Advertisement

ಅಪಸ್ಮಾರ ಜಾಗೃತಿ ಅಗತ್ಯ

09:58 AM Nov 18, 2019 | mahesh |

ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ ಅರಿವಿಗೆ ಬಂದು ಸೂಕ್ತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಂಡರೆ, ಇನ್ನು ಕೆಲವರು ಅರಿವಿಲ್ಲದೆ ನಿರಂತರ ಸಮಸ್ಯೆಯಿಂದ ಬಳಲುತ್ತಾರೆ. ಅಪಸ್ಮಾರ ಅಥವಾ ಮೂಛೆìರೋಗ ಇದರಲ್ಲೊಂದು. ಈ ಹಿನ್ನೆಲೆಯಲ್ಲಿ ಅಪಸ್ಮಾರ ವಿರುದ್ಧ ಅರಿವಿಗಾಗಿ ರಾಷ್ಟ್ರೀಯ ಅಪಸ್ಮಾರ ದಿನ ಆಚರಿಸಲಾಗುತ್ತದೆ. ಇದರ ಮಹತ್ವ, ಜಾಗೃತಿ ಕುರಿತ ವಿಚಾರಗಳು ಇಲ್ಲಿವೆ.

Advertisement

ಅಪಸ್ಮಾರ ಎಂದರೇನು ?
ವಾಸ್ತವದಲ್ಲಿ ಅಪಸ್ಮಾರ ಒಂದು ಪ್ರತ್ಯೇಕ ರೋಗವೇ ಅಲ್ಲ. ಹೊರತಾಗಿ ಇದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯ ಲಕ್ಷಣವಾಗಿದ್ದು, ಇಂಗ್ಲಿಷ್‌ನಲ್ಲಿ ಎಪಿಲೆಪ್ಸಿ ಎಂದು ಕರೆಯುತ್ತಾರೆ. ಇದು ಮೆದುಳಿನ ನರಗಳ ಚಟುವಟಿಕೆಯಲ್ಲಿ ಉಂಟಾಗುವ ಏರುಪೇರು ಅಥವಾ ಅವ್ಯವಸ್ಥೆಯಿಂದ ಆಗುವ ಒಂದು ತೊಂದರೆಯಾಗಿದ್ದು, ಇದನ್ನು ಮೂರ್ಛೆರೋಗ ಎಂದು ಕರೆಯುತ್ತಾರೆ.

50 ದಶಲಕ್ಷ
ವಿಶ್ವಾದ್ಯಂತ ಸುಮಾರು 50 ದಶಲಕ್ಷ ಮಂದಿ ಅಪಸ್ಮಾರ ಕಾಯಿಲೆಗೆ ತುತ್ತಾಗುತ್ತಿದ್ದು, ಇದು ಜಾಗತಿಕ ಮಟ್ಟದಲ್ಲಿ ಸಾಮಾನ್ಯವಾದ ನರವೈಜ್ಞಾನಿಕ ಕಾಯಿಲೆಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೇ ಹೆಚ್ಚು ಅಪಸ್ಮಾರದಿಂದ ಬಳಲುತ್ತಿರುವ ಶೇ. 80ರಷ್ಟು ಜನರು ಕಡಿಮೆ-ಮಧ್ಯಮ ಆದಾಯ ದೇಶಗಳಲ್ಲಿ ವಾಸಿಸುತ್ತಿದ್ದಾರೆ.

2ನೇ ಸ್ಥಾನ
ವಿಶ್ವಾದ್ಯಂತ ಜನರನ್ನು ಅತ್ಯಂತ ಸಾಮಾನ್ಯವಾಗಿ ಕಾಡುವ ನರ ವೈಜ್ಞಾನಿಕ ರೋಗಗಳಲ್ಲಿ ಅಪಸ್ಮಾರ ಎರಡನೇ ಸ್ಥಾನದಲ್ಲಿದೆ.

ಪರಿಹಾರವೇನು ?
ಕೆಲವೊಂದು ಗಿಡಮೂಲಿಕೆಗಳು ಮೆಗ್ನಿಸಿಯಮ್‌ ಪೂರಕ ಆಹಾರಗಳು, ಬಿ6 ಜೀವ ಸತ್ವ ವಿಟಮಿನ್‌ ಆಹಾರಗಳು, ವಿಟಮಿನ್‌ ಇ, ಬೂದಿ ಅಥವಾ ಕರಿ ಕುಂಬಳಕಾಯಿ, ವಿಟಮಿನ್‌ ಡಿ, ಫೋಲಿಕ್‌ ಆಮ್ಲ, ತುಳಸಿ ಮತ್ತು ಎಪ್ಸಮ್‌ ಉಪ್ಪು ಅಂಶಗಳಿರುವ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು.

Advertisement

100ರಲ್ಲಿ ಓರ್ವನಿಗೆ ಸಮಸ್ಯೆ
ವಿಶ್ವ ಸಂಸ್ಥೆಯ ಮಾಹಿತಿ ಪ್ರಕಾರ ಪ್ರತಿ ನೂರು ಜನರಲ್ಲಿ ಓರ್ವ ಮೂಛೆì ರೋಗದಿಂದ ಬಳಲುತ್ತಿದ್ದು, ಎಲ್ಲ ವಯೋಮಾನದವರಿಗೂ ಲಿಂಗ ಭೇದವಿಲ್ಲದೇ ಈ ಕಾಯಿಲೆ ಬರಬಹುದು.

