Advertisement

National Film Award: ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪ್ರದಾನ

02:17 AM Oct 09, 2024 | Team Udayavani |

ಹೊಸದಿಲ್ಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. ಈ ಬಾರಿ ಕನ್ನಡಕ್ಕೆ 7 ಪ್ರಶಸ್ತಿಗಳು ಪ್ರಾಪ್ತವಾಗಿದ್ದವು. “ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್‌ ಶೆಟ್ಟಿ “ಅತ್ಯುತ್ತಮ ನಟ’ ಪ್ರಶಸ್ತಿಯನ್ನು ರಾಷ್ಟ್ರಪತಿ ಮುರ್ಮು ಅವರಿಂದ ಸ್ವೀಕರಿಸಿದರು.

Advertisement

ಇದಲ್ಲದೆ “ಕಾಂತಾರ’ ಸಿನೆಮಾಕ್ಕಾಗಿ “ಅತ್ಯುತ್ತಮ ಮನೋರಂಜನೆ ಸಿನೆಮಾ’, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಸಿನೆಮಾ’ ಪ್ರಶಸ್ತಿಯನ್ನು “ಕೆಜಿಎಫ್‌ -2′, ಸಾಹಸ ನಿರ್ದೇಶನಕ್ಕಾಗಿ ಇರುವ ಪ್ರಶಸ್ತಿ “ಕೆಜಿಎಫ್‌ -2′, “ಮಧ್ಯಂತರ’ ಸಿನೆಮಾಕ್ಕಾಗಿ “ಅತ್ಯುತ್ತಮ ಸಂಕಲನ’ ಪ್ರಶಸ್ತಿಯನ್ನು ಸುರೇಶ್‌ ಅರಸ್‌, ನಿರ್ದೇಶಕರ ಚೊಚ್ಚಲ ಸಿನೆಮಾಕ್ಕಾಗಿನ ಪ್ರಶಸ್ತಿಯನ್ನು ಮಧ್ಯಂತರ’ ಸಿನೆಮಾ ನಿರ್ದೇಶಕ ದಿನೇಶ್‌ ಶೆಣೈ, ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ’ ರಂಗ ವೈಭೋಗ’ ಸಿನೆಮಾಕ್ಕೆ ನೀಡಿ ಗೌರವಿಸಲಾಯಿತು.

ಜತೆಗೆ ಈ ಬಾರಿಯ ಪ್ರತಿಷ್ಠಿತ “ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ’ಯನ್ನು ಹಿರಿಯ ನಟ ಮಿಥುನ್‌ ಚಕ್ರವರ್ತಿಯವರಿಗೂ ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ವಿತರಿಸಿದರು.


ಜನಪ್ರಿಯ ಚಲನಚಿತ್ರಗಳಾದ ಕಾಂತಾರ ಹಾಗೂ ಶ್ರೇಷ್ಠ ಕನ್ನಡ ಚಿತ್ರ ಕೆಜಿಎಫ್‌ -2 ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ ವಿಜಯ್‌ ಕಿರಗಂದೂರು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪ್ರಶಸ್ತಿ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next