Advertisement

ಕುಷ್ಟಗಿ: ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ

03:09 PM Dec 23, 2021 | Team Udayavani |

ಕುಷ್ಟಗಿ: ಯಾವೂದೇ ಪಕ್ಷಗಳ ಸರ್ಕಾರಗಳು ಬಂದರೂ, ಅನೇಕ ಹಂತಗಳ ಕೃಷಿಕರ ಸಂಕೀರ್ಣ ಸಮಸ್ಯೆಗಳನ್ನು ನೀಗಿಸಲು ಸಾಧ್ಯವಾಗದೇ, ಸೋಲು ಅನುಭವಿಸಿವೆ ಎಂದು ಚಿಂತಕ ರವಿತೇಜ ಅಬ್ಬಿಗೇರಿ ಕಳವಳ ವ್ಯಕ್ತಪಡಿಸಿದರು.

Advertisement

ಇಲ್ಲಿನ ಕೃಷಿ ಇಲಾಖೆಯ ಸಭಾಂಗಣದಲ್ಲಿ 2020-21ನೇ ಸಾಲಿನ ಆತ್ಮ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿನ ವಸ್ತು ಸ್ಥಿತಿ, ವಾತವರಣ, ಮಾರುಕಟ್ಟೆಯ ಸ್ಥಿತಿಗತಿ, ರಾಜಕೀಯ ನಿಲವು, ಧೋರಣೆ ಬೇರೆ ಬೇರೆಯಾಗಿವೆ. ಹಿನ್ನೆಲೆಯಲ್ಲಿ ಸಮನ್ವಯತೆ ಸಾಧಿಸಲು ಅಸಾದ್ಯವಾಗಿದ್ದು, ರೈತರ ಸಮಸ್ಯೆಗಳನ್ನು ಸ್ಪಂಧಿಸಲು ರಾಜಕೀಯ ಪಕ್ಷಗಳು ಹಿಂದು ಮುಂದು ಮಾಡುತ್ತಿವೆ. ಹೀಗಾಗಿ ಇಲ್ಲಿಯವರೆಗೂ ರೈತರ ಬದುಕು ಹಸನುಗೊಳಿಸಲು ಸಾದ್ಯವಾಗಿಲ್ಲ. ಕೃಷಿ ವಲಯದಲ್ಲಿನ ಸವಾಲುಗಳು,  ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಇಚ್ಛಾಶಕ್ತಿಯಾಗಿ ಉಳಿದಿಲ್ಲ ಎಂದರು. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ಭೇಷರತ್ತಾಗಿ ಹಿಂಪಡೆದಿರುವುದು ಇದಕ್ಕೆ ನಿದರ್ಶನವಾಗಿದೆ. ಈ ಕೃಷಿ ಮಸೂದೆಗಳು ಕಾನೂನು ಆಗಬಾರದು ಎಂದು ರೈತರು ಇಡೀ ವರ್ಷ ದೆಹಲಿಯಲ್ಲಿ ಚಾರಿತ್ರಿಕ ಹೋರಾಟ ಮಾಡಬೇಕಾಯಿತು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಮಾತನಾಡಿ,  ಮನುಷ್ಯ ಸತ್ತರೆ ಮಣ್ಣಿನಲ್ಲಿ ಹೂತು ಹಾಕಿದರೆ ಜೀವನ ಕೊನೆಯಾಗುತ್ತಿದೆ. ಆದರೆ ಮಣ್ಣು ಸತ್ತರೆ ಮನುಕುಲವೇ ಕೊನೆಯಾಗಲಿದೆ ಎಂದ ಅವರು, ಆದಷ್ಟು ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ರೈತ ಸಂಘದ ಮಹಿಳಾ ಘಟಕದ ಆದ್ಯಕ್ಷೆ ಮಹಾಂತಮ್ಮ ಪಾಟೀಲ, ಶಿವಪ್ಪ ತಳಗಡೆ, ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ತಾಂತ್ರಿಕ ಸಹಾಯಕ  ಬಾಲಪ್ಪ ಜಲಗೇರಿ,ಶೇಖರಯ್ಯ ಹಿರೇಮಠ, ಪ್ರಕಾಶ ತಾರಿವಾಳ ಆತ್ಮ ಯೋಜನೆ ವ್ಯವಸ್ಥಾಪಕ ಬಸವರಾಜ ಪಾಟೀಲ ಮತ್ತೀತರಿದ್ದರು.

Advertisement

ಪ್ರಸ್ತಾವಿಕವಾಗಿ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಮಾತನಾಡಿ ಪ್ರತಿಯೊಬ್ಬರು ಊಟ ಮಾಡುವ ಮುನ್ನ ಅನ್ನದಾತರನ್ನು ಸ್ಮರಿಸಿ ಊಟ ಮಾಡಬೇಕಿದೆ ಎಂದರು.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಹನುಮಸಾಗರ ರೈತ ಸಿರಾಜುದ್ದೀನ ಮೂಲಿಮನಿ, ಕುಷ್ಟಗಿ ರೈತ ರಮೇಶ ಕೊನಸಾಗರ, ಹಂಚಿನಾಳದ ರೈತ ಈಶಪ್ಪ ಮೆಳ್ಳಿ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next