3/4 ಭಾಗ
ಕಡಿಮೆ ಆದಾಯದ ದೇಶಗಳಲ್ಲಿ ಅಪಸ್ಮಾರದಿಂದ ಬಳಲುತ್ತಿರುವ ನಾಲ್ಕನೇ ಮೂರು ಭಾಗದಷ್ಟು ಜನರಿಗೆ ಅಗತ್ಯವಿರುವ ಚಿಕಿತ್ಸೆ ದೊರೆಯುತ್ತಿಲ್ಲ.

ರೋಗ ಲಕ್ಷಣ
· ತಲೆನೋವು
· ಕಣ್ಣುಗಳು ಮಂಜಾಗುವುದು
· ಸಂವೇದನೆಗಳಲ್ಲಿ ಬದಲಾವಣೆ
· ತಲೆ ತಿರುಗುವಿಕೆ ಮತ್ತು ವಾಕರಿಕೆ
· ಆತಂಕದ ಭಾವನೆಗಳು
· ಮರಗಟ್ಟುವಿಕೆ
· ಅರಿವಿಲ್ಲದಂತಾಗುವುದು
· ಗೊಂದಲ ಮತ್ತು ಸುಪ್ತಾವಸ್ಥೆ
·ಭ್ರಮೆಗಳು
· ಅನಿಯಂತ್ರಿತ ಚಲನವಲನ
· ಸೆಳೆತ · ಅತಿಯಾಗಿ ಬೆವರುವಿಕೆ
· ಉಸಿರಾಟದ ತೊಂದರೆ

ಕಾರಣಗಳೇನು?
· ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೇ ಇರುವುದು
· ಮೆದುಳಿನಲ್ಲಿ ಗಡ್ಡೆ ಬೆಳೆಯುವುದು.
· ಮೆದುಳಿಗೆ ನಂಜು ಸೋಕಿದ್ದರೆ
· ಮೆದುಳಿನ ಅಂಗಾಂಶಕ್ಕೆ ಗಾಯವಾದಾಗ
· ದೇಹದಲ್ಲಿ ಲವಣಾಂಶಗಳ ಮಟ್ಟದಲ್ಲಿ ಏರುಪೇರಾದಾಗ
· ಅತಿಯಾಗಿ ಜ್ವರ ಬಂದಾಗ ಇತ್ಯಾದಿ.
· ಆದರೆ ಜಾಗತಿಕವಾಗಿ ಶೇ. 50ರಷ್ಟು ಪ್ರಕರಣಗಳಲ್ಲಿ ಈ ರೋಗಕ್ಕೆ ಕಾರಣ ಇನ್ನೂ ತಿಳಿದಿಲ್ಲ.

1 ಕೋಟಿ ಮಂದಿಗೆ ಅಪಸ್ಮಾರ
ದೇಶದಲ್ಲಿ ಒಂದು ಅಂದಾಜಿನ ಪ್ರಕಾರ 1ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಗ್ರಾಮೀಣರಲ್ಲಿ ಶೇ. 1.9ರಷ್ಟು ರೋಗ
ಗ್ರಾಮೀಣ ಪ್ರದೇಶದ ಶೇ.1.9 ರಷ್ಟು ಪ್ರಮಾಣದ ಜನರಲ್ಲಿ ಈ ರೋಗ ಕಂಡು ಬರುತ್ತಿದೆ.
ನಗರಗಳಲ್ಲಿ ಶೇ. 0.6ರಷ್ಟು ರೋಗ
ನಗರಗಳಲ್ಲಿ ಶೇ. 0.6ರಷ್ಟು ಜನರಿಗೆ ಮೂರ್ಛೆ ರೋಗವಿದೆ.

ಗಿಡಮೂಲಿಕೆ ಚಿಕಿತ್ಸೆ
ಬಾಕೊಪಾ ಎನ್ನುವ ಗಿಡಮೂಲಿಕೆಯು ಅಪಸ್ಮಾರ ಅಥವಾ ಮೂಛೆì ರೋಗದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆಯುರ್ವೇದ ಔಷಧದಲ್ಲಿ ಬಳಸಲಾಗುವ ಅತ್ಯುತ್ತಮ ಗಿಡಮೂಲಿಕೆ ಇದು.

ತಾರತಮ್ಯ
ವಿಶ್ವಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಪ್ರಪಂಚದ ಅನೇಕ ಭಾಗಗಳಲ್ಲಿ ಅಪಸ್ಮಾರ ರೋಗಕ್ಕೆ ತುತ್ತಾದವರು ಮತ್ತು ಅವರ ಕುಟುಂಬದವರು ಕಳಂಕ ಮತ್ತು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಗ್ರಾಮೀಣರು ಇದಕ್ಕೆ ಅತಿಮಾನುಷ ಶಕ್ತಿಗಳು ಕಾರಣ ಎಂದು ವೈದ್ಯಕೀಯ ಚಿಕಿತ್ಸೆ ನೀಡದೆ ಇರುವುದೂ ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ.

ಅಸಡ್ಡೆ ಬೇಡ
ಪದೇ ಪದೇ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುತ್ತದೆ. ಹಾಗಾಗಿ ಅಸಡ್ಡೆ ಮಾಡದೆ ತತ್‌ಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಈ ಕಾಯಿಲೆ ನಿವಾರಣೆಗೆ ಕಿಟೋಜೆನಿಕ್‌ ಆಹಾರ ಪದ್ಧತಿ, ಮೆದುಳಿನ ಶಸ್ತ್ರ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿವೆ.

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next