾಯಕ ನಿರ್ದೇಶಕ ಮಟ್ಟದ ಅಧಿಕಾರಿಯು ರಾಹುಲ್‌ಗೆ ನ್ಯಾಶನಲ್ ಹೆರಾಲ್ಡ್ ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಹಾಕಿರುವ ಸಾಧ್ಯತೆಯಿದೆ. ಯಂಗ್ ಇಂಡಿಯನ್ ಕಂಪೆನಿಯ ಸ್ಥಾಪನೆ, ನ್ಯಾಶನಲ್ ಹೆರಾಲ್ಡ್ ಕಾರ್ಯಾಚರಣೆ, ಅಸೋಸಿಯೇಟೆಡ್ ಜರ್ನಲ್ಸ್ ಲಿ. (ಎಜೆಎಲ್)ಗೆ
ಕಾಂಗ್ರೆಸ್ ಪಕ್ಷ ಕೊಟ್ಟಿರುವ ಸಾಲದ ಮೊತ್ತ, ಸುದ್ದಿ ಮಾಧ್ಯಮದೊಳಗಿನ ಹಣಕಾಸು ವರ್ಗಾವಣೆ ಸೇರಿದಂತೆ ಸರಣಿ ಪ್ರಶ್ನೆಗಳನ್ನು ಕೇಳಿರಬಹುದು ಎಂದು ಮೂಲಗಳು ತಿಳಿಸಿವೆ. ಜೂ. 23ರಂದು ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ವಿಚಾರಣೆಗೆ ಒಳಪಡಿಸಲಿದೆ.